ಕೋಟ, ಜೂ.30: ಪರಿಸರದ ಬಗ್ಗೆ ನಿರ್ಲಕ್ಷ್ಯ ಧೋರಣೆ ಬಿಟ್ಟು ಅದರ ಉಳಿವಿಗಾಗಿ ವರ್ಷವಿಡೀ ವನಮಹೋತ್ಸವ ಆಚರಿಸಿ ಎಂದು ಬ್ರಹ್ಮಾವರ ವಲಯ ಅರಣ್ಯ ಇಲಾಖೆಯ ಅಧಿಕಾರಿ ಮಾಲ್ತೇಶ್ ಅಳಲಗಿರಿ ಹೇಳಿದರು. ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರು ಸಾಸ್ತಾನ ಇವರ ವತಿಯಿಂದ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಅವರು ಮಾತನಾಡಿದರು. ಪರಿಸರ ಉಳಿದರೆ ಮನುಕುಲ ಉಳಿದಂತೆ ಇಲ್ಲವಾದಲ್ಲಿ ಅವನತಿ ಕಟ್ಟಿಟ್ಟ ಬುತ್ತಿ ಎಂದರು. ಇದೇ ವೇಳೆ ಸ್ಥಳೀಯರಿಗೆ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಗಿಡಗಳನ್ನು ಹಸ್ತಾಂತರಿಸಿದರು. ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರು ಸಾಸ್ತಾನ ಇದರ ಅಧ್ಯಕ್ಷ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮೋಸೆಸ್ ರೋಡ್ರಿಗಸ್, ಗೋಳಿಗರಡಿ ಕ್ಷೇತ್ರದ ಪಾತ್ರಿ ಶಂಕರ್ ಪೂಜಾರಿ, ಶಂಕರ್ ಕುಲಾಲ್, ಅನ್ಯನ್ಯತಾ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ, ಉಪಾಧ್ಯಕ್ಷ ಸೂರ್ಯ ಪೂಜಾರಿ, ಕಾರ್ಯದರ್ಶಿ ಅನಿಲ್ ಹಾಂಡ, ಗೋಪಾಲ ಐರೋಡಿ, ಸುರೇಶ್ ಪೂಜಾರಿ ಗುಂಡ್ಮಿ, ಟೂರಿಸ್ಟ್ ಅಧ್ಯಕ್ಷರು ರಾಘವೇಂದ್ರ ಓಣಿ ಮನೆ, ಹಾಗೂ ಅನ್ಯೋನ್ಯತ ಗೂಡ್ಸ್ ವಾಹನ ಚಾಲಕರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಉದಯ್ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರ ಸಂಘ: ವನಮಹೋತ್ಸವ
ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರ ಸಂಘ: ವನಮಹೋತ್ಸವ
Date:




By
ForthFocus™