Sunday, April 26, 2026
Sunday, April 26, 2026

ಮುತ್ತು ಕೃಷಿ ಉದ್ಯಮ ಮತ್ತಷ್ಟು ವಿಸ್ತರಿಸಬೇಕು: ಕೋಟ ಶ್ರೀನಿವಾಸ ಪೂಜಾರಿ

ಮುತ್ತು ಕೃಷಿ ಉದ್ಯಮ ಮತ್ತಷ್ಟು ವಿಸ್ತರಿಸಬೇಕು: ಕೋಟ ಶ್ರೀನಿವಾಸ ಪೂಜಾರಿ

Date:

ಕೋಟ, ಅ.21: ಮುತ್ತು ಕೃಷಿ ಉದ್ಯಮ ಮತ್ತಷ್ಟು ವಿಸ್ತರಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸಾಸ್ತಾನದಲ್ಲಿ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆ ಗೋವಾ, ಜಲಾನಯನ ಅಭಿವೃದ್ಧಿ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ್ ಉಡುಪಿ, ಕೃಷಿ ಇಲಾಖೆ ಉಡುಪಿ, ಮೀನುಗಾರಿಕೆ ಇಲಾಖೆ ಉಡುಪಿ, ಭಾ.ಕೃ.ಅ.ಪ. ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಗೀತಾನಂದ ಫೌಂಡೇಶನ್ ಮಣೂರು, ಅರಬ್ಬೀ ಸಮುದ್ರ ಮೀನುಗಾರಿಕೆ ನಿರ್ವಹಣೆ ಸಮನ್ವಯ ಸಮಿತಿ, ಸ್ಕೋಡವೆಸ್ ಸಂಸ್ಥೆ, ಅಯುಶ್ಮಾನಭವ ಸಂಸ್ಥೆ ಉಡುಪಿ, ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ. ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಜಂಟಿಯಾಗಿ ಆಯೋಜಿಸಿರುವ ಮುತ್ತು ಕೃಷಿ ಮಾಹಿತಿ ಕಾರ್ಯಾಗಾರ ಮನೆ ಮನೆಯಲ್ಲೂ ಮುತ್ತು ಕೃಷಿ ಹಾಗೂ ಯುಕೆ ಪರ್ಲ್ ಮಾಟ್೯ ಆಭರಣ ಮಳಿಗೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಶಿರಸಿ ಸ್ಕೂಡ್ ವೆಸ್ ಸಂಸ್ಥೆ ಅಧಿಕಾರಿ ನಾರಾಯಣ ಹೆಗ್ಡೆ ವಹಿಸಿದ್ದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಕಾಂತಾರ ಚಿತ್ರದ ನಟ ರಕ್ಷಿತ್ ರಾಮಚಂದ್ರ ಶೆಟ್ಟಿ, ರಾಜ್ಯ ಯಶಸ್ವಿ ಮುತ್ತು ಕೃಷಿಕರಾದ ಸುಶ್ಮಿತಾ ಕೋಡಿ, ಪ್ರಜ್ವಲ್ ಎಸ್ ಆನೇಕಲ್ ಬೆಂಗಳೂರು , ವಿಜಯ್ ಕೋಲಾರ, ನವೀನ್ ಚಂದ್ರ ಜೈನ್ ಸುಳ್ಯ, ಪುರುಷೋತ್ತಮ್ ಕುಮಟಾ ಯಾಣ ಇವರುಗಳನ್ನು ಸನ್ಮಾನಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಹಿರಿಯ ವಿಜ್ಞಾನಿಗಳಾದ ಡಾ.ಧನಂಜಯ್ ಬಿ., ಡಾ. ಸದಾನಂದ ಆಚಾರ್ಯ ಜಿ, ಕೋಟ ಪಡುಕರೆ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್ ನಾಯಕ್, ಜ್ಯೋತಿ ಉದಯ ಪೂಜಾರಿ, ಕೋಡಿ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿರ್ದೇಶಕ ಸುದಿನ ಕೋಡಿ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟ್ರಂಪ್ ಭೋಜನಕೂಟದಲ್ಲಿ ಗುಂಡು ಹಾರಾಟ; ಅಮೆರಿಕ ಅಧ್ಯಕ್ಷ ಸ್ಥಳಾಂತರ

ಯು.ಬಿ.ಎನ್.ಡಿ., ಏ.26: ವಾಷಿಂಗ್ಟನ್ ಹಿಲ್ಟನ್‌ನ ಲಾಬಿಯಲ್ಲಿ ಶಂಕಿತ ಗುಂಡು ಹಾರಾಟದ ವರದಿಯಾದ...

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಬ್ಯಾಂಕಿಂಗ್ ಪರವಾನಗಿಯನ್ನು ದ್ದುಗೊಳಿಸಿದ ಆರ್.ಬಿ.ಐ

ನವದೆಹಲಿ, ಏ.26: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ನೀಡಲಾದ ಬ್ಯಾಂಕಿಂಗ್ ಪರವಾನಗಿಯನ್ನು...

ನೀತಿ ಆಯೋಗದ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಲಾಹಿರಿ ನೇಮಕ

ನವದೆಹಲಿ, ಏ.26: ಸರ್ಕಾರವು ನೀತಿ ಆಯೋಗವನ್ನು ಪುನರ್ರಚಿಸಿದೆ. ಅರ್ಥಶಾಸ್ತ್ರಜ್ಞ ಅಶೋಕ್ ಕುಮಾರ್...
error: Content is protected !!