ತಲ್ಲೂರು, ಫೆ.6: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಕೈಗಾರಿಕಾ ನಿಗಮ ಉಡುಪಿ ಸಹಯೋಗದಲ್ಲಿ ಕುಂದಾಪುರ ತಾಲೂಕು ಪಂಚಾಯತ್, ತಲ್ಲೂರು ಗ್ರಾಮ ಪಂಚಾಯತ್ ನ ಮಹಾಮಾಯಿ ಸಂಜೀವಿನಿ ಒಕ್ಕೂಟದ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಪಂಚಮಿ ಸಂಜೀವಿನಿ ಇಂಡಸ್ಟ್ರೀಸ್ ಉದ್ಘಾಟನಾ ಸಮಾರಂಭ ನಡೆಯಿತು. ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಕೇಂದ್ರ ಸರಕಾರದ ಯೋಜನೆಗಳಲ್ಲಿಯೇ ಅತ್ಯಂತ ಮಹತ್ವಕಾಂಕ್ಷಿ ಯೋಜನೆಯಾಗಿ ಸಂಜೀವಿನಿ ಯೋಜನೆ ರೂಪುಗೊಂಡಿದೆ. ಈ ಯೋಜನೆಯನ್ನು ಗ್ರಾಮೀಣ ಭಾಗದ ಮಹಿಳೆಯರು ಪಡೆದು ಸ್ವ ಉದ್ಯೋಗ ಕೈಗೊಂಡು ದೇಶದ ಆರ್ಥಿಕ ಅಭಿವೃದ್ದಿಗೆ ಕೊಡುಗೆ ನೀಡಬೇಕು. ಅಂತೆಯೇ ಕೇಂದ್ರ ಸರಕಾರದ ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಸ್ವ ಉದ್ಯೋಗ ಸೃಜಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ತಂದಿದ್ದು ಅದರಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ಕೊಡಮಾಡುವ ಪ್ರಧಾನ ಮಂತ್ರಿ ಉದ್ಯೋಗ ಸೃಜನ್ ಯೋಜನೆ (PMEGP) ಕೂಡ ಪ್ರಮುಖವಾಗಿದ್ದು ಈ ಯೋಜನೆಯನ್ನು ಸದ್ಭಳಕ್ಕೆ ಮಾಡಿಕೊಂಡಿರುವ ತಲ್ಲೂರು ಗ್ರಾಮ ಪಂಚಾಯತ್ ನ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಆಗಿರುವ ಶ್ರೀವಿದ್ಯಾ ಗ್ರಾಮೀಣ ಭಾಗದ ಮಹಿಳೆಯರಿಗೆ ಮಾದರಿಯಾಗಿರುತ್ತಾರೆ ಎಂದರು.
ಪಂಚಮಿ ಸಂಜೀವಿನಿ ಇಂಡಸ್ಟ್ರೀಸ್ ಲೋಗೋ ನಮಃ ಅನಾವರಣಗೊಳಿಸಲಾಯಿತು. ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ರವಿ ಕುಮಾರ ಗಂಗಪ್ಪ ಹುಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಿರೀಶ್ ಎಸ್ ನಾಯ್ಕ್ ವಹಿಸಿದ್ದರು. ಟಿಬಿ ಶೆಟ್ಟಿ ವಕೀಲರು ತಲ್ಲೂರು, ಚಂದ್ರಮತಿ ಹೆಗ್ಗಡೆ ಉಪಾಧ್ಯಕ್ಷರು ತಲ್ಲೂರು ಗ್ರಾ.ಪಂ, ಡಾ.ಉದಯ ಕುಮಾರ್ ತಲ್ಲೂರು ಗ್ರಾ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು, ರಾಮಚಂದ್ರ ಮಯ್ಯ ವ್ಯವಸ್ಥಾಪಕರು ತಾ.ಪಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರತ್ನ ಜಿ ಗ್ರಾ.ಪಂ ತಲ್ಲೂರು. ಶ್ರೀವಿದ್ಯಾ ತಲ್ಲೂರು ಮಹಮಾಯಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಎಸ್ ನಾರಯಣ್ ಪಿಡಬ್ಲ್ಯೂಡಿ ಕಂಟ್ರ್ಯಾಕ್ಟರ್, ಜೂಡಿತಾ ಮೆಂಡನಾ ಗ್ರಾ.ಪಂ ಸಧಸ್ಯರು, ಚಂದ್ರ ದೇವಾಡಿಗ ಸದಸ್ಯರು ಗ್ರಾ.ಪಂ ತಲ್ಲೂರು, ವಿಜಯ ಗಾಣಿಗ ತಾಲೂಕು ಚಿತ್ತಾರ ಒಕ್ಕೂಟದ ಅಧ್ಯಕ್ಷರು, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಸ್ವ ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು. ನಯನ ಸ್ವಾಗತಿಸಿ, ಶೈಲಜಾ ನಿರೂಪಿಸಿದರು. ದೀಪಾ ಮತ್ತು ವಿದ್ಯಾಶ್ರೀ ವಂದಿಸಿದರು.




By
ForthFocus™