Wednesday, November 18, 2026
Wednesday, November 18, 2026

ಶ್ರೀ ಕೃಷ್ಣ ಬಾಲನಿಕೇತನಕ್ಕೆ ಆಟದ ಉಪಕರಣಗಳೊಂದಿಗೆ ಮರಳು ಗುಂಡಿ ಕೊಡುಗೆ

ಶ್ರೀ ಕೃಷ್ಣ ಬಾಲನಿಕೇತನಕ್ಕೆ ಆಟದ ಉಪಕರಣಗಳೊಂದಿಗೆ ಮರಳು ಗುಂಡಿ ಕೊಡುಗೆ

Date:

ಉಡುಪಿ, ಜೂ.17: ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನಕ್ಕೆ ಮಕ್ಕಳಿಗಾಗಿ ಆಟದ ಉಪಕರಣಗಳೊಂದಿಗೆ ಮರಳುಗುಂಡಿಯನ್ನು ಕೆನರಾ ಬ್ಯಾಂಕ್ ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ ನೀಡಿದ್ದು ಅದರ ಹಸ್ತಾಂತರ ಮತ್ತು ಉದ್ಘಾಟನೆಯನ್ನು ಮಣಿಪಾಲ ವೃತ್ತ ಕಚೇರಿಯ ಜನರಲ್ ಮೆನೇಜರ್ ಎಚ್ ಕೆ ಗಂಗಾಧರ್ ಅವರು ನೆರೆವೇರಿಸಿ ಬ್ಯಾಂಕ್ ಮಕ್ಕಳಿಗಾಗಿ ನೀಡಿದ ಈ ಕೊಡುಗೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಶುಭ ಹಾರೈಸಿದರು. ಸಂಸ್ಥೆಯ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಣಿಪಾಲ ವೃತ್ತ ಕಚೇರಿಯ ಉಪ ಮಹಾಪ್ರಬಂಧಕ ಪಿ ಕೆ ದಾಸ್, ಸಂಸ್ಥೆಯ ಉಪಾಧ್ಯಕ್ಷ ಪ್ರೊ. ಕಮಲಾಕ್ಷ, ಸಂಸ್ಥೆಯ ರಘುರಾಮಾಚಾರ್ಯ, ಬಿ. ಕೆ ನಾರಾಯಣ, ಕೆ ಸುಬ್ರಹ್ಮಣ್ಯ ಕಾರಂತ, ಮಾತಾಜಿ ಮತ್ತು ಮಕ್ಕಳು ಉಪಸ್ಥಿತರಿದ್ದರು. ಗುರುರಾಜ್ ಭಟ್ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸನ್ಮತಿ ಮಾಸಿಕ ಸಂಚಿಕೆ ಬಿಡುಗಡೆ, ತಿಂಗಳ ಅಂಗಳ ಸಂವಾದ

ಉಡುಪಿ, ನ.18: ಎಲ್‌ನಿನೋ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆ...

ಕಡೆಕಾರು: ಉಚಿತ ಕಣ್ಣಿನ ತಪಾಸಣಾ ಶಿಬಿರ

ಉಡುಪಿ, ನ.18: ಕೆ.ಎಂ.ಸಿ. ಮಣಿಪಾಲದ ಕಣ್ಣಿನ ವಿಭಾಗ, ಆಪ್ಟೋಮಿಟ್ರಿ ವಿಭಾಗ ಹಾಗೂ...

ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50 ರ ರಿಯಾಯಿತಿ

ಉಡುಪಿ, ನ.17: ಕನ್ನಡ ರಾಜ್ಯೋತ್ಸವದ ಅಂಗವಾಗಿ 2026 ರ ನವೆಂಬರ್ ತಿಂಗಳು...
error: Content is protected !!