ಉಡುಪಿ, ಆ.19: ಕನ್ನಡ ಸಿನಿಮಾರಂಗದ ಹಿರಿಯ ನಟ ರಮೇಶ್ ಭಟ್ ಅವರು ತಾವು ಬರೆದ ಗೀತಾಲೇಖನವನ್ನು ರಾಜಾಂಗಣದಲ್ಲಿ ಪರ್ಯಾಯ ಶ್ರೀಗಳಿಗೆ ಸಮರ್ಪಿಸಿದರು. ಕಿರಿಯ ಶ್ರೀಪಾದರು ಉಪಸ್ಥಿತರಿದ್ದರು. ಎಂಬತ್ತರ ಈ ಪ್ರಾಯದಲ್ಲಿ ರಮೇಶ್ ಭಟ್ ಅವರು ಗೀತೆ ಬರೆದದ್ದು ಬಹಳ ಸಂತೋಷದ ವಿಷಯ. ಚಲನಚಿತ್ರ ರಂಗದವರೂ ಕೂಡಾ ನಮ್ಮ ಕೋಟಿ ಗೀತಾಲೇಖನ ಯಜ್ಞದಲ್ಲಿ ಭಾಗವಹಿಸಲು ಪ್ರೇರಣೆ ನೀಡಿದಂತಾಯಿತು ಎಂದು ಶ್ರೀಪಾದರು ಆಶೀರ್ವದಿಸಿದರು. ರಮೇಶ್ ಭಟ್ ದಂಪತಿಗಳಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಲಾಯಿತು.
ಹಿರಿಯ ನಟ ರಮೇಶ್ ಭಟ್ ಅವರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ
ಹಿರಿಯ ನಟ ರಮೇಶ್ ಭಟ್ ಅವರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ
Date:




By
ForthFocus™