Tuesday, October 6, 2026
Tuesday, October 6, 2026

ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್ ಶಿಬಿರ ಸಂಪನ್ನ

ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್ ಶಿಬಿರ ಸಂಪನ್ನ

Date:

ಉಡುಪಿ, ಮಾ.5: ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಭಾರತೀಯ ರೆಡ್ ಕ್ರಾಸ್‌ನ ಯುವ ರೆಡ್‌ಕ್ರಾಸ್ ಘಟಕದ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಇತ್ತೀಚೆಗೆ ನೀಲಾವರದ ಗೋವರ್ಧನ ಗೋಶಾಲೆಯಲ್ಲಿ ನಡೆಯಿತು. ಸಮಾರೋಪ ಭಾಷಣ ಮಾಡಿದ ಜಿಲ್ಲಾ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಅವರು ರೆಡ್‌ಕ್ರಾಸ್‌ನ ಮೌಲ್ಯಗಳಾದ ಮಾನವೀಯತೆ, ಐಕ್ಯತೆ, ಸ್ವಾತಂತ್ರö್ಯ, ಸಹಬಾಳ್ವೆ, ಏಕತೆಗಳ ಮಹತ್ವವನ್ನು ವಿವರಿಸಿ, ಶಿಬಿರವು ಸ್ವಯಂ ಸೇವಕರ
ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಬೆಳೆಸಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, 160 ವರ್ಷಗಳ ಇತಿಹಾಸವಿರುವ ರೆಡ್‌ಕ್ರಾಸ್ ಜಗತ್ತಿನಾದ್ಯಂತ ಮಾನವೀಯ ಸೇವೆಗೆ ಹೆಸರಾಗಿದೆ. ಇದರ ಪರಿಚಯವನ್ನು ಸ್ವಯಂ ಸೇವಕರಿಗೆ ಮಾಡಿಸುವುದು ಶಿಬಿರದ ಉದ್ದೇಶವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಕಾರ್ಯಕ್ರಮ ಅಧಿಕಾರಿ ದೀಪಿಕಾ, ಶಿಬಿರಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸ್ವಯಂಸೇವಕ ರಾಮ ಸ್ವಾಗತಿಸಿ, ಭಾರ್ಗವ ನಿರ್ವಹಿಸಿ, ಐಕ್ಯ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅ.8: ನೇರ ಸಂದರ್ಶನ

ಉಡುಪಿ, ಅ.5: ನಗರದ ಶಾಂತ ಎಲೆಕ್ಟ್ರಿಕಲ್ಸ್ ಪ್ರೈ ಲಿ., ಆಭರಣ ಜುವೆರ‍್ಸ್...

ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಅಭಿವಿನ್ಯಾಸ ಕಾರ್ಯಕ್ರಮ

ಕುಂದಾಪುರ, ಅ.5: ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ...

ವಿಶ್ವ ಕೊಂಕಣಿ ಕೇಂದ್ರ: ಕನಕದಾಸರ ಸಾಹಿತ್ಯ ವಿಚಾರಸಂಕಿರಣ; ಗೀತ ಗಾಯನ

ಮಂಗಳೂರು, ಅ.5: ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ವಿಶ್ವ ಕೊಂಕಣಿ...

‘ಗಾಂಧೀ ಚಿಂತನೆ ಮತ್ತು ಪ್ರಸ್ತುತತೆ’ ಉಪನ್ಯಾಸ

ಬಸ್ರೂರು, ಅ.5: ಗಾಂಧೀ ಜಯಂತಿ ಪ್ರಯುಕ್ತ ಶ್ರೀ ಶಾರದಾ ಕಾಲೇಜು ಬಸ್ರೂರಿನಲ್ಲಿ...
error: Content is protected !!