Tuesday, September 22, 2026
Tuesday, September 22, 2026

ದೈಹಿಕ ಮಾನಸಿಕ ಸ್ವಾಸ್ಥ್ಯ ಬಲಪಡಿಸಲು ಸೈಕ್ಲಿಂಗ್ ಸಹಕಾರಿ: ಪೇಜಾವರ ಸ್ವಾಮೀಜಿ

ದೈಹಿಕ ಮಾನಸಿಕ ಸ್ವಾಸ್ಥ್ಯ ಬಲಪಡಿಸಲು ಸೈಕ್ಲಿಂಗ್ ಸಹಕಾರಿ: ಪೇಜಾವರ ಸ್ವಾಮೀಜಿ

Date:

ಉಡುಪಿ: ನಮ್ಮ ಶರೀರದ ಮತ್ತು ಮನಸ್ಸಿನ ಸ್ವಾಸ್ಥ್ಯ ಉತ್ತಮವಾಗಿದ್ದರೆ ಮಾತ್ರ ಸದೃಡ ಜೀವನ ಸಾಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸೈಕ್ಲಿಂಗ್ ನಂತಹ ಚಿಟುವಟಿಕೆಗಳು ಸಹಕಾರಿ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಅವರು ಇಂದು ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ, ಕೆನರಾ ಬ್ಯಾಂಕ್ ವೃತ್ತ ಕಚೇರಿ ಮತ್ತು ವಸಂತಿ ಎ ಪೈ ಪ್ರತಿಷ್ಟಾನ ಮಣಿಪಾಲ ಇದರ ಆಶ್ರಯದಲ್ಲಿ ನಡೆದ ಆರೋಗ್ಯಕ್ಕಾಗಿ ಸೈಕ್ಲಿಂಗ್ ಜಾಥಾವನ್ನು ಸ್ವತಃ ಸೈಕಲ್ ಸವಾರಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮಣಿಪಾಲದಿಂದ ಮಲ್ಪೆ ಸೀ ವಾಕ್ ವರೆಗೆ ನಡೆದ ಈ ಜಾಥಾದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಮಲ್ಪೆ ಬೀಚ್ ನಲ್ಲಿ ಆರೋಗ್ಯ ಮತ್ತು ಫಿಟ್ ಇಂಡಿಯಾ ಕುರಿತು ಕ್ವಿಚ್ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ್ ಉಡುಪ, ಕೆನರಾ ಬ್ಯಾಂಕ್ ಡಿಜಿಎಂ ಪದ್ಮಾವತಿ, ವೈದ್ಯಕೀಯ ಪ್ರಕೋಷ್ಟ ಸಂಚಾಲಕ ಡಾ. ರಾಮಚಂದ್ರ ಕಾಮತ್, ಸಹ ಸಂಚಾಲಕ ಡಾ. ವಿದ್ಯಾಧರ ಶೆಟ್ಟಿ, ರಾಜ್ಯ ಕಾ.ಸದಸ್ಯ ಡಾ. ವಿಜಯಿಂದ್ರ ವಸಂತ್, ಸೆಲ್ಕೋ ಸೋಲಾರ್ ಡಿಜಿಎಂ ಜಗದೀಶ್ ಪೈ, ಡಾ. ರವೀಂದ್ರ ಕುಂದಾಪುರ, ವಿಶಾಲ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.

ಮೇ. ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು. ಭಾಗವಹಿಸಿದವರಿಗೆ ಟೀ-ಶರ್ಟ್ ಮತ್ತು ಪ್ರಮಾಣ ಪತ್ರ ನೀಡಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ಪ್ರೇರಣಾ ಮತ್ತು ಸಾನ್ವಿ ವಿಭಾಗ ಮಟ್ಟಕ್ಕೆ ಆಯ್ಕೆ

ಉಡುಪಿ, ಸೆ.22: ಉಡುಪಿ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ...

ಓಪನ್‌ ಎಐ ಸೆಲೆಕ್ಟ್ ಪಾರ್ಟ್ನರ್ ಆಗಿ ಫೋರ್ಥ್‌ ಫೋಕಸ್ ಆಯ್ಕೆ

ಕುಂದಾಪುರ,  ಸೆ.22: ಕರ್ನಾಟಕ ಮೂಲದ ತಂತ್ರಜ್ಞಾನ ಸಂಸ್ಥೆ ಫೋರ್ಥ್‌ಫೋಕಸ್, ಜಾಗತಿಕ ಓಪನ್‌ಎಐ...

ಒಂದು ವರ್ಷ ಪೂರ್ಣಗೊಳಿಸಿದ ಮಣಿಪಾಲ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್

ಮಣಿಪಾಲ, ಸೆ. 21 ಸೆಪ್ಟೆಂಬರ್ 2026 : ಮಣಿಪಾಲ ಅಕಾಡೆಮಿ ಆಫ್...
error: Content is protected !!