Monday, November 2, 2026
Monday, November 2, 2026

ಕಸಾಪ ಉಡುಪಿ ಜಿಲ್ಲಾ ಕಾರ್ಯಕಾರಿ ಸಮಿತಿ, ತಾಲೂಕು ಅಧ್ಯಕ್ಷರ ಘೋಷಣೆ

ಕಸಾಪ ಉಡುಪಿ ಜಿಲ್ಲಾ ಕಾರ್ಯಕಾರಿ ಸಮಿತಿ, ತಾಲೂಕು ಅಧ್ಯಕ್ಷರ ಘೋಷಣೆ

Date:

ಉಡುಪಿ: ಕಿದಿಯೂರು ಹೋಟೆಲ್ ನಲ್ಲಿ ನಡೆದ ಜಿಲ್ಲಾ ಕಸಾಪ ಸಭೆಯಲ್ಲಿ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿಯವರು ಅನುಮೋದಿಸಿ ಕಳುಹಿಸಿಕೊಟ್ಟ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರುಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಸಭೆಗೆ ತಿಳಿಸಿದರು. ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಗೌರವ ಕೋಶಾಧ್ಯಕ್ಷರು ಮನೋಹರ ಪಿ.

ತಾಲೂಕುವಾರು ಅಧ್ಯಕ್ಷರು:

ಉಡುಪಿ- ರವಿರಾಜ್ ಹೆಚ್. ಪಿ.,
ಕಾಪು – ಪುಂಡಲೀಕ ಮರಾಠೆ,
ಹೆಬ್ರಿ – ಶ್ರೀನಿವಾಸ ಭಂಡಾರಿ,
ಬೈಂದೂರು – ಡಾ. ರಘು ನಾಯ್ಕ,
ಬ್ರಹ್ಮಾವರ –ಜಿ. ರಾಮಚಂದ್ರ ಐತಾಳ್
ಕಾರ್ಕಳ- ಪ್ರಭಾಕರ್ ಶೆಟ್ಟಿ
ಕುಂದಾಪುರ – ಡಾ. ಉಮೇಶ್ ಪುತ್ರನ್

ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಮಹಿಳಾ ಸಾಹಿತಿ ಪೂರ್ಣಿಮಾ ಜನಾರ್ದನ್, ಡಾ. ಗುಲಾಬಿ ಪೂಜಾರ್ತಿ, ಪರಿಶಿಷ್ಟ ಜಾತಿ ಪ್ರತಿನಿಧಿ ಸತ್ಯನಾರಾಯಣ ಹಾಗೂ ಸಂಜೀವ ಪರಿಶಿಷ್ಟ ಪಂಗಡ ಪ್ರತಿನಿಧಿ ಪ್ರಕಾಶ್ ನಾಯ್ಕ, ಸಂಘಸಂಸ್ಥೆ ಪ್ರತಿನಿಧಿಯಾಗಿ ಬಿ. ಭುವನ ಪ್ರಸಾದ ಹೆಗ್ಡೆ, ಪದನಿಮಿತ್ತ ಸದಸ್ಯರಾಗಿ ಜಿಲ್ಲಾ ವಾರ್ತಧಿಕಾರಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆಯ್ಕೆಯಾಗಿದ್ದಾರೆ.

ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ, ಪಾರಂಪಳ್ಳಿ ನರಸಿಂಹ ಐತಾಲ್, ಕಟಿಂಗೇರಿ ದೇವದಾಸ ಹೆಬ್ಬಾರ್, ನರಸಿಂಹಮೂರ್ತಿ, ಕೋಚ ನಾವಡ, ಪಿ.ವಿ ಆನಂದ್, ಸುರಾಲು ನಾರಾಯಣ ಮಡಿ, ಜನಾರ್ದನ ಕೊಡವೂರು, ಕುರವತ್ತಿ ಗೌಡ, ಮೋಹನ ಉಡುಪ, ರಾಜು ಎನ್ ಆಚಾರ್ಯ ಉಪಸ್ಥಿತರಿದ್ದರು.

ಜಿಲ್ಲಾ ವಿಶೇಷ ಆಹ್ವಾನಿತರು, ಇನ್ನಿತರ ಸದಸ್ಯರು ಹಾಗೂ ತಾಲ್ಲೂಕು ಕಾರ್ಯಕಾರಿ ಸಮಿತಿ, ಹೋಬಳಿ ಸಮಿತಿಗಳನ್ನು ರಾಜ್ಯಾಧ್ಯಕ್ಷರ ಅನುಮತಿ ಪಡೆದು ತಿಳಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ರಿಶಾ ಕ್ಲಾಸಸ್ ಸಿ.ಎ. ಇಂಟರ್ಮೀಡಿಯೇಟ್ ಸಾಧಕರಿಗೆ ಸನ್ಮಾನ

ಕಟಪಾಡಿ, ನ.2: ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಸಾಧನೆಗೈದ...

ಕನ್ನಡತನ ಬಳಸಿ ಬದುಕು ಕಟ್ಟಿಕೊಳ್ಳೋಣ: ಡಾ.ನರೇಂದ್ರ ಕುಮಾರ್

ಉಡುಪಿ, ನ.2: ಕನ್ನಡತನ ಬಳಸಿ ಬದುಕು ಕಟ್ಟಿಕೊಳ್ಳೋಣ. ಈ ರಾಜ್ಯೋತ್ಸವ ದಿನನಿತ್ಯದ...

ಬಿ.ಬಿ. ಹೆಗ್ಡೆ ಕಾಲೇಜು: ಕನ್ನಡ ಡಿಂಡಿಮ

ಕುಂದಾಪುರ, ನ.2: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...

ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು: ರಾಘವೇಂದ್ರ ಪ್ರಭು ಕರ್ವಾಲು

ಉಡುಪಿ, ನ.1: ಮಕ್ಕಳೇ ಸಮಾಜದ ಮುಂದಿನ ನಿಜವಾದ ಆಸ್ತಿ. ಮಕ್ಕಳ ವ್ಯಕ್ತಿತ್ವ...
error: Content is protected !!