Monday, October 26, 2026
Monday, October 26, 2026

ವಿ.ಕೆ.ಆರ್: ಸಮಯ ಪರಿಪಾಲನೆ ಮತ್ತು ಅಧ್ಯಯನ ಕೌಶಲ ಕಾರ್ಯಗಾರ

ವಿ.ಕೆ.ಆರ್: ಸಮಯ ಪರಿಪಾಲನೆ ಮತ್ತು ಅಧ್ಯಯನ ಕೌಶಲ ಕಾರ್ಯಗಾರ

Date:

ಕುಂದಾಪುರ, ಜೂನ್ 29: ಬದುಕಿನಲ್ಲಿ ಗುರಿ ಇರಬೇಕು. ಅದೇ ರೀತಿ ಕಷ್ಟಗಳನ್ನು ಎದುರಿಸಿ ಎದೆಗುಂದದೆ ಛಲದಿಂದ ಮುಂದುವರಿದಾಗ ಗೆಲುವು ನಮ್ಮದಾಗುತ್ತದೆ. ಗೆಲುವು ಸಾಧಿಸಬೇಕಾದರೆ ನಮ್ಮಲ್ಲಿ ಗುರಿ ಇಟ್ಟುಕೊಂಡು ಮುಂದೆ ಸಾಗುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಮೌಸ್ ಮತ್ತು ಕೀಲಿಮಣೆ ಇಲ್ಲದ ಕಂಪ್ಯೂಟರ್‌ನಂತೆ ಆಗುತ್ತದೆ. ನಮಗೆ ನಾವೇ ಪ್ರೇರಣೆಯಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ಶಿರಿಯಾರ ಗಣೇಶ್ ನಾಯಕ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಬಿ. ಎಂ. ಸುಕುಮಾರ ಶೆಟ್ಟಿ ನೇತೃತ್ವದ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಂ. ಎಂ. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್. ಆಚಾರ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ‘ಸಮಯ ಪರಿಪಾಲನೆ ಮತ್ತು ಅಧ್ಯಯನ ಕೌಶಲ’ ಕಾರ್ಯಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಚಿಂತನಾ ರಾಜೇಶ್ ವಹಿಸಿದ್ದರು. ಉಪಪ್ರಾಂಶುಪಾಲೆ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ. ಎನ್ ಪ್ರಾಸ್ತಾವಿಕ ಮಾತಿನೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಸಹಾಯಕ ಮುಖ್ಯ ಶಿಕ್ಷಕರಾದ ಚಂದ್ರಶೇಖರ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್, ಪೂರ್ವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲತಾ ಜಿ. ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಾಗತಿಕ ತೈಲ ಬೆಲೆ: ಗರಿಷ್ಠ ಏರಿಕೆ ನಂತರ ಸುಮಾರು 2% ರಷ್ಟು ಕುಸಿತ

ನವದೆಹಲಿ, ಅ.26: ಸುಮಾರು ಆರು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದ ನಂತರ...

ಬ್ರೆಜಿಲ್‌ನಲ್ಲಿ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬಂದ ಲುಲಾ; ಲ್ಯಾಟಿನ್ ಅಮೆರಿಕದಲ್ಲಿ ಟ್ರಂಪ್ ಪ್ರಭಾವಕ್ಕೆ ಹಿನ್ನಡೆ

ಯು.ಬಿ.ಎನ್.ಡಿ., ಅ.26: ಭಾನುವಾರ ನಡೆದ ಬ್ರೆಜಿಲ್‌ನ ನಿರ್ಣಾಯಕ ಮತದಾನದಲ್ಲಿ ಸೆನೆಟರ್ ಫ್ಲಾವಿಯೊ...

ಆತ್ಮವಿಶ್ವಾಸದಿಂದ ಇಂಗ್ಲೀಷ್ ಸಂವಹನ

ಬಸ್ರೂರು, ಅ.26: ಬಸ್ರೂರು ಶ್ರೀ ಶಾರದಾ ಕಾಲೇಜಿನ ಇಂಗ್ಲೀಷ್ ವಿಭಾಗದ ವತಿಯಿಂದ...

ಏಷ್ಯನ್ ಪ್ಯಾರಾ ಕ್ರೀಡಾಕೂಟ: 114 ಪದಕಗಳೊಂದಿಗೆ ಭಾರತದ ಭರ್ಜರಿ ಪ್ರದರ್ಶನ

ಜಪಾನ್‌ನ ನಗೋಯಾದಲ್ಲಿರುವ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ 2026 ಏಷ್ಯನ್...
error: Content is protected !!