ಬ್ರಹ್ಮಾವರ, ಜು.11: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರು ಸುಮಾರು 45 ವರ್ಷಗಳ ಕಾಲ ಬ್ರಹ್ಮಾವರ ತಾಲೂಕಿನಾದ್ಯಂತ ಸೈಕಲ್ ನಲ್ಲೇ ಸುತ್ತಿ ಹಿಂದುತ್ವ, ರಾಷ್ಟ್ರೀಯತೆ ವಿಚಾರಗಳಳನ್ನು ಹಳ್ಳಿ ಹಳ್ಳಿಗೆ ಪಸರಿಸಿ ಸಾವಿರಾರು ಯುವಕರನ್ನು ಸಂಘ ಕಾರ್ಯದಲ್ಲಿ ತೊಡಗಿಸಿದ ಬ್ರಹ್ಮಾವರ ಬಾಬು ದೇವಾಡಿಗ ಅವರನ್ನು ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ನೇತ್ರತ್ವದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಅವರ ಮನೆಗೆ ತೆರಳಿ ಗೌರವಿಸಲಾಯಿತು. ಉಡುಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ರಾಜೀವ ಕುಲಾಲ್, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅರ್ಜುನ್ ಪ್ರಭು, ಸತ್ಯರಾಜ್ ಬ್ರಹ್ಮಾವರ, ದೇವಾನಂದ್ ಬ್ರಹ್ಮಾವರ, ಪ್ರಸಾದ್, ನಿತ್ಯಾನಂದ ಪೂಜಾರಿ ಉಪಸ್ಥಿತರಿದ್ದರು.
ಬ್ರಹ್ಮಾವರ: ಗುರುಪೂರ್ಣಿಮೆ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಬಾಬು ದೇವಾಡಿಗರಿಗೆ ಸನ್ಮಾನ
ಬ್ರಹ್ಮಾವರ: ಗುರುಪೂರ್ಣಿಮೆ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಬಾಬು ದೇವಾಡಿಗರಿಗೆ ಸನ್ಮಾನ
Date:




By
ForthFocus™