Thursday, July 23, 2026
Thursday, July 23, 2026

ಕಾರಂತ ದೀವಿಗೆ 2024

ಕಾರಂತ ದೀವಿಗೆ 2024

Date:

ಕುಂದಾಪುರ, ಅ.13: ಶ್ರೀ ಶಾರದಾ ಕಾಲೇಜು ಬಸ್ಸೂರು ಕುಂದಾಪುರ ಇಲ್ಲಿನ ಕನ್ನಡ ವಿಭಾಗ ಮತ್ತು ಸಾಹಿತ್ಯ ಸಂಘ ಇದರ ಆಶ್ರಯದಲ್ಲಿ ಕಾರಂತರ ಜನ್ಮ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಒಂದು ದಿನದ ಪದವಿ ಕಾಲೇಜಿನ ವಿದ್ಯಾರ್ಥಿಗೆ ರಸಪ್ರಶ್ನೆ ಸ್ಪರ್ಧೆ ಮತ್ತು ಪ್ರಬಂದ ಮಂಡನೆ ಕಾರ್ಯಕ್ರಮ ಕಾಲೇಜಿನ ವೀರ ರಾಜೇಂದ್ರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕವಿಯತ್ರಿ ಸುಕನ್ಯಾ ಕಳಸ, ಕಾರಂತರು ಸಾರ್ವಕಾಲಿಕ ಶ್ರೇಷ್ಠ ಸಾಹಿತಿ ಮತ್ತು ತಮ್ಮ ಕಾವ್ಯಗಳಲ್ಲಿ ವೈಚಾರಿಕ ವಿಚಾರಧಾರೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರವಿಚಂದ್ರ, ಕಾರ್ಯಕ್ರಮ ಸಂಯೋಜಕರಾದ ಮಮತಾ ಕನ್ನಡ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಪ್ರತಿನಿಧಿ ನೀಶಾ ಉಪಸ್ಥಿತರಿದ್ದರು.

ಸಮರೋಪ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿನಿ ಲೇಖಕಿ ವಿಜಯಶ್ರೀ ಎಂ ಭಾಗವಹಿಸಿ ಕಾರಂತರ ಕೃತಿಗಳ ಬಗ್ಗೆ ವಿಶ್ಲೇಷೀಸಿದರು. ಉಡುಪಿ ಜಿಲ್ಲೆಯ ವಿವಿಧ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಬಂಧ ಮಂಡನೆ ಕಾರ್ಯಕ್ರಮದ ಸಮನ್ವಯಕಾರರಾಗಿ ಉಪನ್ಯಾಸಕಿ ರೇಷ್ಮಾ ಶೆಟ್ಟಿ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಉಪನ್ಯಾಸಕ ಅಕ್ಷಯ ಹೆಗ್ಡೆ ನಿರ್ವಹಿಸಿದರು. ಇತಿಹಾಸ ಉಪನ್ಯಾಸಕ ರಾಘವೇಂದ್ರ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕಿಯರಾದ ಪ್ರಮೀಳಾ, ಮತ್ತು ಅನಿತಾ ಎನ್ ನಿರ್ವಹಿಸಿದರು. ಸಂಯೋಜಕರಾದ ಮಮತಾ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬೊಮ್ಮರಬೆಟ್ಟು: ಗ್ರಾಮಸ್ಥರ ಅಹವಾಲು ಸ್ವೀಕಾರ

ಕಾಪು, ಜು.21: ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಸ್ವೀಕಾರ...

ರಿಕ್ಷಾ ಚಾಲಕರ ಅಗತ್ಯ ಬೇಡಿಕೆಗಳ ಈಡೇರಿಕೆಗೆ ವಿಶೇಷ ಆದ್ಯತೆ: ಯಶ್ಪಾಲ್ ಸುವರ್ಣ

ಬ್ರಹ್ಮಾವರ, ಜು.21: ಸಾರ್ವಜನಿಕರ ಸಾರಿಗೆ ವ್ಯವಸ್ಥೆಯಲ್ಲಿ ವಿಶೇಷ ಪಾತ್ರವಹಿಸುವ ರಿಕ್ಷಾ ಚಾಲಕರ...

ಬಡಾ ಗ್ರಾಮ ಪಂಚಾಯತ್: ವಿವಿಧ ಸವಲತ್ತು ವಿತರಣೆ

ಕಾಪು, ಜು.21: ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಸ್ವೀಕಾರ...

ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ ಸಾಧನೆಗೆ ಸ್ಪೂರ್ತಿ: ಡಾ.ಸುಧಾಕರ ಶೆಟ್ಟಿ

ಮಣಿಪಾಲ, ಜು.21: ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ ವಿದ್ಯಾರ್ಥಿಗಳ ಸಾಧನೆಗೆ...
error: Content is protected !!