Monday, September 28, 2026
Monday, September 28, 2026

ಮಣಿಪಾಲ-ಉಡುಪಿ ಜ್ಞಾನಸುಧಾ: ಕಾರ್ಗಿಲ್ ವಿಜಯ ದಿವಸ ಆಚರಣೆ

ಮಣಿಪಾಲ-ಉಡುಪಿ ಜ್ಞಾನಸುಧಾ: ಕಾರ್ಗಿಲ್ ವಿಜಯ ದಿವಸ ಆಚರಣೆ

Date:

ಉಡುಪಿ, ಜು.27: ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜು, ನಾಗಬನ ಕ್ಯಾಂಪಸ್ ಹಾಗೂ ಮಣಿಪಾಲ್ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾನಗರ ಈ ಉಭಯ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಸಂವೇದನಾ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಮಲ್ಪೆ ಅವರು ಭಾಗವಹಿಸಿ ಕಾರ್ಗಿಲ್ ಕಥನಗಳನ್ನು ಹೇಳುವುದರೊಂದಿಗೆ ಇಂದಿನ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ದೇಶಭಕ್ತಿಯನ್ನು ರೂಢಿಸಿಕೊಳ್ಳಬೇಕು ಜೊತೆಗೆ ದೇಶ ಕಾಯುವ ಸೈನಿಕರನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಭಾರತೀಯ ನೌಕಾ ಸೇನೆಯ ನಿವೃತ್ತ ಪೆಟ್ಟಿ ಆಫೀಸರ್ ಕೆ ಗಣೇಶ್ ರಾವ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಉಡುಪಿ ಜ್ಞಾನಸುಧಾ ಪ್ರಾಂಶುಪಾಲರಾದ ಸಂತೋಷ್, ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ ಮಣಿಪಾಲ್ ಜ್ಞಾನಸುಧಾ ಪ್ರಾಂಶುಪಾಲರಾದ ಗಣೇಶ ಶೆಟ್ಟಿ, ಉಪ ಪ್ರಾಂಶುಪಾಲರಾದ ಹೇಮಂತ, ರವಿ ಜಿ. ಉಪಸ್ಥಿತರಿದ್ದರು. ಕಾರ್ಗಿಲ್ ವಿಜಯ ದಿವಸದ ಶುಭಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಮಣಿಪಾಲ್ ಜ್ಞಾನಸುಧಾ ಆಂಗ್ಲ ಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟಾಟಾ ಏರಿಸ್ ಬಿಡುಗಡೆ: ಮಾರುತಿ ಡಿಜೈರ್‌ಗೆ ಹೊಸ ಪ್ರತಿಸ್ಪರ್ಧಿಯಾಗಲಿದೆಯೇ ಈ ಕಾರು?

ನವದೆಹಲಿ, ಸೆ.26: ಟಾಟಾ ಮೋಟಾರ್ಸ್ ಭಾರತದಲ್ಲಿ 'ಏರಿಸ್' ಅನ್ನು ರೂ. 5.29...

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನಕ್ಕೆ ಪೋರ್ಚುಗಲ್ ಮತ್ತು ಮಾರಿಷಸ್ ಬೆಂಬಲ

ನವದೆಹಲಿ, ಸೆ.26: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯುವ ಭಾರತದ...

ಏಷ್ಯನ್ ಗೇಮ್ಸ್‌ ಕಬಡ್ಡಿ: ಭಾರತಕ್ಕೆ ಅವಳಿ ಚಿನ್ನ

ಯು.ಬಿ.ಎನ್.ಡಿ., ಸೆ.26: ಜಪಾನ್‌ನಲ್ಲಿ ನಡೆಯುತ್ತಿರುವ ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ...

ಎಸ್.ಐ.ಆರ್ ಆದೇಶ ಸರ್ವಾನುಮತದಿಂದ ಅನುಮೋದನೆ: ಚುನಾವಣಾ ಆಯೋಗ

ನವದೆಹಲಿ, ಸೆ.26: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್.ಐ.ಆರ್ ಆದೇಶ...
error: Content is protected !!