ಉಡುಪಿ, ಜೂ,10: ದಾಖಲೆಯ 4339ನೇ ದಿನವನ್ನು ಪೂರೈಸಿದ, ಸತತವಾಗಿ 12 ವರ್ಷಗಳ ದೀರ್ಘಾವಧಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೀರ್ಘಾಯುಷ್ಯ ಕೋರಿ ಹಾಗೂ 2047ರ ವಿಕಸಿತ ಭಾರತದ ಸಂಕಲ್ಪ ಸಾಧನೆಯ ಯಶಸ್ಸನ್ನು ಕೋರಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪರ್ಯಾಯ ಶ್ರೀ ಶೀರೂರು ಶ್ರೀ ಕೃಷ್ಣ ಮಠದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಹಾಗೂ ಭಾರತೀಯ ಜನತಾಪಕ್ಷ ಉಡುಪಿ ಜಿಲ್ಲೆ ವತಿಯಿಂದ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.
ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ, ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ, ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಪ್ರ.ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ದಿನಕರ ಶೆಟ್ಟಿ, ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಸುಪ್ರಸಾದ್ ಶೆಟ್ಟಿ, ಮಹಿಳಾ ಮೋರ್ಚಾದ ಸಂಧ್ಯಾ ರಮೇಶ್, ನಯನಾ ಗಣೇಶ್, ವೀಣಾ ಶೆಟ್ಟಿ, ಪ್ರಜ್ಞಾ ಶೆಟ್ಟಿ, ಪದ್ಮಾ ರತ್ನಾಕರ್, ಅಜಿತ್ ಪೈ, ಶಾಮ್ ಪ್ರಸಾದ್ ಕುಡ್ವ ಉಪಸ್ಥಿತರಿದ್ದರು.




By
ForthFocus™