ಉಡುಪಿ, ಮಾ.21: ವಾರಾಹಿ ನೀರಾವರಿ ಯೋಜನೆಯಡಿಯಲ್ಲಿ ಬರುವ ಕಾಲುವೆ ಪ್ರದೇಶದಲ್ಲಿ ತುರ್ತು ದುರಸ್ಥಿ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳಲಿರುವ ಹಿನ್ನೆಲೆ, ಈಗಾಗಲೇ ಬೇಸಿಗೆ ಹಂಗಾಮಿಗೆ ಸಂಬಂಧಿಸಿದಂತೆ ಕಾಲುವೆಯಲ್ಲಿ ಹರಿಸಿರುವ ನೀರನ್ನು ಮಾರ್ಚ್ 23 ರಿಂದ 30 ರ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ರೈತಾಪಿ ಬಾಂಧವರು ಇಲಾಖೆಯೊಂದಿಗೆ ಸಹಕರಿಸುವಂತೆ ಸಿದ್ಧಾಪುರ ವಾರಾಹಿ ಜಲಾಶಯ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರರ ಕಚೇರಿ ಪ್ರಕಟಣೆ ತಿಳಿಸಿದೆ.




By
ForthFocus™