Saturday, November 14, 2026
Saturday, November 14, 2026

ಶಿಕ್ಷಣ-ಕ್ರೀಡೆ-ಸಾಂಸ್ಕೃತಿಕ-ಶಿಸ್ತು ಒಳಗೊಂಡ ಪರಿಪೂರ್ಣ ಸಂಸ್ಥೆ ಜ್ಞಾನಸುಧಾ: ಸೀತಾನದಿ ವಿಠಲ ಶೆಟ್ಟಿ

ಶಿಕ್ಷಣ-ಕ್ರೀಡೆ-ಸಾಂಸ್ಕೃತಿಕ-ಶಿಸ್ತು ಒಳಗೊಂಡ ಪರಿಪೂರ್ಣ ಸಂಸ್ಥೆ ಜ್ಞಾನಸುಧಾ: ಸೀತಾನದಿ ವಿಠಲ ಶೆಟ್ಟಿ

Date:

ಗಣಿತನಗರ, ನ.14: ವ್ಯಕ್ತಿ ಸದೃಢನಾಗಿರಲು ಕ್ರೀಡೆಯು ಬಹುಮುಖ್ಯ ಪಾತ್ರವಹಿಸುತ್ತದೆ. ದೈಹಿಕ ಶಕ್ತಿಯೇ ದೇಶದ ಶಕ್ತಿಯಾದಾಗ ಆರೋಗ್ಯಶಾಲಿ ಭಾರತ ನಿರ್ಮಾಣವಾಗಲು ಸಾಧ್ಯ. ಜ್ಞಾನಸುಧಾ ಕೇವಲ ಶಿಕ್ಷಣವನ್ನು ಮಾತ್ರ ನೀಡುತ್ತಿದೆ ಎಂದು ಭಾವಿಸಿದ್ದೆ. ಆದರೆ ಇಲ್ಲಿನ ಸದಾ ಹಸಿರು-ಹಸಿರಾಗಿ ನಳನಳಿಸುತ್ತಿರುವ ಗಣಿತನಗರ ಕ್ರೀಡಾಂಗಣ ರಾಜ್ಯ-ರಾಷ್ಟ್ರಮಟ್ಟದ ಬೇರೆ-ಬೇರೆ ಮಾದರಿಯ ಕ್ರೀಡಾಂಗಣಕ್ಕಿಂತಲೂ ಅತ್ಯುತ್ತಮವಾಗಿದೆ. ಮೂವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ, 26 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಳ್ಳುವ ಮೂಲಕ ಶಿಕ್ಷಣ-ಕ್ರೀಡೆ-ಸಾಂಸ್ಕೃತಿಕ-ಶಿಸ್ತು ಒಳಗೊಂಡ ಪರಿಪೂರ್ಣ ಸಂಸ್ಥೆ ಜ್ಞಾನಸುಧಾ ಎಂದು ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಹೆರಾಡಿ- ಬಾರ್ಕೂರಿನ ಕಟಿಲೇಶ್ವರಿ ಡೆವಲಪರ್ಸ್ನ ಎಂ.ಡಿ ಆಗಿರುವ ಪ್ರಕಾಶ್ ಶೆಟ್ಟಿಯವರು ಮಾತನಾಡಿ, ಪಂದ್ಯಾಟದಲ್ಲಿ ಸೋಲು-ಗೆಲುವುಗಳನ್ನು ಪರಿಗಣಿಸದೆ ಕ್ರೀಡೆ ಗೆಲ್ಲಬೇಕು ಎಂಬ ಮನೋಭಾವ ಪ್ರತಿಯೊಬ್ಬನದ್ದಾಗಿರಬೇಕು. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಮೌಲ್ಯಸುದಾ, ದೇಶಸುಧಾ, ಸಿಬ್ಬಂದಿಗಳ ಪೋಷಕರಿಗೆ ಪಾದಪೂಜೆ, ಎಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದೊಂದಿಗೆ ಪ್ರೋತ್ಸಾಹ ಧನ ವಿತರಣೆ ನಡೆಸುವ ಮೂಲಕ ಸ್ಫೂರ್ತಿಯನ್ನು ತುಂಬುತ್ತಿರುವ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್ ವಹಿಸಿದ್ದರು.

ಬಿಸ್‌ನೆಸ್ ಪೈರ್ ಉದ್ಘಾಟನೆ: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಸಂಸ್ಥೆಯ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳೇ ಮುನ್ನಡೆಸುವ ರ‍್ನ್ಲರ‍್ನ್ ಬಿಸ್‌ನೆಸ್ ಪೈರನ್ನು ಉದ್ಘಾಟಿಸಲಾಯಿತು. ಇದೇ ಸಂಧರ್ಭ ಉಪಪ್ರಾಂಶುಪಾಲರುಗಳಾದ ಸಾಹಿತ್ಯ, ಉಷಾ ರಾವ್ ಯು ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲಮಾದ್ಯಮ ಶಾಲೆ-ಪ್ರೌಢಶಾಲೆಯ ಉಪಪ್ರಾಂಶುಪಾಲೆ ವಾಣಿ ಕೆ., ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು, ಡೀನ್ ಸ್ಟೂಡೆಂಟ್ ಅಫೈರ್ ಶಕುಂತಳಾ ಎಂ ಸುವರ್ಣ, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಂಯೋಜಕ ಸಂದೀಪಾ, ವ್ಯವಹಾರ ಅಧ್ಯಯನದ ಉಪನ್ಯಾಸಕ ಶೈಲೇಶ್ ಶೆಟ್ಟಿ ಹಾಗೂ ಸಂಸ್ಥೆಯ ಹಿತೈಷಿಗಳಾದ ತ್ರಿವಿಕ್ರಮ ಕಿಣಿ ಮತ್ತು ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.

ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿ, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನೆಟ್ ಬಾಲ್ ಪಂದ್ಯಾಟದಲ್ಲಿ ಸರಸ್ವತಿ ವಿದ್ಯಾಲಯಕ್ಕೆ ಅವಳಿ ಪ್ರಶಸ್ತಿ

ಉಡುಪಿ, ನ.14: ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಮತ್ತು ಮೂಕಾಂಬಿಕಾ...

ರಾಜ್ಯದ ಅಭಿವೃದ್ಧಿಗೆ ತುಳುನಾಡಿನ ಕೊಡುಗೆ ಮಹತ್ತರ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ, ನ.14: ಜನರನ್ನು ತಲುಪಲು ಆ ಪ್ರದೇಶದ ಭಾಷೆಯ ಕಲಿಕೆ ಅತೀ...

ಪಶು ಔಷಧಿ ವಿಕ್ರಯ ಕೇಂದ್ರಗಳ ಪ್ರಾರಂಭಕ್ಕೆ ಅರ್ಜಿ ಆಹ್ವಾನ

ಉಡುಪಿ, ನ.14: ಕೇಂದ್ರ ಸರ್ಕಾರದ ಆಂಊಆ ಇಲಾಖೆಯ ವತಿಯಿಂದ ಪಶುಪಾಲಕರಿಗೆ ಕೈಗೆಟುಕುವ...

ಸ್ಥಿರಾಸ್ತಿಗಳ ಪರಿಷ್ಕತ ಮಾರುಕಟ್ಟೆ ದರ ಪ್ರಕಟ: ಆಕ್ಷೇಪಣೆ ಆಹ್ವಾನ

ಉಡುಪಿ, ನ.14: ಉಡುಪಿ ತಾಲೂಕು ವ್ಯಾಪ್ತಿಯ ಎಲ್ಲಾ ಸ್ಥಿರಾಸ್ತಿಗಳ ಮಾರುಕಟ್ಟೆ ದರಗಳನ್ನು...
error: Content is protected !!