Tuesday, October 6, 2026
Tuesday, October 6, 2026

ಭಂಡಾರ್ಕಾರ್ಸ್ ಕಾಲೇಜು: ವರ್ಡ್‌ಪ್ರೆಸ್ ಕ್ಯಾಂಪಸ್ ಕನೆಕ್ಟ್

ಭಂಡಾರ್ಕಾರ್ಸ್ ಕಾಲೇಜು: ವರ್ಡ್‌ಪ್ರೆಸ್ ಕ್ಯಾಂಪಸ್ ಕನೆಕ್ಟ್

Date:

ಕುಂದಾಪುರ, ಅ.8: ವರ್ಡ್‌ಪ್ರೆಸ್ ಉಡುಪಿ ಸಮುದಾಯದ ಸಹಯೋಗದಲ್ಲಿ, ಭಂಡಾರ್ಕಾರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು, ಕುಂದಾಪುರದಲ್ಲಿ ಅಕ್ಟೋಬರ್ 3 ಮತ್ತು 4ರಂದು ಎರಡು ದಿನಗಳ “ವರ್ಡ್‌ಪ್ರೆಸ್ ಕ್ಯಾಂಪಸ್ ಕನೆಕ್ಟ್” ಶಿಬಿರ ನಡೆಯಿತು. ಕಂಪ್ಯೂಟರ್ ಸೈನ್ಸ್ ವಿಭಾಗದ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿದ ಈ ಶಿಬಿರದಲ್ಲಿ, ವರ್ಡ್‌ಪ್ರೆಸ್ ಬಳಸಿ ವೆಬ್‌ಸೈಟ್ ನಿರ್ಮಾಣದ ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು.

ಪ್ರತಿದಿನ 60 ವಿದ್ಯಾರ್ಥಿಗಳಂತೆ ವಿಭಾಗಿಸಲಾಗಿದ್ದ ಈ ತರಬೇತಿಯಲ್ಲಿ, ವಿನ್ಯಾಸದ ಮೂಲ ಅಂಶಗಳಿಂದ ಹಿಡಿದು ಪ್ರಕಟಣೆ ಹಂತದವರೆಗೆ ವರ್ಡ್‌ಪ್ರೆಸ್‌ನ ಸಂಪೂರ್ಣ ಕಾರ್ಯವಿಧಾನವನ್ನು ವಿದ್ಯಾರ್ಥಿಗಳು ತಿಳಿದುಕೊಂಡರು.

ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ. ಶುಭಕರಾಚಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಮುಕ್ತ ತಂತ್ರಜ್ಞಾನಗಳ ಸಹಾಯದಿಂದ ಹೊಸ ಸೃಜನಾತ್ಮಕ ಪ್ರಯತ್ನಗಳಿಗೆ ಕೈಹಾಕಬೇಕು ಎಂದರು.

ಕಾರ್ಯಕ್ರಮದ ಯಶಸ್ಸಿಗೆ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಗಣೇಶ್ ಕೆ. ಅವರ ಮಾರ್ಗದರ್ಶನದಲ್ಲಿ ವಿಜಯಲಕ್ಷ್ಮಿ ಎನ್. ಶೆಟ್ಟಿ, ರಾಮಚಂದ್ರ ಆಚಾರಿ, ಹಾಗೂ ಚೇತನಾ (ಕಾರ್ಯಕ್ರಮ ಸಂಯೋಜಕಿ) ಸಹಕರಿಸಿದರು.

ವರ್ಡ್‌ಪ್ರೆಸ್ ಉಡುಪಿ ತಂಡದಿಂದ ಶಶಿಕಾಂತ್ ಶೆಟ್ಟಿ (ಸ್ಥಾಪಕ, SabWeb), ಕೆ. ಕೀರ್ತಿ ಪ್ರಭು (ಸೀನಿಯರ್ ಟೆಸ್ಟರ್, QualityKiosk, ಮುಂಬೈ), ಹಾಗೂ ವಿ. ಗೌತಮ್ ನಾವಡ (ಸ್ಥಾಪಕ ಮತ್ತು ನಿರ್ದೇಶಕ, ForthFocus) ಶಿಬಿರವನ್ನು ಮುನ್ನಡೆಸಿದರು.

ಕಾರ್ಯಕ್ರಮದ ನಿರ್ವಹಣೆಗೆ ಓಂಕರ ಉಡುಪ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, Kotisoft Solutions, ಕೋಟೇಶ್ವರ), ಮಂಜುನಾಥ ಎಂ. ಎಂ. (ಸ್ಥಾಪಕ, Yuktha Digitals, ತೀರ್ಥಹಳ್ಳಿ), ಹಾಗೂ ಚಂದನಾ ಜಿ. ಎಂ. (ಕಾರ್ಯನಿರ್ವಹಣಾ ನಿರ್ವಾಹಕಿ, ForthFocus) ಅವರು ಸಹಕಾರ ನೀಡಿದರು.

ಒಮ್ಮೆ ನಾವು ಕಲಿತಿದ್ದ ತರಗತಿಗಳಲ್ಲೇ ಮತ್ತೆ ನಿಂತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಅವಕಾಶ ಸಿಕ್ಕಾಗ ಅದು ಮನಸ್ಸಿಗೆ ಹತ್ತಿರವಾದ ಕ್ಷಣವಾಗಿತ್ತು. ವಿದ್ಯಾರ್ಥಿಗಳ ಉತ್ಸಾಹ ಹಾಗೂ ಕಲಿಯುವ ಹಂಬಲ ನೋಡಿ ಕಾಲೇಜು ದಿನಗಳು ಮತ್ತೆ ನೆನಪಾದವು ಎಂದು ಕೆ. ಕೀರ್ತಿ ಪ್ರಭು, ಸೀನಿಯರ್ ಟೆಸ್ಟರ್, QualityKiosk, ಮುಂಬೈ ಹೇಳಿದರು.

ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಅರಿವು ಜೊತೆಗೆ ಸೃಜನಾತ್ಮಕತೆ ಕೂಡ ಕಾಣಿಸಿತು. ಈ ಶಿಬಿರವು ಕೇವಲ ತಾಂತ್ರಿಕ ತರಬೇತಿ ಅಲ್ಲ ಹೊಸ ಆಲೋಚನೆಗಳಿಗೆ ಬಾಗಿಲು ತೆರೆಯುವ ಪ್ರಯತ್ನ ಎಂದು ಮಂಜುನಾಥ ಎಂ. ಎಂ., ಸ್ಥಾಪಕ, Yuktha Digitals ತೀರ್ಥಹಳ್ಳಿ ಹೇಳಿದರು.

ಎರಡು ದಿನಗಳ ತರಬೇತಿ ಶಿಬಿರದ ಅಂತ್ಯದಲ್ಲಿ ವಿದ್ಯಾರ್ಥಿಗಳಿಂದ ನಿರ್ಮಿಸಲಾದ 120 ಹೊಸ ವೆಬ್‌ಸೈಟ್‌ಗಳು ಆನ್‌ಲೈನ್‌ನಲ್ಲಿ ಪ್ರಕಟಗೊಂಡವು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ.8: ನೇರ ಸಂದರ್ಶನ

ಉಡುಪಿ, ಅ.5: ನಗರದ ಶಾಂತ ಎಲೆಕ್ಟ್ರಿಕಲ್ಸ್ ಪ್ರೈ ಲಿ., ಆಭರಣ ಜುವೆರ‍್ಸ್...

ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಅಭಿವಿನ್ಯಾಸ ಕಾರ್ಯಕ್ರಮ

ಕುಂದಾಪುರ, ಅ.5: ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ...

ವಿಶ್ವ ಕೊಂಕಣಿ ಕೇಂದ್ರ: ಕನಕದಾಸರ ಸಾಹಿತ್ಯ ವಿಚಾರಸಂಕಿರಣ; ಗೀತ ಗಾಯನ

ಮಂಗಳೂರು, ಅ.5: ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ವಿಶ್ವ ಕೊಂಕಣಿ...

‘ಗಾಂಧೀ ಚಿಂತನೆ ಮತ್ತು ಪ್ರಸ್ತುತತೆ’ ಉಪನ್ಯಾಸ

ಬಸ್ರೂರು, ಅ.5: ಗಾಂಧೀ ಜಯಂತಿ ಪ್ರಯುಕ್ತ ಶ್ರೀ ಶಾರದಾ ಕಾಲೇಜು ಬಸ್ರೂರಿನಲ್ಲಿ...
error: Content is protected !!