Wednesday, October 21, 2026
Wednesday, October 21, 2026

ವಿವಿಧ ಸಂಘಟನೆಗಳಿಂದ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಸ್ವಚ್ಛತಾ ಕಾರ್ಯ

ವಿವಿಧ ಸಂಘಟನೆಗಳಿಂದ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಸ್ವಚ್ಛತಾ ಕಾರ್ಯ

Date:

ಕೋಟ, ಅ.21: ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ರೋಟರಿ ಸಮುದಾಯದಳ ಕೋಟೇಶ್ವರ ಇವರ ಸಹಭಾಗಿತ್ವದಡಿ ೩೨೧ನೇ ಪರಿಸರಸ್ನೇಹಿ ಭಾನುವಾರದ ಪ್ರಯುಕ್ತ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ದೇಗುಲ ಸ್ವಚ್ಛತಾ ಕಾರ್ಯಕ್ಕೆ ದೇಗುಲದ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ ಚಾಲನೆ ನೀಡಿದರು. ಸ್ವಚ್ಛತಾ ಕಾರ್ಯದ ಅಂಗವಾಗಿ ದೇಗುಲದ ವ್ಯವಸ್ಥಾಪಕ ನಟೇಶ್ ಕಾರಂತ ಸ್ವಚ್ಛಾಗೃಹಿ ಪಂಚವರ್ಣ ಸಂಘಟನೆ ಪರವಾಗಿ ಲಲಿತಾ ಪೂಜಾರಿ ಹಾಗೂ ರೋಟರಿ ಸಮುದಾಯದಳದ ಪರವಾಗಿ ಸುಪ್ರಿತಾ ಪುರಾಣಿಕ್ ಇವರುಗಳನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು. ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ರೋಟರಿ ಸಮುದಾಯ ದಳದ ಪ್ರಮುಖರು ಉಪಸ್ಥಿತರಿದ್ದರು.

ನಡಿಗೆಗಾಗಿ ಪಾದರಕ್ಷೆ ಅಭಿಯಾನ: ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಮಾಜಸೇವಕ ಅವಿನಾಶ್ ಕಾಮತ್ ನೇತೃತ್ವದ ನಡಿಗೆ ಹಳೆಯ ಪಾದರಕ್ಷೆ ಅಭಿಯಾನಕ್ಕೆ ಪಂಚವರ್ಣ ಸಂಘಟನೆ ಹಾಗೂ ರೋಟರಿ ಸಮುದಾಯ ಕೋಟೇಶ್ವರ ಕೈಜೋಡಿಸಿದ್ದು ಆನೆಗುಡ್ಡೆ ಶ್ರೀವಿನಾಯಕ ದೇಗುಲದಲ್ಲಿ ಹಳೆಯ ಪಾದರಕ್ಷೆ ತೆರವುಗೊಳಿಸುವ ಮೂಲಕ ಚಾಲನೆ ನೀಡಲಾಯಿತು. ಸಂಘದ ಪ್ರಮುಖರಾದ ರವೀಂದ್ರ ಕೋಟ ಪರಿಸರಕ್ಕೆ ಮಾಲಿನ್ಯವಾಗುವ ಹಳೆಯ ಪಾದರಕ್ಷೆ ಎಸೆಯದೆ ಅವುಗಳನ್ನು ಕೋಟದ ಪಂಚವರ್ಣ ಸಂಘಟನೆಯ ಕಛೇರಿಗೆ ಅಥವಾ ರೋಟರಿ ಸಮುದಾಯದಳ ಕೋಟೇಶ್ವರ ಇವರ ಬಳಿ ನೀಡಿ ಎಂಬ ಸಂದೇಶವನ್ನು ನೀಡಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಐತಿಹಾಸಿಕ ಜಂಬೂ ಸವಾರಿ ಸಂಪನ್ನ

ಮೈಸೂರು, ಅ.21: ಮೈಸೂರು ದಸರಾ ಮಹೋತ್ಸವದ ವೈಭವದ ಪ್ರತೀಕವಾದ ಜಂಬೂಸವಾರಿಗೆ ಅರಮನೆ...

ಬನ್ನಿ ಬಂಗಾರವಾಗಲಿ, ನಾಡು ಸಮೃದ್ಧಿಯಾಗಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಮೈಸೂರು, ಅ.21: ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಸಂಭ್ರಮದ ಅಂಗವಾಗಿ,...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಚಂಡಿಕಾಯಾಗ, ಘಂಟಾನಾದ ಸೇವೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಕಾಪು, ಅ.21: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ...
error: Content is protected !!