Tuesday, September 8, 2026
Tuesday, September 8, 2026

ಸಂಜೀವಿನಿ ಮಹಿಳೆಯರೊಂದಿಗೆ ನಾಟಿ ಕೆಲಸದಲ್ಲಿ ನಿರತರಾದ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಎನ್

ಸಂಜೀವಿನಿ ಮಹಿಳೆಯರೊಂದಿಗೆ ನಾಟಿ ಕೆಲಸದಲ್ಲಿ ನಿರತರಾದ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಎನ್

Date:

ಉಡುಪಿ, ಜು. 29: ಜಿಲ್ಲಾ ಪಂಚಾಯತ್ ಉಡುಪಿ , ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೃಷಿ ಇಲಾಖೆ ಉಡುಪಿ ಜಿಲ್ಲೆ,ತಾಲೂಕು ಪಂಚಾಯತ್ ಬೈಂದೂರು, ಗ್ರಾಮ ಪಂಚಾಯತ್ ಕಿರಿಮಂಜೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ , ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿತ್ರಾಡಿಯಲ್ಲಿ ಪಾಲಾಕ್ಷ ಸಂಜೀವಿನಿ ಒಕ್ಕೂಟದ ಮಹಿಳೆಯರು ಹಡಿಲು ಬಿದ್ದ ಭೂಮಿಯನ್ನು ನಾಟಿ ಮಾಡುವ ಕಾರ್ಯವನ್ನು ಕೈಗೊಂಡರು .ಕರಾವಳಿ ಸಂಪ್ರದಾಯಕ ಶೈಲಿಯ ಹಾಳೆ ಟೋಪಿ ತೊಡುವುದರೊಂದಿಗೆ ಭತ್ತದ ನೇಜಿಯನ್ನು ವಿತರಿಸುವ ಮೂಲಕ ನಾಟಿ ಕಾರ್ಯಕ್ಕೆ ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್ ಚಾಲನೆ ನೀಡಿ, ಭಾರತದ ಆರ್ಥಿಕ ವ್ಯವಸ್ಥೆ ಬಲಗೊಳ್ಳಲು ಕೃಷಿ ಮುಖ್ಯವಾಗಿದ್ದು ಇಂದಿನ ಯುವ ಸಮುದಾಯ ಕೃಷಿ ಚಟುವಟಿಕೆ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಬೇಸರದ ಸಂಗತಿ್.

ಯುವ ಸಮುದಾಯಕ್ಕೆ ಕೃಷಿ ಮಹತ್ವದ ಬಗ್ಗೆ ಸಾಕಷ್ಟು ಅರಿವು ಮೂಡಿಸಬೇಕಾಗಿದೆ , ಹಾಗೇಯೆ ಜಿಲ್ಲೆಯಲ್ಲಿ ಸಾಕಷ್ಟು ಭೂಮಿಗಳು ಹಡಿಲು ಬಿಟ್ಟಿದ್ದು ಈ ಬಾರಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಸಂಜೀವಿನಿ ಯೋಜನೆಯಡಿಯಲ್ಲಿ ನೇಮಕಗೊಂಡ ಕೃಷಿ ಸಖಿಯವರಿಗೆ ಮುಂಗಾರು ಪ್ರಾರಂಭಕ್ಕೂ ಮೊದಲೆ ಸೂಕ್ತ ತರಬೇತಿ ನೀಡಿ ಹಡಿಲು ಭೂಮಿ ಗುರುತಿಸಿ ಹಡಿಲು ಭೂಮಿಯನ್ನು ಹಸಿರಾಗಿಸುವ ಸಂಕಲ್ಪ ತೊಡಲಾಗಿತ್ತು. ಅದರಂತೆ ತಾಲೂಕಿನಾದ್ಯಂತ ಸಂಜೀವಿನಿ ಸಂಘದ ಮಹಿಳೆಯರು ಗುಂಪು ಚಟುವಟಿಕೆಯಾಗಿ ಕೃಷಿಯಲ್ಲಿ ತೊಡಗಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಭಾರತಾಂಬೆಯ ಒಡಲು ಹಚ್ಚ ಹಸಿರಿನಿಂದ ಕಂಗೊಳಿಸಲಿ ಆ ತಾಯಿಯ ಮಕ್ಕಳ ಬದುಕು ಹಸನಾಗಲಿ ಇನ್ನು ಹೆಚ್ಚು ಹೆಚ್ಚು ಸಂಜೀವಿನಿ ಸಂಘದ ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗುವಂತಾಗಲಿ ಎಂದು ಶುಭ ಹಾರೈದರು.

ಗ್ರಾ. ಪಂ. ಉಪಾಧ್ಯಕ್ಷರಾದ ಶೇಖರ್ ಖಾರ್ವಿ ಮಾತನಾಡಿ, ಸಂಜೀವಿನಿ ಸಂಘದ ಮಹಿಳೆಯರು ಒಗ್ಗಟ್ಟಿನಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಸಂತಸದ ವಿಷಯ. ಈ ಮಹತ್ಕಾರ್ಯಕ್ಕೆ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಸದಾ ಬೆಂಬಲ ನೀಡುತ್ತದೆ ಎಂದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಸುಬ್ಬಣ್ಣ ಶೆಟ್ಟಿ , ರಾಜು ದೇವಾಡಿಗ, ಆನಂದ ಎಸ್ ಪೂಜಾರಿ, ಈಶ್ವರ ದೇವಾಡಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಹಾಗೂ ಗ್ರಾ. ಪಂ ಸಿಬ್ಬಂದ್ಧಿ ವರ್ಗ, ಫಾಲಾಕ್ಷ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಲಲಿತಾ , ಎನ್ ಆರ್ ಎಲ್ ಎಂ ಸಿಬ್ಬಂದ್ಧಿಯಾದ ಸವಿತ, ಕೃಷಿ ಇಲಾಖೆಯ ಅನುಷಾ, ಮೂಕಾಂಬಿಕಾ ಭತ್ತ ಬೆಳೆಗಾರರ ಸಂಘದ ಸಿಇಓ ಅನಿಲ್ , ಕೃಷಿ ಸಖಿ ಸುಮಂಗಲ ಲಿಲಾವತಿ ಚೈತ್ರ ಹೇಮಾವತಿ ಸವಿತಾ, ಹಾಗೂ ಸಂಜೀವಿನಿ ಒಕ್ಕೂಟ್ಟದ ಸದಸ್ಯರು ಉಪಸ್ಥಿತರಿದ್ದರು ನ್ನು ಎಂಬಿಕೆ ನೇತ್ರಾವತಿ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿಯಲ್ಲಿ ಕೇರಳದ ಸಾಂಸ್ಕೃತಿಕ ವೈಭವ: ಓಣಂ ಸಂಭ್ರಮಕ್ಕೆ ಮನಸೋತ ಕರಾವಳಿಗರು

ಉಡುಪಿ, ಸೆ.7: ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಸಂಭ್ರಮದ ನಡುವೆಯೇ...

ಕ್ರಿಯೇಟಿವ್ ಗುರುದೇವೋಭವ: ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಭಾಗಿ

ಕಾರ್ಕಳ, ಸೆ.7: ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕ್ರಿಯೇಟಿವ್...

ಸರಸ್ವತಿ ವಿದ್ಯಾಲಯದಲ್ಲಿ ಇ ವೇಸ್ಟ್ ಮ್ಯಾನೇಜ್ಮೆಂಟ್ ಕಾರ್ಯಕ್ರಮ

ಗಂಗೊಳ್ಳಿ, ಸೆ.7: ಇ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಹೇಗೆ...

ತ್ರಿಶಾ ವಿದ್ಯಾ ಪಿಯು ಕಾಲೇಜು ಕಟಪಾಡಿ: ಕಾಪು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಕಟಪಾಡಿ, ಸೆ.7: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ತ್ರಿಶಾ...
error: Content is protected !!