ಮಣಿಪಾಲ, ಜೂ.17: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ, ಕೇಂದ್ರ ಆಯುಷ್ ಸಚಿವಾಲಯ ಮತ್ತು ಸಿಸಿ ಆರ್ ವೈ ಎನ್ ನವದೆಹಲಿ, ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಯೋಗ ಅಂಡ್ ನ್ಯಾಚುರೋಪಥಿ ಇವರ ಸಂಯುಕ್ತ ಆಶ್ರಯದಲ್ಲಿ ಮಧುಮೇಹಕ್ಕೆ ಯೋಗ ಚಿಕಿತ್ಸೆ ವಿಷಯವಾಗಿ ಒಂದು ದಿನದ ಉಚಿತ ವಿಚಾರಗೋಷ್ಠಿ ಮತ್ತು ಕಾರ‍್ಯಾಗಾರವನ್ನು ಮುನಿಯಾಲ್ ಸಮೂಹ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ತಜ್ಞ ವೈದ್ಯರುಗಳಾದ ಮಣಿಪಾಲದ ಕೆ ಎಮ್ ಸಿ ಯ ಜನರಲ್ ಮೆಡಿಸಿನ್ ವಿಭಾಗದ ಸಹಪ್ರಾಧ್ಯಾಪಕಿಯಾದ ಡಾ. ಶುಭದಾ, ಎಸ್‌ಡಿಎಮ್ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ, ಆಳ್ವಾಸ್ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆಯಾದ ಡಾ. ವನಿತಾ ಶೆಟ್ಟಿ ಹಾಗೂ ಶಾರದ ಯೋಗ ಮತ್ತು ನ್ಯಾಚುರೋಪಥಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನಂದೀಶ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಮಧುಮೇಹದ ಸಂಬಂಧಿತ ತಪ್ಪು ಕಲ್ಪನೆಗಳು ಮತ್ತು ಸತ್ಯಗಳು, ಯೋಗ ಚಿಕಿತ್ಸೆ, ಒತ್ತಡ ನಿರ್ವಹಣೆ ಮತ್ತು ಯೋಗ ಪ್ರರ‍್ಶನಗಳಂತಹ ಪ್ರಮುಖ ವಿಷಯಗಳನ್ನು ಪ್ರಸ್ತುತಪಡಿಸಲಾಗಿತ್ತು.
ಮಧುಮೇಹಕ್ಕೆ ಯೋಗ ಚಿಕಿತ್ಸೆ
ಮಧುಮೇಹಕ್ಕೆ ಯೋಗ ಚಿಕಿತ್ಸೆ
Date:




By
ForthFocus™