Monday, October 5, 2026
Monday, October 5, 2026

ನಗರಸಭಾ ವ್ಯಾಪ್ತಿಯ ಆಸ್ತಿ ಮಾಲೀಕರುಗಳಿಗೆ ಸೂಚನೆ

ನಗರಸಭಾ ವ್ಯಾಪ್ತಿಯ ಆಸ್ತಿ ಮಾಲೀಕರುಗಳಿಗೆ ಸೂಚನೆ

Date:

ಉಡುಪಿ, ಮಾ.5: ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಆಸ್ತಿ ಮಾಲೀಕರುಗಳು ಸರ್ಕಾರದ ಅಧಿಸೂಚನೆಯಂತೆ ನಮೂನೆ-3 ಮತ್ತು ನಮೂನೆ-3ಎ ಗಳನ್ನು ಸೃಜಿಸಿ, ತುರ್ತಾಗಿ ನಿಗದಿತ ಕಾಲಾವಧಿಯೊಳಗೆ ನೀಡುವಂತೆ ಆದೇಶಿಸಿದ್ದು, ಇದುವರೆಗೂ ಇ- ಆಸ್ತಿ ನಮೂನೆ-3 ನ್ನು ಪಡೆಯದ ಸ್ವತ್ತುಗಳಿಗೆ ಸಂಬಂಧಿಸಿದಂತೆ ನಗರಸಭಾ ಕಛೇರಿಯಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಪಡೆದು ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಿ, ಅಧಿಕೃತ ನಮೂನೆ-3 ಅಥವಾ ಅನಧಿಕೃತ ನಮೂನೆ-3ಎ ಗಳನ್ನು ಮಾರ್ಚ್ 31 ರ ಒಳಗಾಗಿ ಪಡೆದುಕೊಳ್ಳಬೇಕು. ನಮೂನೆ-3ಎ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು: ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಭೀತು ಪಡಿಸುವ ದಿನಾಂಕ: 10-09-2024ರ ಪೂರ್ವದಲ್ಲಿ ನೋಂದಾಯಿತ ವಿಭಾಗ ಪತ್ರ/ಕ್ರಯ ಪತ್ರ/ದಾನ ಪತ್ರ/ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣ ಭಾರ ಪ್ರಮಾಣ ಪತ್ರ, ಪ್ರಸಕ್ತ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿರುವ ರಶೀದಿ ಪ್ರತಿ (ವಿವರ ಪಟ್ಟಿ ಮತ್ತು ಚಲನ್), ಆರ್‌ಟಿಸಿ (15 ದಿನಗಳ ಒಳಗಿನ ಒರಿಜಿನಲ್), ಮಾಲೀಕರ ಮತದಾರರ ಗುರುತಿನ ಚೀಟಿ ಮೊಬೈಲ್ ಸಂಖ್ಯೆ/ಡ್ರೈವಿಂಗ್ ಲೈಸನ್ಸ್/ಪಾನ್ ಕಾರ್ಡ್/ ಪಡಿತರ ಚೀಟಿ , ಮಾಲೀಕರ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ, ಸ್ವತ್ತಿನ ಕಲರ್ ಫೋಟೊ ಹಾಗೂ ವಿದ್ಯುತ್ ಬಿಲ್ (ಆರ್.ಆರ್ ನಂಬ್ರ) ಮತ್ತು ನಳ್ಳಿ ಜೋಡಣಾ ಸಂಖ್ಯೆ.

ಹೆಚ್ಚಿನ ಮಾಹಿತಿಗಾಗಿ ಉಡುಪಿ ನಗರಸಭಾ ಕಚೇರಿಯ ಕಂದಾಯ ವಿಭಾಗ ಮತ್ತು ತಮ್ಮ ಹತ್ತಿರದ ಉಪಕಚೇರಿಗಳನ್ನು ಅಥವಾ ವೆಬ್‌ಸೈಟ್ http://www.udupicity.mrc.gov.in, ಇ-ಮೇಲ್ : ka.udupi.cmc@gmail.com ಹಾಗೂ ಸಹಾಯವಾಣಿ ಸಂಖ್ಯೆ: 0824-2520306 ಅನ್ನು ಸಂಪಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಜಾನಕಿ ನಮನ’

ಉಡುಪಿ, ಅ.4: ಉಡುಪಿಯ ಕೋಸ್ಟಲ್‌ ಸ್ಟಾರ್‌ ಮ್ಯೂಸಿಕ್‌ ಕ್ಲಬ್‌ ಆಶ್ರಯದಲ್ಲಿ ಕರ್ಣಾಟಕ...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ನಿಖಿಲ್ ಗುಪ್ತ ಭೇಟಿ

ಕಾಪು, ಅ.4: ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ...

ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ

ಮಣಿಪಾಲ, ಅ.4: ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ...
error: Content is protected !!