ಕಾಪು, ಏ.20: ಬಾಲಿವುಡ್ ನ ಖ್ಯಾತ ನಟ ಸುನಿಲ್ ಶೆಟ್ಟಿ ತನ್ನ ಕುಟುಂಬ ಸಮೇತ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಬ್ರಹ್ಮಕಲಶೋತ್ಸವದ ಮೂಲಕ ಹೊಸ ಮೆರುಗು ಪಡೆದಿರುವ ದೇವಾಲಯದಲ್ಲಿ ಶಿಲ್ಪಗಳ ರಚನೆಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡಿನಲ್ಲಿ ನಡೆಯುತ್ತಿರುವ ಉತ್ಸವದ ಪ್ರಯುಕ್ತ ತಾಯಿಯ ಜೊತೆ ಸುನಿಲ್ ಶೆಟ್ಟಿ ಬಂದಿದ್ದರು. ಮೂಲತಃ ಮೂಲ್ಕಿಯವರಾದ ಸುನಿಲ್ ಶೆಟ್ಟಿ ಇದೇ ವೇಳೆ ಕಾಪು ಕ್ಷೇತ್ರಕ್ಕೆ ಭೇಟಿಕೊಟ್ಟು, ತನ್ನ ತಾಯಿಗೆ ಮಾರಿಯಮ್ಮನ ದರ್ಶನ ಮಾಡಿಸಿದರು. ಸುನಿಲ್ ಶೆಟ್ಟಿಯ ಅನೇಕ ಬಂಧುಗಳು ಜೊತೆಗಿದ್ದರು. ದೇಗುಲದ ಅಭಿವೃದ್ಧಿ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿ ವತಿಯಿಂದ ಸುನಿಲ್ ಶೆಟ್ಟಿ ಹಾಗೂ ಅವರ ತಾಯಿಯನ್ನು ಗೌರವಿಸಲಾಯಿತು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಭೇಟಿ
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಭೇಟಿ
Date:




By
ForthFocus™