Tuesday, October 27, 2026
Tuesday, October 27, 2026

ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕನಸ್ಸುಗಳಿದ್ದಷ್ಟೇ ಸವಾಲುಗಳಿವೆ: ಪ್ರೊ. ಸುನೀತಾ ವಿ

ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕನಸ್ಸುಗಳಿದ್ದಷ್ಟೇ ಸವಾಲುಗಳಿವೆ: ಪ್ರೊ. ಸುನೀತಾ ವಿ

Date:

ಮಂಗಳೂರು, ಅ.27: ಇಂದಿನ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯವರ್ಧನೆ, ವ್ಯಕ್ತಿತ್ವ ವಿಕಸನ, ಔದ್ಯೋಗಿಕತೆ, ಸಾಮಾಜಿಕ ಚಲನೆ, ವೈಚಾರಿಕತೆ ಹಾಗೂ ರಾಷ್ಟ್ರೀಯ ಅಭಿವೃದ್ಧಿಯ ಕನಸಗಳನ್ನು ಹೊಂದಿದೆ ಎಂದು ಸಮಾಜಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕಿ ಡಾ. ಸುನೀತಾ ವಿ ಹೇಳಿದರು. ಮಂಗಳೂರು ರಥಬೀದಿಯ ಡಾ.ದಯಾನಂದ ಪೈ – ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಜರುಗಿದ ಮಂಗಳೂರು ಸಮಾಜಶಾಸ್ತ್ರ ಸಂಘ ಹಮ್ಮಿಕೊಂಡಿದ್ದ ವಾಸುದೇವ ಕಾಮತ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಶಿಕ್ಷಣದ ಕನಸುಗಳಿಗೆ ತೊಡಕಾಗಿರುವ ಇಲ್ಲಿನ ಆರ್ಥಿಕ ಅಸಮಾನತೆ, ಸಾಮಾಜಿಕ ತಾರತಮ್ಯ, ಗ್ರಾಮೀಣ ಹಾಗೂ ನಗರ ಅಂತರ, ಭಾಷಾ ಹಿನ್ನಲೆ ಮತ್ತು ಬೋಧಕರ ಕೊರತೆ ಕಾರಣಗಳಾಗಿವೆ ಎಂದು ಅವರು ಪ್ರತಿಪಾದಿಸಿದರು. ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕರಾದ ಡಾ. ಗಿರಿಧರ್ ರಾವ್ ಎಂ ಎಸ್ ಅವರು ಪ್ರೊ. ರಿಚರ್ಡ್ ಪಾಯಸ್ ಸಂಪಾದಿಸಿದ ‘ಜೆಂಡರ್ ಸ್ಯಾನಿಟೇಶನ್ ಆಂಡ್ ಮೆನ್ಸ್ಟ್ರುವಲ್ ಹೆಲ್ತ್’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಸಮಾಜಶಾಸ್ತ್ರ ಸಂಘಟನೆಯ ನಿಯತಕಾಲಿಕೆ ಸಮಾಜಶೋಧನವನ್ನು ಮಂಗಳೂರು ವಿವಿ ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ವಿನಯ್ ರಜತ್ ಬಿಡುಗಡೆಗೊಳಿಸಿದರು. ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ರಿಚರ್ಡ್ ಪಾಯಸ್ ಮತ್ತು ನಿವೃತ್ತ ಪ್ರಾಧ್ಯಾಪಕಿ ಪ್ರೊ. ಲಕ್ಷ್ಮೀಬಾಯಿ ಇವರನ್ನು ಗೌರವಿಸಲಾಯಿತು.

ಐಕ್ಯೂಎಸಿ ಸಂಯೋಜಕರಾದ ದೇವಿ ಪ್ರಸಾದ್, ಸಹ ಸಂಚಾಲಕಿ ಡಾ.ಜ್ಯೋತಿಪ್ರಿಯ ಉಪಸ್ಥಿತರಿದ್ದರು. ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ದುಗ್ಗಪ್ಪ ಕಜೆಕಾರ್ ಸ್ವಾಗತಿಸಿ, ಸಮಾಜಶಾಸ್ತ್ರ ಸಂಘದ ಕಾರ್ಯದರ್ಶಿ ರಾಜೇಂದ್ರ ಕೆ ವಂದಿಸಿದರು. ಸಂಘದ ಸದಸ್ಯರು ದತ್ತಿ ಉಪನ್ಯಾಸದ ಪ್ರಯೋಜನ ಪಡೆದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೂರನೇ ಟಿ20: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಜಯ

ಯು.ಬಿ.ಎನ್.ಡಿ., ಅ.27: ವೆಲ್ಲಿಂಗ್ಟನ್‌ನಲ್ಲಿ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ, ಆತಿಥೇಯ...

ಅಂತಿಮ ಮತದಾರರ ಪಟ್ಟಿಯ ಸಿ.ಡಿ ಹಸ್ತಾಂತರ

ಮಣಿಪಾಲ, ಅ.27: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ – 2026...

ಅ. 30: ನೇರ ಸಂದರ್ಶನ

ಉಡುಪಿ, ಅ.27: ಮಂಗಳೂರು ಫರ‍್ಸ್, ಉಡುಪಿ ನೀಯರ್ ಕಲ್ಯಾಣ್‌ಪುರ ಉಪ್ಪೂರು ಬಿಡ್ಜ್,...

ಕ್ರಿಯೇಟಿವ್ ಪದವಿಪೂರ್ವ ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟನೆ

ಕಾರ್ಕಳ, ಅ.27: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ರಾಷ್ಟ್ರೀಯ ಸೇವಾ ಯೋಜನೆ,...
error: Content is protected !!