Monday, September 28, 2026
Monday, September 28, 2026

ಫೋರ್ತ್‌ ಫೋಕಸ್‌ ಗೆ ‘2025ರ ಗಮನಾರ್ಹ ಸಂಸ್ಥೆ’ ಪ್ರಶಸ್ತಿ

ಫೋರ್ತ್‌ ಫೋಕಸ್‌ ಗೆ ‘2025ರ ಗಮನಾರ್ಹ ಸಂಸ್ಥೆ’ ಪ್ರಶಸ್ತಿ

Date:

ಉಡುಪಿ, ಜೂ.20: ಕುಂದಾಪುರದಲ್ಲಿ ಸ್ಥಾಪಿತವಾದ ಡಿಜಿಟಲ್ ಸೊಲ್ಯೂಶನ್ ಸಂಸ್ಥೆಯಾದ ಫೋರ್ತ್‌ಫೋಕಸ್‌ ಅನ್ನು ಬಿಸಿನೆಸ್ ಔಟ್‌ಲೈನ್ ಆಯೋಜಿಸಿದ: ಬಿಸಿನೆಸ್ ಎಲೈಟ್ ಅವಾರ್ಡ್‌ 2025 ಕಾರ್ಯಕ್ರಮದಲ್ಲಿ “2025ರಲ್ಲಿ ಗಮನಹರಿಸಬಹುದಾದ ಅತ್ಯುತ್ತಮ ಸಂಸ್ಥೆ” ಎಂಬ ಪ್ರಶಸ್ತಿಯಿಂದ ಗೌರವಿಸಲಾಗಿದೆ.

ಈ ಪ್ರಶಸ್ತಿಯು ಭಾರತದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ನವೀನತೆಗೆ ಪ್ರೋತ್ಸಾಹ ನೀಡುವ ಮತ್ತು ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಸಂಸ್ಥೆಗಳನ್ನ ಪ್ರತಿವರ್ಷ ಗುರುತಿಸುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಉದ್ಯಮದ ಮೇಲಿನ ಪರಿಣಾಮ, ನಾಯಕತ್ವದ ಗುಣ, ಮತ್ತು ಬೆಳವಣಿಗೆ ಸಾಮರ್ಥ್ಯಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಫೋರ್ತ್‌ಫೋಕಸ್‌ ಅನ್ನು ಈ ವರ್ಷದ ಅವಾರ್ಡ್‌ನ ಭಾಗವಾಗಿ ಆಯ್ಕೆ ಮಾಡಲಾಗಿದ್ದು, ಸಂಸ್ಥೆಯ ಸ್ಥಿರ ಸೇವಾ ದಕ್ಷತೆ ಮತ್ತು ಜಾಗತಿಕ ಕ್ಲೈಂಟ್ ನೆಟ್‌ವರ್ಕ್‌ಗೆ ಆದ ಆದರಣೆಯನ್ನು ಈ ಗೌರವ ಪ್ರತಿಬಿಂಬಿಸುತ್ತದೆ.

2015ರಲ್ಲಿ ಒಂದು ವ್ಯಕ್ತಿಯ ಫ್ರೀಲಾನ್ಸ್ ಪ್ರಾರಂಭವಾಗಿ ಬೆಳೆಯುತ್ತಿದ್ದ ಫೋರ್ತ್‌ಫೋಕಸ್‌, ಇಂದು 8+ ದೇಶಗಳಲ್ಲಿ 350ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುವ ಸಂಪೂರ್ಣ ಡಿಜಿಟಲ್ ಏಜೆನ್ಸಿಯಾಗಿ ಬೆಳೆದಿದೆ.

ಸಂಸ್ಥೆಯ ಪ್ರಮುಖ ಸೇವೆಗಳೆಂದರೆ:
– ವರ್ಡ್‌ಪ್ರೆಸ್ ವೆಬ್‌ಸೈಟ್ ಅಭಿವೃದ್ಧಿ, ಫಿಗ್ಮಾ-ಇಲಿಮೆಂಟರ್ ಪರಿವರ್ತನೆ ಸೇರಿದಂತೆ
– ಇ-ಕಾಮರ್ಸ್ ಅಭಿವೃದ್ಧಿ ಮತ್ತು ಕಸ್ಟಮ್ ವೆಬ್ ಅಪ್ಲಿಕೇಶನ್ ಪರಿಹಾರಗಳು
– UI/UX ವಿನ್ಯಾಸ, SEO ಆಪ್ಟಿಮೈಸೇಶನ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳು
– ಬ್ರಾಂಡಿಂಗ್ ಸೇವೆಗಳು, ಟ್ರೇಡ್‌ಮಾರ್ಕ್ ನೋಂದಣಿ ಮತ್ತು ಐಡೆಂಟಿಟಿ ವಿನ್ಯಾಸ
– ಹೋಟೆಲ್ ತಂತ್ರಜ್ಞಾನ: ಬುಕ್ಕಿಂಗ್ ಎಂಜಿನ್, ಚಾನೆಲ್ ಮ್ಯಾನೇಜರ್ ಮತ್ತು ರೆವೆನ್ಯೂ ಮ್ಯಾನೇಜ್ಮೆಂಟ್ ಸಾಧನಗಳು

“Bridging Invention and Impact in the Digital Age” ಎಂಬ ಶೀರ್ಷಿಕೆಯಲ್ಲಿ ಪ್ರಕಟಿತ ಲೇಖನದಲ್ಲಿ ಫೋರ್ತ್‌ಫೋಕಸ್‌ ಸಂಸ್ಥೆಯ ಬೆಳವಣಿಗೆಗಥೆ, ಗ್ರಾಹಕಾಧಾರಿತ ಸೇವಾ ದೃಷ್ಟಿಕೋಣ ಮತ್ತು WordPress open-source ಸಮುದಾಯದಲ್ಲಿ ನೀಡುತ್ತಿರುವ ಕೊಡುಗೆಗಳನ್ನು ಮೆಚ್ಚಿತು.

“ನಾವು ಸೃಜನಾತ್ಮಕತೆ ಮತ್ತು ತಂತ್ರಜ್ಞಾನವನ್ನು ಸಮನುಯಾಯವಾಗಿ ಬಳಸಿ ವ್ಯವಹಾರ ವೃದ್ಧಿಗೆ ಸಾಕ್ಷಿಯಾಗಲು ಮುಂದಾಗಿದ್ದೇವೆ. ಈ ಮಾನ್ಯತೆ ನಮ್ಮ ತಂಡದ ನಿರಂತರ ಶ್ರಮ ಮತ್ತು ದೃಢತೆಗಾಗಿ ಸಿಕ್ಕಿರುವ ಮಾನ್ಯತೆ” ಎಂದು ಸಂಸ್ಥಾಪಕ ಮತ್ತು ನಿರ್ದೇಶಕ ವಿ. ಗೌತಮ್ ನಾವಡ ಹೇಳಿದರು.

ಈ ಪ್ರಶಸ್ತಿ ಫೋರ್ತ್‌ಫೋಕಸ್‌ನನ್ನು ಭಾರತದ ಬೆಳೆದೋರುವ ಡಿಜಿಟಲ್ ನಾಯಕರ ಪೈಕಿ ಒಂದಾಗಿ ಸ್ಥಾಪಿಸುತ್ತಿದ್ದು, ವೆಬ್ ಡೆವಲಪ್ಮೆಂಟ್, ಬ್ರಾಂಡಿಂಗ್, ಮೊಬೈಲ್ ಅಪ್ಲಿಕೇಶನ್, ಇ-ಕಾಮರ್ಸ್ ಮತ್ತು ಹೋಟೆಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಗ್ರಾಹಕನ್ವಯಿತ ಪರಿಹಾರಗಳನ್ನು ನೀಡುವ ಬದ್ಧತೆಯನ್ನೂ ದೃಢಪಡಿಸುತ್ತದೆ.

ಫೋರ್ತ್‌ಫೋಕಸ್‌ ಸಂಪರ್ಕ ವಿವರಗಳು:
Website: http://www.forthfocus.com
LinkedIn: https://in.linkedin.com/company/forthfocus

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟಾಟಾ ಏರಿಸ್ ಬಿಡುಗಡೆ: ಮಾರುತಿ ಡಿಜೈರ್‌ಗೆ ಹೊಸ ಪ್ರತಿಸ್ಪರ್ಧಿಯಾಗಲಿದೆಯೇ ಈ ಕಾರು?

ನವದೆಹಲಿ, ಸೆ.26: ಟಾಟಾ ಮೋಟಾರ್ಸ್ ಭಾರತದಲ್ಲಿ 'ಏರಿಸ್' ಅನ್ನು ರೂ. 5.29...

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನಕ್ಕೆ ಪೋರ್ಚುಗಲ್ ಮತ್ತು ಮಾರಿಷಸ್ ಬೆಂಬಲ

ನವದೆಹಲಿ, ಸೆ.26: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯುವ ಭಾರತದ...

ಏಷ್ಯನ್ ಗೇಮ್ಸ್‌ ಕಬಡ್ಡಿ: ಭಾರತಕ್ಕೆ ಅವಳಿ ಚಿನ್ನ

ಯು.ಬಿ.ಎನ್.ಡಿ., ಸೆ.26: ಜಪಾನ್‌ನಲ್ಲಿ ನಡೆಯುತ್ತಿರುವ ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ...

ಎಸ್.ಐ.ಆರ್ ಆದೇಶ ಸರ್ವಾನುಮತದಿಂದ ಅನುಮೋದನೆ: ಚುನಾವಣಾ ಆಯೋಗ

ನವದೆಹಲಿ, ಸೆ.26: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್.ಐ.ಆರ್ ಆದೇಶ...
error: Content is protected !!