Tuesday, October 20, 2026
Tuesday, October 20, 2026

ಇರಾ- ಉಚಿತ ವೈದ್ಯಕೀಯ ಶಿಬಿರ

ಇರಾ- ಉಚಿತ ವೈದ್ಯಕೀಯ ಶಿಬಿರ

Date:

ಬಂಟ್ವಾಳ: ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್ (ರಿ.) ಗಾಂಧಿನಗರ, ಮಂಗಳೂರು ಇವರ ಆಶ್ರಯದಲ್ಲಿ, ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ (ರಿ.) ಕುಂಡಾವು, ಇರಾ ಗ್ರಾಮ ಪಂಚಾಯತ್, ಯುವಕ ಮಂಡಲ(ರಿ.) ಇರಾ ಇವರ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಹಾಗೂ ದಂತ, ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಆದಿತ್ಯವಾರ ದ.ಕ. ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇರಾ ಇಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮೊಕ್ತೇಸರರಾದ ವೈ.ಬಿ ಸುಂದರ್, ಇರಾ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರೂ, ಹಾಲಿ ಸದಸ್ಯರಾಗಿರುವ ಅಬ್ದುಲ್ ರಝಾಕ್ ಕುಕ್ಕಾಜೆ ಮಾತನಾಡಿ, ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಹಾಗೂ ಯುವಕ ಮಂಡಲದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಸತ್ಯಸಾಯಿ ಸೇವಾ ಸಂಸ್ಥೆಯ ರಾಜ್ಯ ಪದಾಧಿಕಾರಿಗಳಾದ ಚಂದ್ರಶೇಖರ್ ನಾಯಕ್, ನಿರಂಜನ್ ಹೆಬ್ಬಾರ್, ಕಲ್ಲಾಡಿ ವಿಠ್ಠಲ ಶೆಟ್ಟಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಜಯರಾಮ್ ಪೂಜಾರಿ ಸೂತ್ರಬೈಲು, ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಮೊಯ್ದಿನ್ ಕುಂಞ, ಇರಾ ಶಾಲೆಯ ಮುಖ್ಯ ಶಿಕ್ಷಕಿ ಸೋನಿತ, ಅಧ್ಯಾಪಕ ಮಹಮ್ಮದ್, ಯುವಕ ಮಂಡಲ(ರಿ.) ಇರಾ ಇದರ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ ಇರಾ, ಯನೆಪೊಯ ವೈದ್ಯಕೀಯ ಸಂಸ್ಥೆಯ ಡಾ. ಅಫ್ರೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತ್ಯಸಾಯಿ ಸೇವಾ ಟ್ರಸ್ಟ್ ನ ಸದಸ್ಯರಾದ ದೇವಾನಂದ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಉಡುಪಿ, ಅ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಅ. 20: ಉಡುಪಿ ನಗರ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹಣೆಯಲ್ಲಿ ವ್ಯತ್ಯಯ

ಉಡುಪಿ, ಅ. 20: ನವರಾತ್ರಿ ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 20...

ಉಚ್ಚಿಲ ದಸರಾ ಶೋಭಾಯಾತ್ರೆ: ವಾಹನ ಸಂಚಾರಕ್ಕೆ ಬದಲಿ ಮಾರ್ಗ

ಉಡುಪಿ, ಅ.20: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಿರುವ ಉಡುಪಿ-ಉಚ್ಚಿಲ ದಸರಾ...

ನವರಾತ್ರಿ ಮಹೋತ್ಸವ

ಪೀಠಿಕೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶರತ್ಕಾಲದ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ...
error: Content is protected !!