Tuesday, April 28, 2026
Tuesday, April 28, 2026

ಕಡೆಕಾರು: ಉಡುಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸತ್ಯದರ್ಶನ ಪ್ರತಿಭಟನೆ

ಕಡೆಕಾರು: ಉಡುಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸತ್ಯದರ್ಶನ ಪ್ರತಿಭಟನೆ

Date:

ಕಡೆಕಾರು, ಜು.16: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಕಡೆಕಾರ್ ಗ್ರಾಮ ಪಂಚಾಯತ್‌ನ ಮುಂಭಾಗದಲ್ಲಿ ಬಿಜೆಪಿಯ ಪ್ರತಿಭಟನೆಯ ವಿರುದ್ಧ ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು 9/11 ಸಮಸ್ಯೆ, ಅಕ್ರಮ ಸಕ್ರಮ 53 ಮತ್ತು 57 ಅರ್ಜಿ ತಿರಸ್ಕಾರ, ವೃದ್ದಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ರದ್ದತಿ ಹಾಗೂ ವಿದ್ಯುತ್ ದರ ಏರಿಕೆಯ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಅಪಪ್ರಚಾರ ಮತ್ತು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಗಳ ವಿರುದ್ಧ ವಾಸ್ತವ ವಿಚಾರವನ್ನು ತಿಳಿಸಿದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಉಡುಪಿಯ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಗಮನ ಹರಿಸಲಿ. ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಬದಲು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿರುವ ಮಲ್ಪೆ ರಾಷ್ಟ್ರೀಯ ಹೆದ್ದಾರಿ, ಅಂಬಲಪಾಡಿ ರಸ್ತೆ, ಪರ್ಕಳ ರಸ್ತೆ ಹಾಗೂ ಸಂತೆಕಟ್ಟೆ ರಸ್ತೆಯ ಕಾಮಗಾರಿಯ ಬಗ್ಗೆ ಒತ್ತಾಯಿಸಲಿ. ಧರ್ಮದ ರಾಜಕಾರಣವನ್ನು ಬಿಟ್ಟು ಇನ್ನಾದರೂ ಅಭಿವೃದ್ಧಿಗೆ ಗಮನ ಕೊಡಲಿ ಎಂದು ತಿಳಿಸಿದರು.

ಪಕ್ಷದ ನಾಯಕರಾದ ಪ್ರಸಾದ್ ರಾಜ್ ಕಾಂಚನ್, ಕಡೆಕಾರ್ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಜಯಕರ್ ಶೇರಿಗಾರ್, ಉಪಾಧ್ಯಕ್ಷರಾದ ನವೀನ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಸರಸ್ವತಿ, ತಾರಾನಾಥ್ ಸುವರ್ಣ, ಸುಕನ್ಯಾ ಪೂಜಾರಿ, ಲೀಲಾ ಕುಂದರ್, ಇಂದಿರಾ ಶೆಟ್ಟಿ, ರಮೇಶ್ ಕೋಟ್ಯಾನ್, ನಿರ್ಮಲಾ, ವೀಣಾ ಪ್ರಕಾಶ್, ರಂಜಿತಾ, ದಿನೇಶ್, ಕಾಂಗ್ರೆಸ್ ಪಕ್ಷದ ನಾಯಕರಾದ ಮಹಾಬಲ ಕುಂದರ್, ನರಸಿಂಹಮೂರ್ತಿ, ಐರಿನ್ ಅಂದ್ರಾದೆ, ವನಜಾ ಜಯಕರ್, ನಳಿನಾಕ್ಷಿ ಬಂಗೇರ, ಸದಾನಂದ್ ಕುಲಾಲ್, ಸುರೇಶ್ ಶೆಟ್ಟಿ, ದಿನೇಶ್ ಪೂಜಾರಿ, ಗಣೇಶ್ ನೆರ್ಗಿ, ಸಂಧ್ಯಾ ತಿಲಕ್‌ರಾಜ್, ಸತೀಶ್ ಕೊಡವೂರು, ಸತೀಶ್ ಮಂಚಿ, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಬೂತ್ ಸಮಿತಿಯ ಅಧ್ಯಕ್ಷರು, ಬಿ.ಎಲ್.ಏ-2ಗಳು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಷ್ಟ್ರೀಯ ಗೋಮಾತೆ ಗೌರವ ಅಭಿಯಾನ ಸರಕಾರಕ್ಕೆ ಮನವಿ ಸಲ್ಲಿಕೆ

ಬ್ರಹ್ಮಾವರ, ಏ.27: ಗೋಮಾತೆಯ ಗೌರವ ಅಭಿಯಾನ ಅಂಗವಾಗಿ ಗೋಮಾತಾ ಗೌರವ ದಿನಾಚರಣೆಯನ್ನು...

ಕಸ್ತೂರ್ಬಾ ಆಸ್ಪತ್ರೆ: ವೃತ್ತಿಪರರ ಸಪ್ತಾಹ 2026 ಆಚರಣೆ

ಮಣಿಪಾಲ, ಏ.27: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಏಪ್ರಿಲ್ 25 ರಂದು ವೈದ್ಯಕೀಯ...

ಶ್ರೀ ಕೃಷ್ಣ ಮಠಕ್ಕೆ ಉತ್ತರಾಧಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರ ಭೇಟಿ

ಉಡುಪಿ, ಏ.27: ಪರ್ಯಾಯ ಶ್ರೀ ಶೀರೂರು ಮಠ ಪರ್ಯಾಯ ಪೀಠಾಧೀಶರಾದ ಶ್ರೀ...

ನಾಗಬನದಲ್ಲಿ ಅಪೂರ್ವ ಕಾರ್ಯಕ್ರಮ

ಉಡುಪಿ, ಏ.26: ಸುಮಾರು ಒಂದು ಸಾವಿರ ವರ್ಷಗಳ ಹಳೆಯ ಶ್ರೀ ನಾಗಬ್ರಹ್ಮಸ್ಥಾನ...
error: Content is protected !!