Sunday, September 13, 2026
Sunday, September 13, 2026

ಬೆಂಗಳೂರು ಕೌಶಲ್ಯ ಶೃಂಗಸಭೆ-2025 ರಲ್ಲಿ ಉಡುಪಿ ಜಿಲ್ಲೆಯ ಸಂಜೀವಿನಿ ಉತ್ಪನ್ನದ ಮಳಿಗೆ

ಬೆಂಗಳೂರು ಕೌಶಲ್ಯ ಶೃಂಗಸಭೆ-2025 ರಲ್ಲಿ ಉಡುಪಿ ಜಿಲ್ಲೆಯ ಸಂಜೀವಿನಿ ಉತ್ಪನ್ನದ ಮಳಿಗೆ

Date:

ಉಡುಪಿ, ನ.6: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ “ಬೆಂಗಳೂರು ಕೌಶಲ್ಯ ಶೃಂಗಸಭೆ-2025’ರ ಕಾರ್ಯಕ್ರಮವನ್ನು ದಿನಾಂಕ 04.11.2025 ರಿಂದ 06.11.2025 ರ ವರೆಗೆ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ಆಯೋಜಿಸಿದ್ದು. ಸಂಜೀವಿನಿ ಸ್ವ-ಸಹಾಯ ಗುಂಪುಗಳು ಉತ್ಪಾದಿಸುತ್ತಿರುವ ಉತ್ಪನ್ನಗಳನ್ನು ಕಾರ್ಪೊರೇಟ್ ಉಡುಗೊರೆಗಳಾಗಿ ಬಳಸುವ ಬಗ್ಗೆ ಜಾಗೃತಿ ಹಾಗೂ ಪ್ರಚಾರ ಮಾಡುವ ಉದ್ದೇಶದಿಂದ ವಸ್ತು ಪ್ರದರ್ಶನದ ಮಳಿಗೆ ಸ್ಥಾಪಿಸಿದ್ದು ಉಡುಪಿ, ಚಿಕ್ಕಮಗಳೂರು, ರಾಮನಗರ, ಮೈಸೂರು, ಶಿವಮೊಗ್ಗ, ಬಾಗಲಕೋಟೆ ಹಾಗೂ ಬೀದರ್ ಜಿಲ್ಲೆಯ ಸಂಜೀವಿನಿ ಮಹಿಳಾ ಉದ್ಯಮಿದಾರರಿಗೆ ಅವಕಾಶ ಕಲ್ಪಿಸಿದ್ದು ಈ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯತ್ ನ ಅಂಕಿತಾ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳಾ ಉದ್ಯಮಿರಾದ ಶ್ಯಾಮಲಾ ಇವರು ಭಾಗವಹಿಸಿರುತ್ತಾರೆ ಹಾಗೂ ಉತ್ತಮ ಗುಣಮಟ್ಟದ ಕಾರ್ಪೋರೇಟ್ ಉಡುಗೊರೆಗೆ ಸಂಬಂಧಿಸಿದ ಯಕ್ಷಗಾನ ಕಿರೀಟ, ಬಿದಿರಿನ ಬುಟ್ಟಿ, ಜೂಟ್ ಬ್ಯಾಗ್, ತೆಂಗಿನ ಚಿಪ್ಪಿನ ಕಲಾಕೃತಿ, ಇಂಡೋರ್ ಪ್ಲಾಂಟ್, ಮಣ್ಣಿನ ಕಲಾಕೃತಿ, ಕೃತಕ ಆಭರಣ ಹಾಗೂ ಇತ್ಯಾದಿ ಉಡುಗೊರೆಯ ವಸ್ತುಗಳನ್ನು ಪ್ರದರ್ಶಿಸಿರುತ್ತಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೂರೂರು-ಹಿರ್ಗಾನ: 3 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ; ಭಕ್ತರಿಂದ ರಜತ ಕಿರೀಟ ಹಾಗೂ ತ್ರಿಶೂಲ ಸಮರ್ಪಣೆ

ಹಿರ್ಗಾನ, ಸೆ.12: ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿ ಮೂರೂರು ಹಿರ್ಗಾನ ಇಲ್ಲಿನ...

ಸೆ. 16: ಡಿ ಮಾರ್ಟ್ ನಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಉಡುಪಿ, ಸೆ.11: ನಗರದ ಕಲ್ಸಂಕ ಜಂಕ್ಷನ್ ಬಳಿಯ ಭಾರತ್ ಪ್ರೆಸ್ ಎದುರುಗಡೆಯ...

ಉಡುಪಿ ರೆಡ್ ಕ್ರಾಸಿಗೆ ರಾಷ್ಟ್ರೀಯ ಸಮಿತಿ ಸದಸ್ಯರ ಭೇಟಿ

ಉಡುಪಿ, ಸೆ.11: ಭಾರತೀಯ ರೆಡ್ ಕ್ರಾಸ್ ಸೊಸೈಟಿ ನವದೆಹಲಿ ಇಲ್ಲಿನ ಆಡಳಿತ...
error: Content is protected !!