Home ಸುದ್ಧಿಗಳು ಪ್ರಾದೇಶಿಕ ಉಡುಪಿ ಇಂಡಸ್ಟ್ರಿಯಲ್ ಕೋ-ಆ. ಸೊಸೈಟಿ ಅಭಿವೃದ್ಧಿ ಶ್ಲಾಘನೀಯ: ಶಾಸಕ ಯಶ್ಪಾಲ್ ಸುವರ್ಣ

ಉಡುಪಿ ಇಂಡಸ್ಟ್ರಿಯಲ್ ಕೋ-ಆ. ಸೊಸೈಟಿ ಅಭಿವೃದ್ಧಿ ಶ್ಲಾಘನೀಯ: ಶಾಸಕ ಯಶ್ಪಾಲ್ ಸುವರ್ಣ

192
0

ಉಡುಪಿ, ಸೆ. 15: ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಕಿನ್ನಿಮುಲ್ಕಿ ವತಿಯಿಂದ ಸಂಸ್ಥೆಯ ಸದಸ್ಯರೂ, ಸಹಕಾರ ರತ್ನ, ಶಾಸಕರು ಹಾಗೂ ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್, ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿರುವ ಯಶಪಾಲ್ ಎ ಸುವರ್ಣ ರವರಿಗೆ ಸಂಸ್ಥೆಯ ೨೦೨೨-೨೩ನೇ ಸಾಲಿನ ೬೫ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕರು, ಸಂಸ್ಥೆಯ ಏಳಿಗೆ ಮತ್ತು ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯು ಇನ್ನಷ್ಟು ಎತ್ತರಕ್ಕೇರಲಿ ಎಂದು ಶುಭ ಹಾರೈಸಿದರು.

ಸಂಘದ ಅಧ್ಯಕ್ಷರಾದ ಅರುಣ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಎಂ.ಗಣೇಶ್ ಕಿಣಿ, ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಹೆಗ್ಡೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕರು ಹಾಗೂ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾದ ಬಿ ಜಯಕರ ಶೆಟ್ಟಿ ಇಂದ್ರಾಳಿ, ಸಂಘದ ನಿರ್ದೇಶಕರುಗಳಾದ ಇಂದು ರಮಾನಂದ ಭಟ್, ನಾರಾಯಣ ಬಲ್ಲಾಳ್, ಎಲ್ ಉಮಾನಾಥ, ದೇವದಾಸ್ ಶೆಟ್ಟಿಗಾರ್, ಯಶವಂತ ನಾಯಕ್, ರಾಧಾಕೃಷ್ಣ ಶೆಣೈ, ಮೀನಾ ಕುಮಾರಿ ಯು., ಶ್ವೇತಾ ಜೆ ಶೆಟ್ಟಿ, ಅಬ್ದುಲ್ಲಾ ಎಚ್ ಸಾಹೇಬ್, ಅರುಣ್ ಟಿ ಶೆಟ್ಟಿ, ಸುರೇಶ್ ನಾಯ್ಕ್ ಹಾಗೂ , ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.