Wednesday, July 29, 2026
Wednesday, July 29, 2026

ಆಸರೆ ಚಾರಿಟೇಬಲ್ ಟ್ರಸ್ಟ್(ರಿ.) ಕಡಿಯಾಳಿ: 133 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ

ಆಸರೆ ಚಾರಿಟೇಬಲ್ ಟ್ರಸ್ಟ್(ರಿ.) ಕಡಿಯಾಳಿ: 133 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ

Date:

ಉಡುಪಿ, ಜೂನ್ 28: ಆಸರೆ ಚಾರಿಟೇಬಲ್ ಟ್ರಸ್ಟ್(ರಿ.) ಕಡಿಯಾಳಿ ವತಿಯಿಂದ ಉಡುಪಿಯ ಸುಬ್ರಹ್ಮಣ್ಯನಗರದಲ್ಲಿ 3 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸಲಾಯಿತು. ಫಲಾನುಭವಿಗಳಾದ ಅಮಿತ, ಶೀಲಾ ಹಾಗೂ ಸದಾಶಿವ ಇವರ ಮನೆಗೆ ದಾನಿಗಳಾದ ಖ್ಯಾತಿ ಭಟ್, ಸ್ತುತಿ ಭಟ್, ಮಂಜುಳಾ ಶೆಣೈ ಮತ್ತು ಶೀಲಾ ಅವರ ಮನೆಯ ವಿದ್ಯುತ್ ಸೌಲಭ್ಯವನ್ನು ನಗರಸಭೆ ಸ್ಥಾಯಿ ಸಮಿತಿ ಸದಸ್ಯರಾದ ಶ್ರೀಶ ಭಟ್ ಕೊಡವೂರು ಲೋಕಾರ್ಪಣೆ ಮಾಡಿದರು. ಶೀಲಾ ಅವರ ಮನೆಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲು ಮೂಡುಬೆಳ್ಳೆ ಗೌರಿ ನಾಯಕ್ ಅವರು ತಮ್ಮ ಹುಟ್ಟುಹಬ್ಬದ ಸಲುವಾಗಿ ಈ ಉಚಿತ ವಿದ್ಯುತ್ ಸಂಪರ್ಕದ ಕೊಡುಗೆಯನ್ನು ನೀಡಿದ್ದರು.

ಆಸರೆ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಮಾತನಾಡಿ, ಉಡುಪಿಯಲ್ಲಿ ದಾನಿಗಳ ಸಹಕಾರದಿಂದ 133 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಈ ಮೂಲಕ ಉಡುಪಿ ಇಡೀ ದೇಶಕ್ಕೆ ಮಾದರಿಯಾಗಿದೆ. ಉಡುಪಿಯನ್ನು ಶೇಕಡ 100 ರಷ್ಟು ವಿದ್ಯುತ್ ಸಂಪರ್ಕವನ್ನಾಗಿ ಪರಿವರ್ತಿಸುವುದು ನಮ್ಮ ಗುರಿ. ಡಿಸೆಂಬರ್ ಮೊದಲು ಉಡುಪಿಯಲ್ಲಿರುವ ಮನೆಗಳಿಗೆ ಶೇಕಡಾ 100 ರಷ್ಟು ವಿದ್ಯುತ್ ಸಂಪರ್ಕವನ್ನು ನೀಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.

ದಾನಿಗಳಾದ ವಲ್ಲಭ ಭಟ್ ಮಲ್ಪೆ, ಮಂಜುಳಾ ವಿ ಶೆಣೈ, ನಗರಸಭಾ ಸದಸ್ಯೆ ಜಯಂತಿ ಪೂಜಾರಿ, ಮಾಜಿ ನಗರಸಭಾ ಸದಸ್ಯೆ ಸುಬೇಧಾ, ಆಶಾ ಭಟ್, ಆಸರೆ ಚಾರಿಟೇಬಲ್ ಟ್ರಸ್ಟ್ ಖಜಾಂಚಿ ಸತೀಶ್ ಕುಲಾಲ್, ರಾಕೇಶ್ ಜೋಗಿ, ವಿದ್ಯುತ್ ಸಂಪರ್ಕ ಕಲ್ಪಿಸಿದ ಮಂಜುನಾಥ್ ಎಲೆಕ್ಟ್ರಿಕಲ್ಸ್ ನ ನಾಗರಾಜ ಪ್ರಭು, ಸ್ಥಳೀಯರಾದ ಅನಂತಮೂರ್ತಿ ಭಟ್, ಶ್ರೀನಿವಾಸ ರಾವ್, ಜಯಂತ್ ಪೂಜಾರಿ, ರಾಜಾರಾಮ್, ಲಕ್ಷ್ಮೀ, ಸೌಮ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರರಿಗೆ ಸೇವಾ ಪ್ರಶಸ್ತಿ

ಕಟಪಾಡಿ, ಜು.28: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ...

ಹೆಜಮಾಡಿ ಟೋಲ್ ಸಮಸ್ಯೆ: ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಶಾಸಕರ ಸಭೆ

ಹೆಜಮಾಡಿ, ಜು.28: ಹೆಜಮಾಡಿ ಟೋಲ್ ಸಮಸ್ಯೆಗೆ ಸಂಬಂಧಿಸಿದಂತೆ ಶಾಸಕರಾದ ಗುರ್ಮೆ ಸುರೇಶ್...

ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ: ಸಮಿತಿ ಸದಸ್ಯರಿಂದ ಧರ್ಮಸ್ಥಳ ಭೇಟಿ

ಬ್ರಹ್ಮಾವರ, ಜು.28: ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ ಇದರ ಅಭಿವೃದ್ಧಿ ಮತ್ತು...
error: Content is protected !!