ಕುಂದಾಪುರ, ಆ.2: ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ-ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಗ್ರಾಮ ಪಂಚಾಯತ್ ಗುಜ್ಜಾಡಿ , ರೋಟರಿ ಕ್ಲಬ್ ಗಂಗೊಳ್ಳಿ, ಇವರ ಸಂಯುಕ್ತ ಆಶ್ರಯದಲ್ಲಿ, ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ) ಗುಜ್ಜಾಡಿ ಇವರ ವತಿಯಿಂದ ನಾಯಕವಾಡಿಯ ಶ್ರೀ ರಾಮ ಮಂದಿರದ ಅಂಗಳದಲ್ಲಿ ಸಂಭ್ರಮದ ಆಷಾಢ ಕಾರ್ಯಕ್ರಮ ಜರುಗಿತು. ಆಷಾಢ ಮಾಸದಲ್ಲಿ ಒಂದು ಸೂರಿನಡಿ ಗ್ರಾಮದ ಸಂಜೀವಿನಿ ಮಹಿಳೆಯರು ಒಂದುಗೂಡಿ ವಿನೂತನವಾಗಿ ಅಳಿದು ಹೋದ ಕರಾವಳಿ ಶೈಲಿಯ ಆಟೋಟಗಳನ್ನುಆಡಿಸಿದ್ದು, ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ವಿವಿಧ ಬಗೆ ಬಗೆಯ ತಿನಿಸುಗಳನ್ನು ತಯಾರಿಸಿರುವುದು ಒಮ್ಮೆ ನನ್ನ ಬಾಲ್ಯದ ಕ್ಷಣಗಳನ್ನು ನೆನಪಿಸಿತು, ಇಂದಿನ ಪಿಳಿಗೆಗೆ ಇದರ ಪರಿಚಯ ಮಾಡುವುದು ಅತ್ಯಂತ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಸಮೃದ್ಧಿ ಸಂಜೀವಿನಿ ಒಕ್ಕೂಟವು ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾದದ್ದು ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗುಜ್ಜಾಡಿ ಗ್ರಾಮ ಪಂಚಾಯತ್ ಅದ್ಯಕ್ಷ ತಮ್ಮಯ್ಯ ದೇವಾಡಿಗ ಹೇಳಿದರು.
ಔಷಧೀ ಗುಣವುಳ್ಳ ವಿವಿಧ ಖಾದ್ಯಗಳಾದ ಕೇಸುವಿನ ಸೊಪ್ಪಿನ ಪಲ್ಯ, ಒಂದೆಲಗದ ತಂಬುಳಿ, ನುಗ್ಗಿಸೊಪ್ಪಿನ ಪಲ್ಯ, ಪತ್ರೊಡೆ, ಕೇಸುವಿನ ಸೊಪ್ಪಿನ ಚಟ್ನಿ, ಅಕ್ಕಿ ಉಂಡೆ, ಹಲಸಿನ ಹಣ್ಣಿನ ಮುಳ್ಕ, ಹಲಸಿನ ದಾನಿ ಚಟ್ನಿ, ಮೆಂತೆ ಗಂಜಿ, ಅವಡೆ ಕಿಚಡಿ, ಕಾಳು ಮೇಣಸಿನ ಪಾನಕ, ಹುರಳಿ ಚಟ್ನಿ, ಹಾಗಲ ಕಾಯಿ ಪಲ್ಯ,ಅಮಟೆ ಕಾಯಿ ಪಲ್ಯ, ಒಂದೆಲಗ ಚಟ್ನಿ, ಅರಶಿನ ಎಲೆ ಕಡಬು ಇತ್ಯಾದಿ ಗಮನ ಸೆಳೆಯಿತು.
ಆಟೋಟ ಸ್ಪರ್ಥೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ಕೂಡ ನೀಡಲಾಯಿತು. ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಬಾರಿ ಗಜ್ಮೈಕು ಖ್ಯಾತಿಯ ಕರ್ನಾಟಕ ಹಾಸ್ಯ ಕಲಾರತ್ನ ಪ್ರಶಸ್ತಿ ವಿಜೇತ ನಾಗರಾಜ್ ಗಾಣಿಗ ಹಾಗೂ ಅವರ ಸಂಗಡಿಗರಾದ ಶ್ರೀಪತಿ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ನಾಗರಾಜ್ ಗಾಣಿಗ ಹಾಗೂ ಶ್ರೀಪತಿ ಆಚಾರ್ಯ ಕುಂದಾಪುರ ಕನ್ನಡದ ನಗೆ ಚಟಾಕಿಯನ್ನು ಹಾರಿಸುವ ಮೂಲಕ ನೆರದಿರುವ ಎಲ್ಲರನ್ನು ಮನರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವಿನಿ ಒಕ್ಕೂಟದ ಅದ್ಯಕ್ಷೆಯಾದ ನಂದಿನಿ ಗುಜ್ಜಾಡಿ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಕೃಷ್ಣ ಪೂಜಾರಿ ಅಧ್ಯಕ್ಷರು ರೋಟರಿ ಕ್ಲಬ್ ಗಂಗೊಳ್ಳಿ, ಅವಿನಾಶ್ ಜಿಲ್ಲಾ ವ್ಯವಸ್ಥಾಪಕರು ಎನ್ ಆರ್ ಎಲ್ ಎಂ ಜಿ.ಪಂ.ಉಡುಪಿ, ರೋಷಿನಿ ಶೆಟ್ಟಿ ಅಧ್ಯಕ್ಷರು ಚಿತ್ತಾರ ಸಂಜೀವಿನಿ ತಾಲೂಕು ಒಕ್ಕೂಟ ಕುಂದಾಪುರ, ಗುಜ್ಜಾಡಿ ಗ್ರಾ.ಪಂ. ಕಾರ್ಯದರ್ಶಿ ಶಕುಂತಲ, ಚಿತ್ತಾರ ತಾಲೂಕು ಒಕ್ಕೂಟದ ಮಾಜಿ ಅಧ್ಯಕ್ಷರು ವಿಜಯ ಗಾಣಿಗ, ಗುಜ್ಜಾಡಿ ಗ್ರಾ.ಪಂ ಸದಸ್ಯರಾದ ಹರೀಶ್ ಮೇಸ್ತ, ರಾಜು ಪೂಜಾರಿ, ಲೋಲಾಕ್ಷೀ ಪಂಡಿತ್, ಜೆಸಿಂತ, ಯಮುನಾ, ತಾ.ಪಂ. ಎನ್ ಆರ್ ಎಲ್ ಎಂ. ವಲಯ ಮೇಲ್ವಿಚಾರಕಿಯಾದ ಮಮತಾ, ಹರ್ಷಿತಾ, ಬೈಂದೂರು ವಲಯ ಮೇಲ್ವಿಚಾರಕ ಮಹೇಂದ್ರ, ತಾ.ಪಂ ಸಿಬ್ಬಂದ್ಧಿಯಾದ ಚೈತ್ರಾ, ಯಮುನಾ, ಸಿತಾರ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ವಿಜಯ ಗಾಣಿಗ, ವಾಣಿ, ಲಲಿತಾ, ಶೋಭಾ, ಸ್ಥಳೀಯ ಸಂಪನ್ಮೂಲ ವ್ಯೆಕ್ತಿಗಳಾದ ವೀಣಾ ಮೇಸ್ತ, ದೀಪ ಮೇಸ್ತ, ವೀಣಾ, ಕೃಷಿ ಸಖಿ ಪ್ರಿಯಾಂಕ, ಪಶು ಸಖಿ ಸಾವಿತ್ರಿ, ಸ್ವ ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು. ರೇಷ್ಮಾ ಸ್ವಾಗತಿಸಿ ಮುಖ್ಯ ಪುಸ್ತಕ ಬರಹಗಾರರಾದ ಪ್ರಮೀಳಾ ನಿರೂಪಿಸಿ ವಂದಿಸಿದರು.




By
ForthFocus™