Wednesday, November 18, 2026
Wednesday, November 18, 2026

ಕರ್ಣಾಟಕ ಬ್ಯಾಂಕ್: ಕಾರ್ ಲೋನ್ ಮೇಳ

ಕರ್ಣಾಟಕ ಬ್ಯಾಂಕ್: ಕಾರ್ ಲೋನ್ ಮೇಳ

Date:

ಉಡುಪಿ, ನ. 8: ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ವತಿಯಿ೦ದ ದಿನಾ೦ಕ ಬುಧವಾರ ‘ಕೆಬಿಎಲ್ ಕಾರ್ ಲೋನ್’ ಮೇಳವನ್ನು ಕರ್ಣಾಟಕ ಬ್ಯಾಂಕ್‌ನ ಪ್ರಾದೇಶಿಕ ಕಛೇರಿಯ ಆವರಣದಲ್ಲಿ ಚಾಲನೆ ನೀಡಲಾಯಿತು. ಕರ್ಣಾಟಕ ಬ್ಯಾ೦ಕ್ ತನ್ನ ಶತಮಾನೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ‘ಕೆಬಿಎಲ್ ಉತ್ಸವ’ವನ್ನು ಆಚರಿಸುತ್ತಿದ್ದು ಗೃಹ, ಕಾರು, ಚಿನ್ನ ಹಾಗೂ ಕೃಷಿ ಸಾಲಗಳ ಮೇಲೆ ಆಕರ್ಷಕ ಬಡ್ಡಿದರ, ತ್ವರಿತ ಮಂಜೂರಾತಿ, ಸಂಸ್ಕರಣಾ ಶುಲ್ಕ ರಿಯಾಯಿತಿ ಸೇರಿ ಹಲವು ಪ್ರಯೋಜನಗಳನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಅಭಿಯಾನದ ಅಂಗವಾಗಿ ಆಯೋಜಿಸಿದ ‘ಕೆಬಿಎಲ್ ಕಾರ್ ಲೋನ್’ ಮೇಳವನ್ನು ಕರ್ಣಾಟಕ ಬ್ಯಾಂಕ್‌ನ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕರಾದ ರಾಜಗೋಪಾಲ.ಬಿ. ಉದ್ಘಾಟಿಸಿದರು.

ಗ್ರಾಹಕರು ಕಂಪೆನಿಗಳಿಂದ ಆಕರ್ಷಕ ರಿಯಾಯಿತಿಗಳ ಜೊತೆಗೆ ಬ್ಯಾ೦ಕ್ ಪ್ರೊಸೆಸಿಂಗ್ ವೆಚ್ಚದಲ್ಲಿ ಶೇಕಡಾ 50% ಕಡಿತ, ಮೂಲ ಬಡ್ಡಿಯಲ್ಲಿ ವಿನಾಯಿತಿ, ಕ್ಷಿಪ್ರ ಡಿಜಿಟಲ್ ಮಂಜೂರಾತಿ ಸಹಿತ ಸರಳ ಪ್ರಕ್ರಿಯೆಗಳ ಸದಾವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು. ಪ್ರತಿಷ್ಠಿತ ಕಾರ್ ವಿತರಕರಾದ ಆಭರಣ ಮೋಟರ‍್ಸ್, ಕಾಂಚನಾ ಹ್ಯುಂಡೈ, ಯುನೈಟೆಡ್ ಟೊಯೋಟಾ, ಆಟೋ ಮ್ಯಾಟ್ರಿಕ್ಸ್, ಟಾಟ ಮೋಟರ‍್ಸ್, ಮಹಿಂದ್ರಾ ಕರ್ನಾಟಕ ಎಜೆನ್ಸಿಸ್, ಎ.ಅರ್.ಎಮ್ ಮೋಟರ‍್ಸ್ ಕಿಯಾ, ತಮ್ಮ ಕಂಪೆನಿಗಳ ವಿವಿಧ ಕಾರು ಮೊಡೆಲ್‌ಗಳನ್ನು ಪ್ರದರ್ಶಿಸಿದರು. ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕರಾದ ಮನೋಜ್ ಕೋಟ್ಯಾನ್ ಸ್ವಾಗತಿಸಿದರು. ಬ್ಯಾಂಕಿನ ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಡೆಕಾರು: ಉಚಿತ ಕಣ್ಣಿನ ತಪಾಸಣಾ ಶಿಬಿರ

ಉಡುಪಿ, ನ.18: ಕೆ.ಎಂ.ಸಿ. ಮಣಿಪಾಲದ ಕಣ್ಣಿನ ವಿಭಾಗ, ಆಪ್ಟೋಮಿಟ್ರಿ ವಿಭಾಗ ಹಾಗೂ...

ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50 ರ ರಿಯಾಯಿತಿ

ಉಡುಪಿ, ನ.17: ಕನ್ನಡ ರಾಜ್ಯೋತ್ಸವದ ಅಂಗವಾಗಿ 2026 ರ ನವೆಂಬರ್ ತಿಂಗಳು...

ರಥಬೀದಿ ಕಾಲೇಜಿನಲ್ಲಿ ವಿದ್ಯಾರ್ಥಿವೇತನ ದತ್ತಿ ನಿಧಿ ಸ್ಥಾಪನೆ

ಮಂಗಳೂರು, ನ.17: ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ...
error: Content is protected !!