Thursday, September 24, 2026
Thursday, September 24, 2026

ಶ್ರೀ ಕಾಶಿ ಮಠಾಧೀಶರ ದಿಗ್ವಿಜಯ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ

ಶ್ರೀ ಕಾಶಿ ಮಠಾಧೀಶರ ದಿಗ್ವಿಜಯ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ

Date:

ಉಡುಪಿ, ಅ.14: ಬೆಂಗಳೂರು ಮಲ್ಲೇಶ್ವರಂ ಶ್ರೀ ಕಾಶಿ ಮಠದಲ್ಲಿ ಶ್ರೀ ಸಂಸ್ಥಾನ ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ‘ದಿಗ್ವಿಜಯ ಮಹೋತ್ಸವ’ ಇದೇ ನವೆಂಬರ್ 4 ರಂದು ನಡೆಯಲಿದೆ. ಉಡುಪಿಯ ಜಿ.ಎಸ್.ಬಿ ಸಮಾಜದ ಉದ್ಧಾರಕ್ಕೆ ಕಾರಣೀಭೂತರಾದ ಶ್ರೀಮದ್ ವರದೇಂದ್ರ ತೀರ್ಥ ಸ್ವಾಮೀಜಿಯವರ ಪ್ರೀತ್ಯರ್ಥವಾಗಿ ಉಡುಪಿಯಿಂದ ಬೆಂಗಳೂರಿಗೆ ವಿಶೇಷ ಯಾತ್ರೆಯನ್ನು ಜಿ.ಎಸ್‌.ಬಿ ಸಭಾ ಉಡುಪಿ ಇದರ ವತಿಯಿಂದ ಮಲ್ಲೇಶ್ವರಂ ಶ್ರೀ ಕಾಶೀ ಮಠ ವ್ಯವಸ್ಥಾಪಕ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿದೆ.

ಪ್ರಯಾಣ ದರ ಕೇವಲ ರೂ.1000/- ಒಬ್ಬರಿಗೆ (ವಸತಿ ಮತ್ತು ಆಹಾರ ಒಳಗೊಂಡಿದೆ). ನವೆಂಬರ್ 3 ರಂದು ರಾತ್ರಿ ರೈಲಿನ ಮೂಲಕ ಹೊರಟು ನವೆಂಬರ್ 4 ರಂದು ಸಂಸ್ಥಾನ ಪೂಜೆ, ದಿಗ್ವಿಜಯ ಮಹೋತ್ಸವದಲ್ಲಿ ಭಾಗಿಯಾಗಿ, ಮಹೋತ್ಸವದಲ್ಲಿ ಭಜನಾ ಇತ್ಯಾದಿಗಳನ್ನು ನಡೆಸಿ ನವೆಂಬರ್ 5 ರಂದು ಸಂಸ್ಥಾನದ ದೇವರ ವಿವಿಧ ಸೇವೆ ಹಾಗೂ ವಿಶೇಷ ಭಿಕ್ಷಾ ಸೇವೆಗಳನ್ನು ಮುಗಿಸಿ ಅಂದು ರಾತ್ರಿ ರೈಲಿನ ಮೂಲಕ ಉಡುಪಿಗೆ ತೆರಳುವುದು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಹರಿ ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಜಿ.ಎಸ್. ಬಿ. ಸಭಾ ಉಡುಪಿ ಇದರ ವತಿಯಿಂದ ಸಮಾಜಬಾಂಧವರಲ್ಲಿ ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಅನಿರುದ್ ಪೈ- 8073342979, ಅಜಿತ್. ಪೈ-9844686494 ಸಂಪರ್ಕಿಸಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರ, ಸೆ.22: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ...

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

ಕುಂದಾಪುರ, ಸೆ.22: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಎನ್ಎಸ್ಎಸ್ ಸ್ವಯಂಸೇವಕರಿಂದ ತ್ರಾಸಿ ಬೀಚ್ ಕ್ಲೀನಿಂಗ್

ಕುಂದಾಪುರ, ಸೆ.22: ಅಂತಾರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ಡೇ ಆಚರಣೆ ಪ್ರಯುಕ್ತ...
error: Content is protected !!