Wednesday, December 4, 2024
Wednesday, December 4, 2024

ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ದೀಪೋತ್ಸವ

ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ದೀಪೋತ್ಸವ

Date:

ಕೋಟ, ನ.29: ಇಲ್ಲಿನ ಐತಿಹಾಸಿಕ ಪುರಾಣ ಪ್ರಸಿದ್ಧ ದೇಗುಲವಾದ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವಾರ್ಷಿಕ ದೀಪೋತ್ಸವ ಗುರುವಾರ ಜರಗಿತು. ಈ ಪ್ರಯುಕ್ತ ಕಿರಿ ರಂಗಪೂಜೆ, ತುಳಸಿಪೂಜೆ, ಬಲಿಪೂಜೆ, ಮಹಾಪೂಜೆ ಕ್ಷೇತ್ರಪಾಲ ಪೂಜೆ, ದೇಗುಲದ ತೀರ್ಥಕೆರೆಯಲ್ಲಿ ತೆಪೋತ್ಸವ ನಡೆಯಿತು. ಶ್ರೀ ದೇವರ ಉತ್ಸವ ಮೂರ್ತಿಯನ್ನು ಅರ್ಚಕ ರಾಜೇಂದ್ರ ಅಡಿಗ ತೀರ್ಥಕೆರೆ ತೇಪೋತ್ಸವಕ್ಕೆ ಕೊಂಡ್ಯೊಯ್ದರು. ದೇಗುಲದ ವತಿಯಿಂದ ಪನಿವಾರ ಸೇವೆ ನಡೆಯಿತು. ದೇಗುಲದ ಸುತ್ತ ಹಣತಗಳನ್ನಿಟ್ಟು ಭಕ್ತರು ಕಾರ್ತಿಕ ಮಾಸದ ದೀಪೋತ್ಸವದಲ್ಲಿ ವಿಜೃಂಭಿಸಿಕೊಂಡರು. ಈ ವೇಳೆ ದೇಗುಲದ ಪ್ರಧಾನ ಅರ್ಚಕ ಸದಾಶಿವ ಅಡಿಗ, ತಂತ್ರಿಗಳಾದ ನರಸಿಂಹ ಸೋಮಯಾಜಿ, ಸಹಾಯಕ ಅರ್ಚಕರಾದ ತೀರ್ಥೆಶ್ ಭಟ್, ಸುಬ್ರಹ್ಮಣ್ಯ ಅಡಿಗ, ಸ್ಥಳೀಯ ಭಕ್ತರಾದ ಜಿ.ಎಸ್ ಆನಂದ್ ದೇವಾಡಿಗ, ಅಜಿತ್ ದೇವಾಡಿಗ, ಸ್ಕಂದ ಶಂಕರ್, ದೇವಪ್ಪ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಗೋಶಾಲೆಗೆ ಬೈಹುಲ್ಲು ಕೊಡುಗೆ

ಬೆಳ್ಮಣ್, ಡಿ.3: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಬ್ರಹ್ಮಾವರ: ಗಾಳಿ ಮಳೆಗೆ ಮನೆಗಳಿಗೆ ಹಾನಿ

ಉಡುಪಿ, ಡಿ.3: ಚಂಡಮಾರುತದ ಪ್ರಭಾವದಿಂದ ಸೋಮವಾರ ಸುರಿದ ಭಾರೀ ಮಳೆಗೆ ಬ್ರಹ್ಮಾವರ...

ಸ್ನೇಹಿತರ ಬಳಗದಿಂದ ಭಾಸ್ಕರ್ ಶೆಟ್ಟಿ ಅವರಿಗೆ ಸನ್ಮಾನ

ಗಂಗೊಳ್ಳಿ, ಡಿ.3: ಉತ್ತಮ ಸ್ನೇಹಿತರನ್ನು ಹೊಂದುವುದು ಜೀವನದಲ್ಲಿ ನಾವು ಮಾಡುವ ಅತಿ...
error: Content is protected !!