Sunday, September 6, 2026
Sunday, September 6, 2026

ಸಿಒಡಿಪಿ: ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ವಿತರಣೆ

ಸಿಒಡಿಪಿ: ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ವಿತರಣೆ

Date:

ಮಂಗಳೂರು, ಜೂ.30: ಸಿಒಡಿಪಿ (ರಿ) ಮಂಗಳೂರು ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣೆ ಕಾರ‍್ಯಕ್ರಮ ಸಿಒಡಿಪಿ ಸಭಾಂಗಣದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪೀಟರ್ ಪಾವ್ಲ್ ಸಲ್ಡಾನ್ಹಾರವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು. ಈ ವರ್ಷದಲ್ಲಿ ಸಿಒಡಿಪಿ ಸಂಸ್ಥೆಯಿಂದ 160 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ದೊರಕಿದ್ದು, ನೆರವು ಸ್ವೀಕರಿಸಿದಲ್ಲಿ ಎಲ್ಲ ಸಮುದಾಯದ ವಿದ್ಯಾರ್ಥಿಗಳಿದ್ದರು. ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ಫಾ| ವಿನ್ಸೆಂಟ್ ಡಿ ಸೋಜರವರು ಬಿಷಪ್‌ರವರಿಗೆ ಹೂವಿನ ಗಿಡ ನೀಡಿ ಸ್ವಾಗತಿಸಿದರು. ಬಿಷಪ್ ಪೀಟರ್ ಪೌಲ್‌ರವರು ಬಡವರು ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿ ವೇತನದ ಚೆಕ್‌ಗಳನ್ನು ವಿತರಿಸಿದರು. ಅವರಿ ಶಿಕ್ಷಣದ ಮಹತ್ವ ಮತ್ತು ಈ ಉದಾತ್ತ ಧ್ಯೇಯದಲ್ಲಿ ಧರ್ಮಪ್ರಾಂತ್ಯದ ಪಾತ್ರದ ಬಗ್ಗೆ ಮಾತನಾಡಿದರು. ಸಿಒಡಿಪಿಸ್ ಸಂಸ್ಥೆಯ ಸಹ ನಿರ್ದೇಶಕರಾದ ಫಾ| ಲೊರೆನ್ಸ್ ಕುಟಿನ್ಹಾ ಹಾಗೂ ಪೋಷಕರ ಮತ್ತು ಮಕ್ಕಳ ಪ್ರತಿನಿಧಿಗಳಾದ ಪ್ಲೋರಿನ್ ಡಿ ಸೋಜ, ಕುಮಾರಿ ಜೊವಿಟಾ ಡಿ ಕೊಸ್ಟಾ ಮತ್ತು ಲೆನ್‌ವಿನ್ ವಾಸ್ ವೇದಿಕೆಯಲ್ಲಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಅರ್ಘ್ಯ ಪ್ರದಾನ

ಉಡುಪಿ, ಸೆ.5: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ಚಂದ್ರೋದಯ...

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...
error: Content is protected !!