Tuesday, July 28, 2026
Tuesday, July 28, 2026

ಗಮನ ಸೆಳೆದ ಸಸ್ಯ ಸಂತೆ

ಗಮನ ಸೆಳೆದ ಸಸ್ಯ ಸಂತೆ

Date:

ಉಡುಪಿ: ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ಇಂದಿನಿಂದ ನವೆಂಬರ್ 7 ರ ವರೆಗೆ ನಡೆಯುವ ಸಸ್ಯಸಂತೆ ಕಾರ್ಯಕ್ರಮದಲ್ಲಿ 40 ಕ್ಕೂ ಅಧಿಕ ಜಾತಿಯ ಅಲಂಕಾರಿಕಾ ಸಸ್ಯಗಳು, 15 ಕ್ಕೂ ಅಧಿಕ ಜಾತಿಯ ಹಣ್ಣಿನ ಸಸ್ಯಗಳು, ತೆಂಗು, ಕಾಳು ಮೆಣಸಿನ ಸಸಿಗಳು, 50 ಕ್ಕೂ ಹೆಚ್ಚು ತರಕಾರಿ ಮತ್ತು ಹಣ್ಣಿನ ಬೀಜಗಳ ಮಾರಾಟ ಕೃಷಿ ಮತ್ತು ತೋಟಗಾರಿಕಾ ಆಸಕ್ತರನ್ನು ಗಮನ ಸೆಳೆಯುತ್ತಿದೆ.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಖಾಸಗಿ ನರ್ಸರಿ ಮತ್ತು ಸರ್ಕಾರಿ ನರ್ಸರಿಯಲ್ಲಿ ಬೆಳೆಸಿದ ಸಸ್ಯಗಳು, ಕಸಿ ಗಿಡಗಳು, ನರ್ಸರಿ ಉಪಕರಣಗಳ ಮಾರಾಟ ನಡೆಯುತ್ತಿದೆ.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಉದ್ಘಾಟನೆ ನೆರವೇರಿಸಿದರು

ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ನಗರ ಪ್ರದೇಶದಲ್ಲಿ ಮನೆಯ ಆವರಣದಲ್ಲಿ ಜಾಗದ ಕೊರತೆ ಇದ್ದರೂ ಸಹ ಮನೆಗಳ ಮೇಲ್ಛಾವಣಿಯಲ್ಲಿ ಹೂ ಮತ್ತು ಹಣ್ಣಿನ ಸಸ್ಯಗಳನ್ನು ಬೆಳೆಸಲು ಸಾಧ್ಯವಿದ್ದು, ಈ ಸಸ್ಯಸಂತೆಯ ಮೂಲಕ ಉತ್ತಮ ಸಸಿಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.

ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ, ಗಿರೀಶ್ ಅಂಚನ್, ಪ್ರಭಾಕರ ಪೂಜಾರಿ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ, ಸಹಾಯಕ ನಿರ್ದೇಶಕ ಗುರುಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಶ್ರೀನಿವಾಸ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನರೇಂದ್ರ ಎಸ್ ಗಂಗೊಳ್ಳಿಗೆ ಕಾವ್ಯಶ್ರೀ ಪ್ರಶಸ್ತಿ

ಗಂಗೊಳ್ಳಿ, ಜು.27: ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ ವತಿಯಿಂದ ಕೊಡಲ್ಪಡುವ...

ಕಾಮನ್‌ವೆಲ್ತ್ ಕ್ರೀಡಾಕೂಟ: ಮುಂದುವರಿದ ಭಾರತದ ಪದಕ ಬೇಟೆ

ಯು.ಬಿ.ಎನ್.ಡಿ., ಜು.27: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್ ಜ್ಞಾನೇಶ್ವರಿ...

ಸಂಸ್ಕೃತ ಪ್ರತಿಭಾ ಪುರಸ್ಕಾರ

ಉಡುಪಿ, ಜು.27: ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಶೀರೂರು...
error: Content is protected !!