Sunday, April 26, 2026
Sunday, April 26, 2026

ಬೆಳೆಹಾನಿಗೆ ಪರಿಹಾರ

ಬೆಳೆಹಾನಿಗೆ ಪರಿಹಾರ

Date:

ಬೆಂಗಳೂರು, ಅ.21: ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೀಡಾಗಿರುವ 12.82 ಲಕ್ಷ ಹೆಕ್ಟೇರ್‌ಗಳಷ್ಟು ಕೃಷಿ ಮತ್ತು ತೋಟಗಾರಿಕಾ ಬೆಳೆಗೆ ಹೆಚ್ಚಿನ ಪರಿಹಾರ ವಿತರಣೆಗೆ ನಿರ್ಧರಿಸಲಾಗಿದೆ.

ಮಳೆಯಾಶ್ರಿತ ಬೆಳೆಗೆ ಎಸ್‌ಡಿಆರ್‌ಎಫ್‌/ ಎನ್‌ಡಿಆರ್‌ಎಫ್‌ ಮಾನದಂಡಗಳ ಪ್ರಕಾರ ಪ್ರತಿ ಹೆಕ್ಟೇರ್‌ಗೆ 8,500 ರೂ.ಪರಿಹಾರ ಧನದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ.8,500 ಪರಿಹಾರ ಸೇರಿ ಒಟ್ಟು 17,000 ರೂ., ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ.17,000 ಪರಿಹಾರ ಧನದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 8,500 ರೂ. ಪರಿಹಾರ ಸೇರಿ ಒಟ್ಟು 25,500 ರೂ. ಹಾಗೂ ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 22,500 ರೂ. ಪರಿಹಾರ ಧನದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ.8,500 ಪರಿಹಾರ ಸೇರಿ ಒಟ್ಟು ರೂ.31,000 ನಿಗದಿಗೊಳಿಸಿ ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟ್ರಂಪ್ ಭೋಜನಕೂಟದಲ್ಲಿ ಗುಂಡು ಹಾರಾಟ; ಅಮೆರಿಕ ಅಧ್ಯಕ್ಷ ಸ್ಥಳಾಂತರ

ಯು.ಬಿ.ಎನ್.ಡಿ., ಏ.26: ವಾಷಿಂಗ್ಟನ್ ಹಿಲ್ಟನ್‌ನ ಲಾಬಿಯಲ್ಲಿ ಶಂಕಿತ ಗುಂಡು ಹಾರಾಟದ ವರದಿಯಾದ...

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಬ್ಯಾಂಕಿಂಗ್ ಪರವಾನಗಿಯನ್ನು ದ್ದುಗೊಳಿಸಿದ ಆರ್.ಬಿ.ಐ

ನವದೆಹಲಿ, ಏ.26: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ನೀಡಲಾದ ಬ್ಯಾಂಕಿಂಗ್ ಪರವಾನಗಿಯನ್ನು...

ನೀತಿ ಆಯೋಗದ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಲಾಹಿರಿ ನೇಮಕ

ನವದೆಹಲಿ, ಏ.26: ಸರ್ಕಾರವು ನೀತಿ ಆಯೋಗವನ್ನು ಪುನರ್ರಚಿಸಿದೆ. ಅರ್ಥಶಾಸ್ತ್ರಜ್ಞ ಅಶೋಕ್ ಕುಮಾರ್...
error: Content is protected !!