Tuesday, July 28, 2026
Tuesday, July 28, 2026

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

Date:

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ ದೇಗುಲ ಕೋಡಿ ಕನ್ಯಾಣ ಇದರ ವಾರ್ಷಿಕ ಗೆಂಡೋತ್ಸವ ಮತ್ತು ಮಂಡಲ ಪೂಜೆ ತುಲಾಭಾರ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಶನಿವಾರ ವಾರ್ಷಿಕ ಗೆಂಡೋತ್ಸವದ ಅಂಗವಾಗಿ ಗಣಹೋಮ, ರಂಗಪೂಜೆ, ತುಳಸಿ ಪೂಜೆ, ಗೆಂಡ ಸೇವೆ, ಮಹಾ ಅನ್ನಸಂತರ್ಪಣೆ ಅದೇ ರೀತಿ ಭಾನುವಾರ ಶ್ರೀ ದೇವಿಗೆ ಮಹಾಮಂಗಳಾರತಿ, ಮಂಡಲಪೂಜೆ, ಹಣ್ಣುಕಾಯಿ, ತುಲಾಭಾರ ಹರಕೆ, ಅನ್ನಸಂತರ್ಪಣೆ, ಮಹಾಮಂಗಳಾರತಿ, ಮಹಾಬಲಿ ಪೂಜೆ, ಶೆಡಿ ಪೂಜೆ, ಬೆನಗಲ್ಲು ಪೂಜೆ, ಜೋಗಿ ಪರುಷನ ದರ್ಶನ, ಬಾಗಿಲು ಬೊಬ್ಬರ್ಯನ ದರ್ಶನ, ಅಜ್ಜಮ್ಮ ದೇವರಿಗೆ ಪುಷ್ಭಾರ್ಚನೆ ಕಾರ್ಯಕ್ರಮಗಳು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹಗಳ ಸಮ್ಮುಖದಲ್ಲಿ ಜರಗಿತು. ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ. ಶ್ರೀಧರ ಪುರಾಣಿಕ ತಂತ್ರಿಗಳು ನೆರವೇರಿಸಿದರು. ದೇಗುಲದ ಅರ್ಚಕ ವೃಂದ, ಆಡಳಿತ ಮಂಡಳಿ, ಊರ ಗಣ್ಯರು, ಭಕ್ತಾಧಿಗಳು ಜಾತ್ರೋತ್ಸವದಲ್ಲಿ ಭಾಗಿಯಾದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಾದಕ ವ್ಯಸನಗಳಿಂದ ಜಾಗೃತರಾಗಿರಿ

ಹಿರಿಯಡಕ, ಜು.28: ತಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ದುರುಪಯೋಗದ...

ಭಾರತೀಯ ಸೇನೆಯ ಶೌರ್ಯ ಸಾಹಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ನಮ್ಮ ಕರ್ತವ್ಯ: ಯೋಧ ಯೋಗೀಶ್ ಕಾಂಚನ್

ಕುಂದಾಪುರ, ಜು.26: ವೀರ ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುವುದರ ಜೊತೆಗೆ...

ನರೇಂದ್ರ ಎಸ್ ಗಂಗೊಳ್ಳಿಗೆ ಕಾವ್ಯಶ್ರೀ ಪ್ರಶಸ್ತಿ

ಗಂಗೊಳ್ಳಿ, ಜು.27: ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ ವತಿಯಿಂದ ಕೊಡಲ್ಪಡುವ...
error: Content is protected !!