Saturday, September 26, 2026
Saturday, September 26, 2026

ಸಂಭ್ರಮದ ಸಾಗುವಳಿ

ಸಂಭ್ರಮದ ಸಾಗುವಳಿ

Date:

ಕೋಟ, ಜು.:6 ಸರಕಾರಿ ಸಂಯುಕ್ತ ಪ್ರೌಢಶಾಲೆ ಪ್ರಾಥಮಿಕ ವಿಭಾಗ ಮತ್ತು ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಸಹಯೋಗದಲ್ಲಿ ಸಂಭ್ರಮದ ಸಾಗುವಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಕೃಷಿ ನಮ್ಮ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ಅದರ ಮಧುರಾನುಭವ ಪ್ರತಿಯೊಬ್ಬರೂ ಅನುಭವಿಸಬೇಕು ಹಾಗಾಗಿ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಬಹಳ ವಿಚಾರಗಳನ್ನು ತಿಳಿಸುತ್ತದೆ ಎಂದರು. ಗೀತಾನಂದ ಸಂಸ್ಥೆಯ ಮುಖ್ಯಸ್ಥರಾದ ದಿವ್ಯಲಕ್ಷ್ಮಿ ಪ್ರಶಾಂತ್ ಕುಂದರ್, ಶಾಲಾ ಮುಖ್ಯ ಶಿಕ್ಷಕರಾದ ಮಂಜುನಾಥ ಹೊಳ್ಳ, ಶಾಲಾ ಶಿಕ್ಷಕರು, ಜನತಾ ಸಂಸ್ಥೆಯ ಶ್ರೀನಿವಾಸ ಕುಂದರ್, ರವಿಕಿರಣ, ಪಾಂಡು ಪೂಜಾರಿ, ದೀಕ್ಷಿತಾ, ಅರುಣ್ ಕುಮಾರ್ ಉಪಸ್ಥಿತರಿದ್ದರು. ಮಕ್ಕಳಿಗೆ ಹಿಂದಿನ ಸಾಂಪ್ರದಾಯಿಕ ತಿಂಡಿ ನೆನಪಿಸುವ ನಿಟ್ಟಿನಲ್ಲಿ ಅವಡೆ ಕಿಚಡಿಯನ್ನು ಸಾಗುವನಿ ಎಲೆಯಲ್ಲಿ ಬಡಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರಂತರು ಕರ್ನಾಟಕದ ವೈಚಾರಿಕ ಪ್ರಜ್ಞೆಯ ಪ್ರತಿನಿಧಿ: ಸಚಿವ ಶಿವರಾಜ ಎಸ್ ತಂಗಡಗಿ

ಉಡುಪಿ, ಸೆ.25: ಡಾ. ಶಿವರಾಮ ಕಾರಂತರು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೆ...

ಮಣಿಪಾಲ ಜ್ಞಾನಸುಧಾ: ಜಿಲ್ಲಾಮಟ್ಟದ ಫುಟ್ಬಾಲ್‌ ಪಂದ್ಯಾಟ

ಮಣಿಪಾಲ, ಸೆ.25: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ...

ಬಾಸ್ಕೆಟ್ ಬಾಲ್: ಕಾರ್ಕಳ ಜ್ಞಾನಸುಧಾದ ಸಮರ್ಥ್ ಕೆ.ಯು ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ, ಸೆ.25: ಶಾಲಾ ಶಿಕ್ಷಣ ಇಲಾಖೆ (ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ...

ಯುವಕರು ವಿದ್ಯಾವಂತರಾಗುವುದರ ಜೊತೆಗೆ ಹೃದಯವಂತರಾಗಬೇಕು

ತೆಂಕನಿಡಿಯೂರು, ಸೆ.25: ಇಂದಿನ ಹೊಸ ತಲೆಮಾರಿನ ಯುವಕ-ಯುವತಿಯರು ವಿದ್ಯಾವಂತರಾಗುವುದರ ಜೊತೆಗೆ ಪ್ರೀತಿ,...
error: Content is protected !!