Monday, September 7, 2026
Monday, September 7, 2026

ದೀಪಾವಳಿ ಗಿಫ್ಟ್ ಬಾಕ್ಸ್ ಬಿಡುಗಡೆ

ದೀಪಾವಳಿ ಗಿಫ್ಟ್ ಬಾಕ್ಸ್ ಬಿಡುಗಡೆ

Date:

ಉಡುಪಿ ಅ.15: ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಕಾಪು ತಾಲೂಕು ಪಂಚಾಯತ್ ವತಿಯಿಂದ ಅಕ್ಕ ಸಂಜೀವಿನಿ ಅಂಗಡಿ ಮೂಲಕ ತಯಾರಿಸಿದ ದೀಪಾವಳಿ ಗಿಫ್ಟ್ ಬಾಕ್ಸ್ ಗಳನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಿದರು. ಶಾಸಕರಾದ ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಸಹಾಯಕ ಆಯುಕ್ತೆ ರಶ್ಮಿ, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಯೋಜನಾ ನಿರ್ದೇಶಕ ವಿಜಯ್ ಕುಮಾರ್, ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಡಿಸಿಲ್ವಾ, ಹಾಗೂ ಸಂಜೀವಿನಿ ಯೋಜನೆಯ ಜಿಲ್ಲಾ ಮತ್ತು ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಕಟಪಾಡಿ ಅಕ್ಕ ಸಂಜೀವಿನಿ ಅಂಗಡಿಯ ಡ್ರೈ ಫ್ರೂಟ್ಸ್ ಗಿಫ್ಟ್ ಬಾಕ್ಸ್, ಪಡುಬಿದ್ರೆ ಹಾಗೂ ಶಿರ್ವ ಅಕ್ಕ ಅಂಗಡಿಯ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಲಡ್ಡು, ಸ್ವೀಟ್ಸ್, ಸಿಹಿ ತಿನಿಸುಗಳು ಹಾಗೂ ಬೆಳಪು ಅಕ್ಕ ಅಂಗಡಿಯ ಗೋ ಉತ್ಪನ್ನಗಳಿಂದ ತಯಾರಿಸಿದ ಪೂಜಾ ಸಾಮಗ್ರಿಗಳ ಬಾಕ್ಸ್ ದೀಪಾವಳಿಯ ಉಡುಗೊರೆ ನೀಡಲು ವಿನ್ಯಾಸಗೊಳಿಸಲಾಗಿದೆ. ಈ ದೀಪಾವಳಿ ಉಡುಗೊರೆ ಬೇಕಾದಲ್ಲಿ ಶ್ರೀಮತಿ ಲಕ್ಷ್ಮಿ 8147852990 ಇವರನ್ನು ಸಂಪರ್ಕಿಸಬಹುದು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಜ್ಞಾನದ ಕ್ತತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವರೇ ಶಿಕ್ಷಕರು: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಸೆ.6: ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ವ್ಯಕ್ತಿಯೇ ಶಿಕ್ಷಕ....

ಸೆ. 9: ಉಡುಪಿಯಲ್ಲಿ ನೇರ ಸಂದರ್ಶನ

ಉಡುಪಿ, ಸೆ.6: ನಗರದ ಕಲ್ಸಂಕ ಅಂಬಾಗಿಲು ರಸ್ತೆಯಲ್ಲಿರುವ ಸಾನ್ವಿ ಟ್ರೇರ‍್ಸ್ನಲ್ಲಿ ಸೆಪ್ಟೆಂಬರ್...

ಮಣಿಪಾಲ ಜ್ಞಾನಸುಧಾ: ಶಿಕ್ಷಕರ ದಿನಾಚರಣೆ; ನಿವೃತ್ತ ಶಿಕ್ಷಕರಿಗೆ ಸನ್ಮಾನ

ಮಣಿಪಾಲ, ಸೆ.6: ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ...

ಡಾ. ಪಾರ್ವತಿ ಜಿ. ಐತಾಳರ ಎರಡು ಕೃತಿಗಳ ಲೋಕಾರ್ಪಣೆ

ಕುಂದಾಪುರ, ಸೆ.3: ಸಣ್ಣ ಕಥೆಗಳು ಮನುಷ್ಯನ ಜೀವನದಲ್ಲಿ ಅವನನ್ನು ಗಾಢವಾಗಿ ತಟ್ಟುವ...
error: Content is protected !!