Wednesday, July 29, 2026
Wednesday, July 29, 2026

ಶ್ರೀ ಪುತ್ತಿಗೆ ಪರ್ಯಾಯ ಸಮಾಲೋಚನಾ ಸಭೆ

ಶ್ರೀ ಪುತ್ತಿಗೆ ಪರ್ಯಾಯ ಸಮಾಲೋಚನಾ ಸಭೆ

Date:

ಉಡುಪಿ, ಆ. 20: ಶ್ರೀ ಪುತ್ತಿಗೆ ಮಠದಲ್ಲಿ  ಪರ್ಯಾಯೋತ್ಸವ  ಸಮಿತಿಯ ಸಮಾಲೋಚನಾ ಸಭೆಯು ಸಮಿತಿಯ ಅಧ್ಯಕ್ಷರಾದ ಡಾ| ಹೆಚ್. ಎಸ್ .ಬಲ್ಲಾಳ್ ರವರ ಉಪಸ್ಥಿತಿಯಲ್ಲಿ ನಡೆಯಿತು. ಉಡುಪಿ ಶಾಸಕ  ಯಶಪಾಲ್  ಸುವರ್ಣರವರು  ಮಾತನಾಡುತ್ತಾ, ಈ ಬಾರಿಯ ಪರ್ಯಾಯೋತ್ಸವಕ್ಕೆ ಸರಕಾರದಿಂದ ಹೆಚ್ಚಿನ ಅನುದಾನದ ಬೇಡಿಕೆಯನ್ನು ಸಲ್ಲಿಸಿದ್ದು ಸರ್ಕಾರವು ಭಕ್ತರ ಬೇಡಿಕೆಗೆ  ಸ್ಪಂದಿಸುವ ಆಶಾಭಾವನೆ ಇದೆ.

ಪುತ್ತಿಗೆ ಪರ್ಯಾಯವು ವಿಶ್ವ ಪರ್ಯಾಯವಾಗಿ ಪರಿಗಣಿಸಲ್ಪಟ್ಟಿದೆ. ದೇಶಾದ್ಯಾಂತ  ಶ್ರೀ ಕೃಷ್ಣನ ದೇವಾಲಯಗಳನ್ನು ಸ್ಥಾಪಿಸಿ ಕೃಷ್ಣನ ಸಂದೇಶವನ್ನು ಬಿತ್ತರಿಸಿದ ಕೀರ್ತಿ ಶ್ರೀಗಳಿಗೆ ಸಲ್ಲಬೇಕು. ಪರ್ಯಾಯಕ್ಕೆ ದೇಶ ವಿದೇಶಗಳಿಂದ  ಭಕ್ತರು ಆಗಮಿಸುವುದರಿಂದ ಅವರ ವಾಸ್ತವ್ಯದ ಬಗ್ಗೆಯೂ ಗಮನಹರಿಸಬೇಕಾಗಿದೆ ಎಂದರು.

ಸಮಿತಿಯ ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ.ರಘುಪತಿ ಭಟ್, ಕೋಶಾಧಿಕಾರಿಗಳಾದ ರಂಜನ್ ಕಲ್ಕೂರ್, ಹಾಗೂ ವಿವಿಧ ಸಮಿತಿಗಳ ನಾಗೇಶ್ ಹೆಗಡೆ, ಕೇಶವ ಕೋಟ್ಯಾನ್, ರಾಮಚಂದ್ರ ಉಪಾಧ್ಯಾಯ, ಗುರುರಾಜ ಆಚಾರ್ಯ, ಮುರಲಿ ಕಡೆಕಾರ್ˌ ಭಾಸ್ಕರ ರಾವ್ ಕಿದಿಯೂರು, ನಾಗರಾಜ ತಂತ್ರಿ, ಹಯವದನ ಭಟ್, ಚಂದ್ರಕಾಂತ್, ಎಂ .ಎಸ್. ವಿಷ್ಣು, ಪದ್ಮಲತಾ ವಿಷ್ಣು, ಸುಮಿತ್ರಾ ಕೆರೆಮಠ, ಜಿ.ವಿ.ಆಚಾರ್ಯ, ಹಾಗೂ ಇತರ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಮಠದ ದಿವಾನರಾದ ನಾಗರಾಜ ಆಚಾರ್ಯ ಸ್ವಾಗತಿಸಿ, ರವೀಂದ್ರ ಆಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಚಾತುರ್ಮಾಸ ಸಾಧನೆಗೆ ಶ್ರೇಷ್ಠ ಕಾಲ: ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು

ಬಾರಕೂರು, ಜು.೨೯: ಶ್ರಾವಣದಿಂದ ಕಾರ್ತಿಕ ಮಾಸದವರೆಗಿನ ನಾಲ್ಕು ತಿಂಗಳ ಕಾಲ ಭಗವಂತ...

ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರರಿಗೆ ಸೇವಾ ಪ್ರಶಸ್ತಿ

ಕಟಪಾಡಿ, ಜು.28: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ...

ಹೆಜಮಾಡಿ ಟೋಲ್ ಸಮಸ್ಯೆ: ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಶಾಸಕರ ಸಭೆ

ಹೆಜಮಾಡಿ, ಜು.28: ಹೆಜಮಾಡಿ ಟೋಲ್ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರಾದ ಗುರ್ಮೆ ಸುರೇಶ್...
error: Content is protected !!