Saturday, October 3, 2026
Saturday, October 3, 2026

ಭಗವದ್ಗೀತಾ ಲೇಖನ ಯಜ್ಞ ದೀಕ್ಷೆ ಪಡೆಯಲು ಅರುಣಾಚಲದಿಂದ ಉಡುಪಿಗೆ ಆಗಮಿಸಿದ ಅಭಿಘ್ಯಾ

ಭಗವದ್ಗೀತಾ ಲೇಖನ ಯಜ್ಞ ದೀಕ್ಷೆ ಪಡೆಯಲು ಅರುಣಾಚಲದಿಂದ ಉಡುಪಿಗೆ ಆಗಮಿಸಿದ ಅಭಿಘ್ಯಾ

Date:

ಉಡುಪಿ, ಜ.9: ಕೊರೊನಾ ಕಾಲಘಟ್ಟದಲ್ಲಿ ಸಾಂಕ್ರಾಮಿಕ ರೋಗ ಹಾವಳಿ ಬಗ್ಗೆ ಜ್ಯೋತಿಷ್ಯಾಧಾರಿತವಾಗಿ ಖಚಿತವಾಗಿ ಪರಿಹಾರ ನೀಡಿ ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ಸದಸ್ಯರನ್ನು ಹೊಂದಿ ತನ್ನ ಕಿರು ವಯಸ್ಸಿನಲ್ಲಿಯೇ ಅತ್ಯಂತ ಪ್ರಸಿದ್ದಿಯನ್ನು ಹೊಂದಿದ ಕುಮಾರ ಅಭಿಘ್ಯಾ ಇವರು ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದರು. ಇದಕ್ಕಾಗಿಯೇ ಅರುಣಾಚಲದ ತನ್ನ ಊರಿನಿಂದ ಉಡುಪಿಗೆ ಬೈಕ್ ಮೂಲಕ ಬಂದ ಸಾಹಸಿ ಈತ.

ಶ್ರೀಕೃಷ್ಣನ ವಿಶೇಷ ಭಕ್ತನಾಗಿ ಒಳ್ಳೆಯ ಸಂಸ್ಕಾರ ಪಡೆದ ಅಭಿಜ್ಞಾ ಶ್ರೀಪಾದರ ಕೋಟಿ ಗೀತಾ ಲೇಖನ ಯಜ್ಞದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಿಂದ ಪಡೆದು ಉಡುಪಿಗೆ ಆಗಮಿಸಿದ್ದು ವಿಶೇಷವಾಗಿದೆ.

ಪರ್ಯಾಯ ಪುತ್ತಿಗೆ ಶ್ರೀಪಾದರು ಈತನಿಗೆ ಇನ್ನಷ್ಟು ಸಮಾಜ ಸೇವೆ ಮಾಡುವಂತಾಗಲಿ ಎಂದು ಹರಸಿ ಭಗವದ್ಗೀತಾ ಲೇಖನ ದೀಕ್ಷೆಯನ್ನಿತ್ತು ಹರಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ- ದಶಮಾನೋತ್ಸವ ಕಾರ್ಯಕ್ರಮ ಹಾಗೂ ವಾರ್ಷಿಕ ಸಾಮಾನ್ಯ ಸಭೆ

ಉಡುಪಿ, ಅ.2: ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ, ಉಡುಪಿ...

ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

ಬೆಂಗಳೂರು, ಅ.2: ಮಹಾತ್ಮ ಗಾಂಧಿ ಜಯಂತಿಯ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ...

ಏಷ್ಯನ್ ಗೇಮ್ಸ್: ಭಾರತದ ಒಟ್ಟು ಪದಕಗಳ ಸಂಖ್ಯೆ 76ಕ್ಕೆ ಏರಿಕೆ; ಪದಕ ಪಟ್ಟಿಯಲ್ಲಿ ಐದನೇ ಸ್ಥಾನ

ಯು.ಬಿ.ಎನ್.ಡಿ., ಅ.2: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ...
error: Content is protected !!