Home ಸುದ್ಧಿಗಳು ಪ್ರಾದೇಶಿಕ ಕುಂದಾಪುರ: ಜಾನುವಾರು ಕಳವು ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕುಂದಾಪುರ: ಜಾನುವಾರು ಕಳವು ದೃಶ್ಯ ಸಿಸಿಟಿವಿಯಲ್ಲಿ ಸೆರೆ

507
0

ಕುಂದಾಪುರ: ಕರ್ಕುಂಜೆ ಗ್ರಾಮದ ನೇರಳಕಟ್ಟೆ ಎಂಬಲ್ಲಿ ರಸ್ತೆ ಬದಿ ಮಲಗಿದ್ದ ಜಾನುವಾರುಗಳನ್ನು ಬಿಳಿ ಬಣ್ಣದ ಕಾರಿನಲ್ಲಿ ಬಂದು ಕಳವು ಮಾಡಿದ ಘಟನೆ ನಡೆದಿದೆ.

ನೇರಳಕಟ್ಟೆಯ ಕಾಂಪ್ಲೆಕ್ಸ್ ಒಂದರ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಡಿ. 28ರಂದು ಬೆಳಿಗ್ಗೆ 04:20 ಸಮಯಕ್ಕೆ 4 ವ್ಯಕ್ತಿಗಳು ಮಾನಿನಕಟ್ಟೆ ಕಡೆಯಿಂದ ಬಿಳಿ ಬಣ್ಣದ ಕಾರಿನಿಂದ ಬಂದವರು ನೇರಳಕಟ್ಟೆಯ ಕಾಂಪ್ಲೆಕ್ಸ್ ಒಂದರ ಕೆಳಗಡೆ ರಸ್ತೆ ಬದಿ ಮಲಗಿದ್ದ 2 ಜಾನುವಾರುಗಳನ್ನು ಕಳವು ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.