Thursday, November 12, 2026
Thursday, November 12, 2026

ಮಣಿಪಾಲ: ವಿಶ್ವ ರೇಬಿಸ್ ಜಾಗೃತಿ ದಿನ

ಮಣಿಪಾಲ: ವಿಶ್ವ ರೇಬಿಸ್ ಜಾಗೃತಿ ದಿನ

Date:

ಮಣಿಪಾಲ, ಅ.5: ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಇವರ ಸಹಯೋಗದೊಂದಿಗೆ ಮಣಿಪಾಲದ ಕೆ.ಎಂ.ಸಿ.ಗ್ರೀನ್ಸ್ ಆವರಣದಲ್ಲಿ ವಿಶ್ವ ರೇಬಿಸ್ ದಿನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಅವರು ರೇಬಿಸ್ ಜಾಗೃತಿ ಕಲಾಕೃತಿಯನ್ನು ಅನಾವರಣಗೊಳಿಸಿದರು. ರೇಬಿಸ್ ಕುರಿತು ಜಾಗೃತಿ ಮೂಡಿಸುವಂತಹ ಘೋಷವಾಕ್ಯಗಳನ್ನು ಕೆ.ಎಂ.ಸಿ.ಯ ವೈದ್ಯಕೀಯ ಮತ್ತು ವೈದ್ಯಕೇತರ ಸಿಬ್ಬಂದಿಗಳು ಪ್ರದರ್ಶಿಸಿದರು. ಸಹ ಪ್ರಾಧ್ಯಾಪಕರಾದ ಡಾ. ಈಶ್ವರೀ ಕೆ. ಅವರು ರೇಬಿಸ್ ಕುರಿತು ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರೊ ಡಾ. ಮುರಳೀಧರ್ ಎಂ. ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೂಡೀಸ್ ರೇಟಿಂಗ್ಸ್- ಭಾರತದ ಜಿಡಿಪಿ ಬೆಳವಣಿಗೆ 6.5% ರಿಂದ 7% ಕ್ಕೆ ಏರಿಕೆ

ನವದೆಹಲಿ, ನ.11: ಮೂಡೀಸ್ ರೇಟಿಂಗ್ಸ್ ಭಾರತದ ಜಿಡಿಪಿ ಬೆಳವಣಿಗೆಯನ್ನು 6.5% ರಿಂದ...

ಹೋಂ ಡಾಕ್ಟರ್ ಫೌಂಡೇಶನ್: ವೈಶಿಷ್ಟ್ಯಪೂರ್ಣ ದೀಪಾವಳಿ ಆಚರಣೆ

ಮಲ್ಪೆ, ನ.11: ಸರಕಾರಿ ಪದವಿಪೂರ್ವ ಕಾಲೇಜು ಮಲ್ಪೆ (ಹೈಸ್ಕೂಲ್ ವಿಭಾಗ) ಹೋಂ...

ತುಳಸೀ ಸಂಕೀರ್ತನೆ

ಉಡುಪಿ, ನ.11: ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ತುಳಸಿ ಪೂಜೆ...

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ: ಯಶ್ಪಾಲ್ ಸುವರ್ಣ

ಬ್ರಹ್ಮಾವರ, ನ.11: ಚಾಂತಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇರೂರು ಪ್ರಧಾನ ನಗರದಲ್ಲಿ...
error: Content is protected !!