ಇನ್ನಾ, ಜೂ.29: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಇನ್ನಾ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಬ್ಬನಡ್ಕ ಸೇವಾ ಯೋಜನಾ ಸಮಿತಿಯ ಅಧ್ಯಕ್ಷರಾದ ಇನ್ನಾ ಪ್ರೇಮ್ ಕುಲಾಲ್ ಅವರ ಪ್ರಯೋಜಕತ್ವದಲ್ಲಿ ಇನ್ನಾ ಕುರ್ಕಿಲಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ಲೇಖನಾ ಸಾಮಾಗ್ರಿ ವಿತರಿಸಲಾಯಿತು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಇನ್ನಾ ಕುರ್ಕಿಲಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಗ್ರೆಟ್ಟಾ ಮಸ್ಕರೇನ್ಹಸ್, ಜೆನೆಟ್ ಡೈನಾ ಸಾಂತುಮಯೋರ್, ಮಂಜುಳಾ ಕೆ ಮೊದಲಾದವರಿದ್ದರು.




By
ForthFocus™