ಉಡುಪಿ, ಅ.3: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಡಾ.ಶಿವರಾಮ ಕಾರಂತರ ಜನ್ಮ ದಿನಾಚರಣೆಯ ಪ್ರಯುಕ್ತ ಕಾರಂತರ ಕೃತಿಗಳ ಕುರಿತಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಡಾ.ಶಿವರಾಮ ಕಾರಂತರ ಜನ್ಮದಿನಾಚರಣೆಯ ಕಾರ್ಯಕ್ರಮವು ಅಕ್ಟೋಬರ್ 11 ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ನಡೆಯಲಿದ್ದು ಅಂದು ಬಹುಮಾನ ವಿತರಣೆ ನಡೆಸಲಾಗುವುದು. ಅತ್ಯುತ್ತಮ ಪ್ರಬಂಧಗಳನ್ನು ಪ್ರಕಟಿಸಲಾಗುವುದು ಎಂದು ಡಾ.ಶಿವರಾಮ ಕಾರಂತರ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.
ಬಹುಮಾನ ವಿವರ: ಪದವಿ ವಿಭಾಗ: ಪ್ರಥಮ – ಮಾನಸ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲಕಟ್ಟೆ ಬಂಟ್ವಾಳ, ದ್ವಿತೀಯ: ಶರಣ್ಯ ಶೆಟ್ಟಿ , ಡಾ. ಬಿ. ಬಿ ಹೆಗ್ಡೆ ಕಾಲೇಜು ಕುಂದಾಪುರ, ತೃತೀಯ: ಅಬಿಜ್ಞಾ ಹೆಗ್ಡೆ, ಎಸ್. ಎಂ .ಎಸ್ ಕಾಲೇಜು, ಬ್ರಹ್ಮಾವರ. ಸ್ನಾತಕೋತ್ತರ ವಿಭಾಗ: ಪ್ರಥಮ- ಸುಶ್ಮಿತಾ ಶೆಟ್ಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ದ್ವಿತೀಯ- ಸಾಧನ, ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ತೃತೀಯ – ಕೀರ್ತನಾ ಎಸ್ ಶೆಟ್ಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು. ಸಾರ್ವಜನಿಕ ವಿಭಾಗ: ಪ್ರಥಮ- ತೇಜಸ್ವಿನಿ ವಿ. ಸಂಶೋಧನಾ ವಿದ್ಯಾರ್ಥಿನಿ ಮೈಸೂರು ವಿಶ್ವವಿದ್ಯಾನಿಲಯ, ದ್ವಿತೀಯ- ಮೈತ್ರಿ ಭಟ್ ವಿಟ್ಲ, ತೃತೀಯ-ಶಾಲಿನಿ ಯು.ಬಿ ಉಡುಪಿ, ಯಜ್ಞ ನಾರಾಯಣ ಉಳ್ಳೂರ ಕೋಟೇಶ್ವರ.




By
ForthFocus™