Monday, November 16, 2026
Monday, November 16, 2026

ಹಾವಂಜೆ ವ್ಯಾಪ್ತಿಯ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಹಾವಂಜೆ ವ್ಯಾಪ್ತಿಯ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Date:

ಬ್ರಹ್ಮಾವರ, ನ.15: ಕೆ. ಜಿ. ರೋಡ್ ಪೆರ್ಡೂರು ರಾಜ್ಯ ಹೆದ್ದಾರಿಯ ಹಾವಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೀಳಂಜೆ ಶಾಲೆಯಿಂದ ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಈ ಭಾಗದ ಸಾರ್ವಜನಿಕರ ಬೇಡಿಕೆಯಂತೆ ಲೋಕೋಪಯೋಗಿ ಇಲಾಖೆಯ ಮೂಲಕ ಸುಮಾರು 4.30 ಕೋಟಿ ವೆಚ್ಚದಲ್ಲಿ 1.1 ಕಿಲೋ ಮೀಟರ್ ವರೆಗೆ ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣ, ಅವೈಜ್ಞಾನಿಕವಾಗಿರುವ ರಸ್ತೆಯ ಅಪಾಯಕಾರಿ ತಿರುವು ಹಾಗೂ ಏರಿಳಿತವನ್ನು ಸರಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಪೂರಕವಾಗುವಂತೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಬಿಜೆಪಿ ಶಕ್ತಿ ಕೇಂದ್ರ ಸಂಚಾಲಕರಾದ ಉದಯ ಕೋಟ್ಯಾನ್, ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷರಾದ ಅಜಿತ್ ಗೋಳಿಕಟ್ಟೆ, ಮಾಜಿ ಅಧ್ಯಕ್ಷರಾದ ಆಶಾ ಡಿ ಪೂಜಾರಿ, ಮಾಜಿ ಉಪಾಧ್ಯಕ್ಷರಾದ ಗುರುರಾಜ್ ಕಾರ್ತಿಬೈಲು, ಪಂಚಾಯತ್ ಸದಸ್ಯರಾದ ಸುಜಾತ ಉಮೇಶ್ ಶೆಟ್ಟಿ, ವಾರ್ಡ್ ಅಧ್ಯಕ್ಷರುಗಳಾದ ಸುಂದರ್ ಪೂಜಾರಿ, ಜಗದೀಶ್ ಸನಿಲ್ , ಗಣೇಶ್ ಪೂಜಾರಿ, ವಿಶ್ವನಾಥ್, ಗಣಪತಿ ನಾಯಕ್, ಪ್ರಭಾಕರ ಶೆಟ್ಟಿ, ಸತ್ಯನಾರಾಯಣ ಆಚಾರ್ಯ, ಪ್ರಸಾದ್ ಸುವರ್ಣ, ಜಯಕರ ದಾಸ್, ರಾಜೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಖೇಲೋ ಇಂಡಿಯಾ ಯೂತ್ ಗೇಮ್ಸ್’ನ 8ನೇ ಆವೃತ್ತಿಯ ಲೋಗೋ ಮತ್ತು ಮ್ಯಾಸ್ಕಾಟ್ ಅನಾವರಣ

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಮತ್ತು...

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಮತ್ತೊಮ್ಮೆ ಚಂಡಮಾರುತ ಸಾಧ್ಯತೆ

ನವದೆಹಲಿ, ನ.15: ಆಗ್ನೇಯ ಮತ್ತು ಅದನ್ನು ಹೊಂದಿಕೊಂಡಿರುವ ನೈರುತ್ಯ ಬಂಗಾಲ ಕೊಲ್ಲಿಯಲ್ಲಿ...

ಉಡುಪಿ ಸಂಪೂರ್ಣ ಸಾಕ್ಷರತಾ ಜಿಲ್ಲೆ ಗೌರವಕ್ಕೆ ಜಿಲ್ಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕೊಡುಗೆ ಅಪಾರ: ಯಶ್ಪಾಲ್ ಸುವರ್ಣ

ಉಡುಪಿ, ನ. 15: ವಿಶ್ವದಲ್ಲಿಯೇ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ರಾಷ್ಟ್ರ...
error: Content is protected !!