Saturday, November 21, 2026
Saturday, November 21, 2026

ಉಡುಪಿ ನಗರ ಮಹಿಳಾ ಹೈಟೆಕ್ ಮೀನು ಮಾರುಕಟ್ಟೆಗೆ ಶಾಸಕ ಯಶ್‍ಪಾಲ್ ಸುವರ್ಣ ಭೇಟಿ

ಉಡುಪಿ ನಗರ ಮಹಿಳಾ ಹೈಟೆಕ್ ಮೀನು ಮಾರುಕಟ್ಟೆಗೆ ಶಾಸಕ ಯಶ್‍ಪಾಲ್ ಸುವರ್ಣ ಭೇಟಿ

Date:

ಉಡುಪಿ, ಜೂ.‌23: ಉಡುಪಿ ನಗರ ಮಹಿಳಾ ಹೈಟೆಕ್ ಮೀನು ಮಾರುಕಟ್ಟೆಗೆ ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಅವರು ಉಡುಪಿ ನಗರಸಭೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮೀನುಗಾರ ಮಹಿಳೆಯರಿಂದ ಮನವಿಯನ್ನು ಸ್ವೀಕರಿಸಿ ಮೀನುಗಾರ ಮಹಿಳೆಯರ ಅಗತ್ಯ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ಮೀನು ಮಾರುಕಟ್ಟೆಯಲ್ಲಿ ಹೋಲ್‍ಸೇಲ್ ಮೀನು ವ್ಯಾಪಾರ ಮಾಡುವ ಸ್ಥಳದಲ್ಲಿ ಗೋಡೆ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ನೀರು ಸೋರುತ್ತಿದೆ ಹಾಗೂ ಪ್ರಾಂಗಣದಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟುವುದು, ಶೌಚಾಲಯ ಮತ್ತು ಅದರ ಪಿಟ್ ನ್ನು ವಿಸ್ತಾರಗೊಳಿಸುವುದು, ಮೀನು ಕಟ್ಟಿಂಗ್ ಪ್ರಾಂಗಣವನ್ನು ಮಹಿಳೆಯರಿಗೆ ಅನುಕೂಲವಾಗುವಂತೆ ಸಮತಟ್ಟುಗೊಳಿಸುವುದು, ನಗರ ಸಭೆಯಿಂದ ನೀರಿನ ಸಂಪರ್ಕ ಕಲ್ಪಿಸುವುದು, ಮಾರುಕಟ್ಟೆಯ ಮುಂಭಾಗದ ಬಾವಿಗೆ ಆವರಣ ಗೋಡೆ ನಿರ್ಮಿಸುವುದು, ಮಹಿಳೆಯರಿಗೆ ಡ್ರೆಸ್ಸಿಂಗ್ ಕೊಠಡಿ ನಿರ್ಮಿಸುವುದು, ಮೇಲ್ಮಹಡಿಯಲ್ಲಿ ವಿಶ್ರಾಂತಿ ಕೊಠಡಿ, ಮೇಲ್ಮಹಡಿಯಲ್ಲಿ ಶೌಚಾಲಯ ನಿರ್ಮಿಸುವುದು, ಜನರೇಟರ್ ಮತ್ತು ಸಿಸಿ ಟಿವಿ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಮೀನುಗಾರ ಮಹಿಳಾ ಮುಖಂಡರು ಶಾಸಕರಿಗೆ ಸಲ್ಲಿಸಿದರು.

ಉಡುಪಿ ತಾಲೂಕು ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್ ಅವರು, ಶಾಸಕರಾಗಿ ಉಡುಪಿ ಮೀನು ಮಾರುಕಟ್ಟೆಗೆ ಪ್ರಪ್ರಥಮವಾಗಿ ಆಗಮಿಸಿರುವ ಯಶ್‍ಪಾಲ್ ಸುವರ್ಣ ಅವರನ್ನು ಮಹಿಳಾ ಮೀನುಗಾರರ ಪರವಾಗಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಶಾಸಕ ಯಶ್‍ಪಾಲ್ ಸುವರ್ಣ ಅವರು ಮೀನುಗಾರ ಮಹಿಳೆಯರ ಸಮಸ್ಯೆಗಳಿಗೆ ಸದಾ ಸ್ಪಂದನೆ ನೀಡುತ್ತಾ ಬಂದಿದ್ದಾರೆ. ಫೆಡರೇಶನ್, ಮಹಾಲಕ್ಷ್ಮೀ ಬ್ಯಾಂಕ್ ಅಭಿವೃದ್ಧಿಯ ನೇತೃತ್ವ ವಹಿಸಿರುವ ಯಶ್‍ಪಾಲ್ ಅವರು ಶಾಸಕರಾಗಿ ಉಡುಪಿ ಕ್ಷೇತ್ರದ ಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂಬ ದೃಢ ವಿಶ್ವಾಸವಿದೆ ಎಂದರು.

ಶಾಸಕ ಯಶ್‍ಪಾಲ್ ಸುವರ್ಣ ಮಾತನಾಡಿ, ಉಡುಪಿ ನಗರ ಮಹಿಳಾ ಹೈಟೆಕ್ ಮೀನು ಮಾರುಕಟ್ಟೆಯ ಅಗತ್ಯ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಮಹಿಳೆಯರ ಆರೋಗ್ಯದ ದೃಷ್ಠಿಯಿಂದ ಶುದ್ಧ ಕುಡಿಯುವ ನೀರಿನ ಘಟಕ, ಪ್ರಥಮ ಚಿಕಿತ್ಸೆ ಘಟಕವನ್ನು ಶೀಘ್ರವಾಗಿ ಸ್ಥಾಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಮಾನಸ ಸಿ. ಪೈ, ನಗರಸಭೆ ಪೌರಾಯುಕ್ತರಾದ ರಮೇಶ್ ಪಿ. ನಾಯಕ್, ಎಇಇ ಯಶವಂತ ಪ್ರಭು, ಉಡುಪಿ ತಾಲೂಕು ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಆನಂದ್, ಜಯಂತಿ ಗುರುದಾಸ್ ಬಂಗೇರ, ಲೀಲಾ ಕುಂದರ್, ಸುಂದರಿ ಸಾಲ್ಯಾನ್, ವನಜ ಸಾಲ್ಯಾನ್, ಮಾಲತಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೀವ್ರತರ ಅತಿಸಾರ ಭೇದಿ ನಿಯಂತ್ರಣ ಅಭಿಯಾನ

ಉಡುಪಿ, ನ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ...

‘ಮಕ್ಕಳ ರಕ್ಷಣೆಯಲ್ಲಿ ಪೊಲೀಸ್ ಇಲಾಖೆ ಪಾತ್ರ’ -ಒಂದು ದಿನದ ತರಬೇತಿ ಕಾರ್ಯಾಗಾರ

ಉಡುಪಿ, ನ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,...

ಶಾಸ್ತ್ರೀಯ ಶಿಸ್ತು ಜಾನಪದ ಸ್ವಾತಂತ್ರ‍್ಯದಿಂದ ಯಕ್ಷಗಾನಕ್ಕೆ ಜನಮನ್ನಣೆ: ಪ್ರೊ. ಎಂ.ಎಲ್. ಸಾಮಗ

ಉಡುಪಿ, ನ.20: ಸಾಂಸ್ಕೃತಿಕ ವಿಶ್ವ ಮನ್ನಣೆ ಪಡೆಯಲು ರಾಜ್ಯದ ಎಲ್ಲಾ ಭಾಗವು...

ಸರಸ್ವತಿ ವಿದ್ಯಾಲಯ: ಕನ್ನಡ ಸಿರಿ ಕಾರ್ಯಕ್ರಮ

ಗಂಗೊಳ್ಳಿ, ನ.20: ಒಂದು ಭಾಷೆ ಬೆಳೆಯಲು ವಿವಿಧ ಭಾಷೆಗಳ ನಡುವೆ ಸಮನ್ವಯ...
error: Content is protected !!