Saturday, November 21, 2026
Saturday, November 21, 2026

ಸುರೇಶ ಉಪ್ಪೂರು ಅವರಿಗೆ ನಾದಾಮೃತ ಕಲಾದೀವಿಗೆ ದಿ.ನಗರ ಸುಬ್ರಹ್ಮಣ್ಯ ಆಚಾರ್ ಪ್ರಶಸ್ತಿ

ಸುರೇಶ ಉಪ್ಪೂರು ಅವರಿಗೆ ನಾದಾಮೃತ ಕಲಾದೀವಿಗೆ ದಿ.ನಗರ ಸುಬ್ರಹ್ಮಣ್ಯ ಆಚಾರ್ ಪ್ರಶಸ್ತಿ

Date:

ಕೋಟ, ಏ.20: ನಾದಾಮೃತ ಕಲಾದೀವಿಗೆ ಎನ್ನುವ ಸಂಸ್ಥೆಯ ಮೂಲಕ ರಾಘವೇಂದ್ರ ಹೆಗಡೆ ಯಲ್ಲಾಪುರ ಇವರು ಕಳೆದ ಐದು ವರ್ಷಗಳಿಂದ ನೀಡುತ್ತಿರುವ ದಿ.ನಗರ ಸುಬ್ರಹ್ಮಣ್ಯ ಆಚಾರ್ ಇವರ ಸ್ಮರಣಾರ್ಥ ಪ್ರಶಸ್ತಿಯನ್ನು ಖ್ಯಾತ ಭಾಗವತ ದಿ.ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಪುತ್ರ ಮದ್ದಲೆ ವಾದಕ ಸುರೇಶ ಉಪ್ಪೂರು ಇವರಿಗೆ ಪಾರಂಪಳ್ಳಿಯ ರಾಘವೇಂದ್ರ ಹೆಗಡೆ ಸ್ವಗೃಹದಲ್ಲಿ ಪ್ರದಾನಿಸಲಾಯಿತು. ಸಭೆಯಲ್ಲಿ ಹಂಗಾರಕಟ್ಟೆ ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ.ಆದರ್ಶ ಹೆಬ್ಬಾರ್, ಉಪನ್ಯಾಸಕ ಪ್ರೊ.ಪವನ್ ಕಿರಣಕೆರೆ, ಕೆ.ಎಂಸಿ ವೈದ್ಯರಾದ ಡಾ.ಕೌಶಿಕ್ ಉರಾಳ್, ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಹೆಗಡೆ, ಪತ್ನಿ ನಮನ ಹೆಗಡೆ ಉಪಸ್ಥಿತರಿದ್ದರು. ಪ್ರಸಿದ್ಧ ಕಲಾವಿದರಿಂದ ಗಾನವೈಭವ ಕಾರ್ಯಕ್ರಮ ನಡೆಯುತು. ಗಾನವೈಭವದಲ್ಲಿ ಭಾಗವತರಾದ ಸುರೇಶ ಶೆಟ್ಟಿ ಶಂಕರನಾರಾಯಣ, ಪ್ರಸನ್ ಭಟ್ ಬಾಳ್ಕಲ್, ಸುಧೀರ ಭಟ್ ಪೆರ್ಡೂರು, ಎನ್ ಜಿ ಹೆಗಡೆ ಯಲ್ಲಾಪುರ, ಶಿವಾನಂದ ಕೋಟ ಭಾಗವಹಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೀವ್ರತರ ಅತಿಸಾರ ಭೇದಿ ನಿಯಂತ್ರಣ ಅಭಿಯಾನ

ಉಡುಪಿ, ನ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ...

‘ಮಕ್ಕಳ ರಕ್ಷಣೆಯಲ್ಲಿ ಪೊಲೀಸ್ ಇಲಾಖೆ ಪಾತ್ರ’ -ಒಂದು ದಿನದ ತರಬೇತಿ ಕಾರ್ಯಾಗಾರ

ಉಡುಪಿ, ನ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,...

ಶಾಸ್ತ್ರೀಯ ಶಿಸ್ತು ಜಾನಪದ ಸ್ವಾತಂತ್ರ‍್ಯದಿಂದ ಯಕ್ಷಗಾನಕ್ಕೆ ಜನಮನ್ನಣೆ: ಪ್ರೊ. ಎಂ.ಎಲ್. ಸಾಮಗ

ಉಡುಪಿ, ನ.20: ಸಾಂಸ್ಕೃತಿಕ ವಿಶ್ವ ಮನ್ನಣೆ ಪಡೆಯಲು ರಾಜ್ಯದ ಎಲ್ಲಾ ಭಾಗವು...

ಸರಸ್ವತಿ ವಿದ್ಯಾಲಯ: ಕನ್ನಡ ಸಿರಿ ಕಾರ್ಯಕ್ರಮ

ಗಂಗೊಳ್ಳಿ, ನ.20: ಒಂದು ಭಾಷೆ ಬೆಳೆಯಲು ವಿವಿಧ ಭಾಷೆಗಳ ನಡುವೆ ಸಮನ್ವಯ...
error: Content is protected !!