Thursday, July 30, 2026
Thursday, July 30, 2026

ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಒಕ್ಕೂಟದ ಉಡುಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಒಕ್ಕೂಟದ ಉಡುಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

Date:

ಉಡುಪಿ, ನ.9: ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಒಕ್ಕೂಟ ಇದರ ಉಡುಪಿ ಜಿಲ್ಲಾ ಕಾರ್ಯಕರಿಣಿ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಡಾ. ಪ್ರಶಾಂತ್‌ ಶೆಟ್ಟಿ ದಂಡತೀರ್ಥ ಸಂಸ್ಥೆ ಕಾಪು ಹಾಗೂ ಅಧ್ಯಕ್ಷರನ್ನಾಗಿ ತ್ರಿಷಾ ಶಿಕ್ಷಣ ಸಂಸ್ಥೆಯ ಗೋಪಾಲಕೃಷ್ಣ ಭಟ್‌ ಅವರನ್ನು ಉಡುಪಿ ಓಸಿಯನ್‌ ಪರ್ಲ್ ನಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ನಿರ್ಣಯಿಸಲಾಯಿತು. ಖಜಾಂಚಿಯಾಗಿ ಜ್ಞಾನಸುಧಾ ಸಂಸ್ಥೆಯ ಡಾ. ಸುಧಾಕರ್‌ ಶೆಟ್ಟಿ, ಕಾರ್ಯದರ್ಶಿಯಾಗಿ ಕ್ರಿಯೇಟಿವ್‌ ಸಂಸ್ಥೆಯ ಅಶ್ವತ್‌ ಎಸ್‌. ಎಲ್‌, ಸಹಕಾರ್ಯದರ್ಶಿಗಳಾಗಿ ಕ್ರಿಯೇಟಿವ್‌ ಸಂಸ್ಥೆಯ ಡಾ. ಗಣನಾಥ್‌ ಶೆಟ್ಟಿ, ಸುಜ್ಞಾನ ಸಂಸ್ಥೆಯ ಪ್ರತಾಪ್‌ ಚಂದ್ರ ಶೆಟ್ಟಿ, ಉಪಾಧ್ಯಕ್ಷರುಗಳನ್ನಾಗಿ ಸುಜ್ಞಾನ ಸಂಸ್ಥೆಯ ರಮೇಶ್‌ ಶೆಟ್ಟಿ, ಎಕ್ಸಲೆಂಟ್‌ ಕುಂದಾಪುರದ ದೀಪಾ ಎಂ. ಹೆಗಡೆ, ಅಮೃತ ಭಾರತಿ ಹೆಬ್ರಿಯ ಸತೀಶ್‌ ಪೈ ಹಾಗೂ ರಾಜೇಶ್ವರಿ ಸಂಸ್ಥೆ ಕಾರ್ಕಳದ ದೇವಿಪ್ರಸಾದ್‌ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯ ಸಮಿತಿಯ ಗೌರವ ಉಪಾಧ್ಯಕ್ಷರಾದ ರಾಧಕೃಷ್ಣ ಶೆಣೈ, ಫಾದರ್‌ ವಿನ್ಸೆಂಟ್‌ ಕ್ರಾಸ್ತ, ಪ್ರೋ. ಆಲ್ಬಂಟ್‌ ರೋಡ್ರಿಗಸ್‌ (ದಂಡತೀರ್ಥ ಸಂಸ್ಥೆ) ನಾಗರಾಜ್‌ ಶೆಟ್ಟಿ (ಎಸ್.ಆರ್ ಸಂಸ್ಥೆ ಹೆಬ್ರಿ), ಕೆ.ಎಂ.ಇ.ಎಸ್ ಸಂಸ್ಥೆಯ ಇಮ್ತಿಯಾಜ್‌ ಭಾಗಿಯಾಗಿದ್ದರು. ಸಮಿತಿಯ ನೂತನ ಪದಾಧಿಕಾರಿಗಳನ್ನು ಕೆ.ಯು.ಪಿ.ಎಂ.ಎ ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ. ಮೋಹನ್‌ ಆಳ್ವ ಹಾಗೂ ಕಾರ್ಯದರ್ಶಿ ನರೇಂದ್ರ ನಾಯಕ್‌ ಅಭಿನಂದಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ, ಜು.29: ಲೋಕಸಭೆ ಬುಧವಾರ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ)...

ಶಾಸಕ ಯಶ್ಪಾಲ್ ಸುವರ್ಣ ಅವರಿಗೆ ನೋಟೀಸ್

ಉಡುಪಿ, ಜು.29: ರಾಹುಲ್ ಗಾಂಧಿ ವಿರುದ್ಧ ಶಾಸಕ ಯಶ್ಪಾಲ್ ಸುವರ್ಣ ಅವರು...

ಹಡಪದ ಅಪ್ಪಣ್ಣ ರವರ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪ: ಮಂಜುನಾಥ ಪೂಜಾರಿ

ಉಡುಪಿ, ಜು.29: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ...

ಚಾತುರ್ಮಾಸ ಸಾಧನೆಗೆ ಶ್ರೇಷ್ಠ ಕಾಲ: ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು

ಬಾರಕೂರು, ಜು.೨೯: ಶ್ರಾವಣದಿಂದ ಕಾರ್ತಿಕ ಮಾಸದವರೆಗಿನ ನಾಲ್ಕು ತಿಂಗಳ ಕಾಲ ಭಗವಂತ...
error: Content is protected !!