Sunday, October 11, 2026
Sunday, October 11, 2026

ವಿಶ್ವ ಕೊಂಕಣಿ ಕೇಂದ್ರ: ಮಕ್ಕಳ ಬಾಲರಂಗ 3 ದಿನಗಳ ನಾಟಕ ತರಬೇತಿ ಶಿಬಿರ ಉದ್ಘಾಟನೆ

ವಿಶ್ವ ಕೊಂಕಣಿ ಕೇಂದ್ರ: ಮಕ್ಕಳ ಬಾಲರಂಗ 3 ದಿನಗಳ ನಾಟಕ ತರಬೇತಿ ಶಿಬಿರ ಉದ್ಘಾಟನೆ

Date:

ಮಂಗಳೂರು, ಅ.11: ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ‘ವರ್ಧನಿ’ ಪ್ರಾಯೋಜಕ್ತದಲ್ಲಿ ಮತ್ತು ಸಾಧನಾ ಬಳಗ ಸಹಕಾರದೊಂದಿಗೆ ಆಯೋಜಿಸಿದ “ಬಾಲರಂಗ” ಮಕ್ಕಳಿಗೆ ನಾಟಕ ತರಬೇತಿ ನೀಡುವ 3 ದಿವಸಗಳ ಉಚಿತ ಶಿಬಿರವನ್ನು ಮಂಗಳೂರು ಎಮ್ ಆರ್ ಪಿ ಎಲ್ ನ ನಿವೃತ್ತ ಅಧಿಕಾರಿ ಡಾ. ನರೇಶ್ ರಾಮದಾಸ ಕಿಣಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಗೀತ, ನಾಟಕ, ನೃತ್ಯ, ರಂಗ ಪರಿಕರ ತಯಾರಿ, ಮುಖವಾಡ ತಯಾರಿ, ರಂಗ ಸಂಗೀತ ಹೀಗೆ ವಿವಿಧ ಕೌಶಲ್ಯ ಕಲೆಗಳ ಅಭ್ಯಾಸವು ಪರೋಕ್ಷವಾಗಿ ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗುವುದು ಮತ್ತು ಈ ಬಗ್ಗೆಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ತರಬೇತಿ ನೀಡುವ ಕಾರ್ಯ ವಿಶ್ವ ಕೊಂಕಣಿ ಕೇಂದ್ರವು ಕೈಗೆತ್ತಿಕೊಂಡಿರುವುದು ತುಂಬಾ ಉಪಯುಕ್ತವಾಗಿದೆ ಶಿಬಿರದ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ ಆರ್ ಭಟ್ ಸ್ವಾಗತಿಸಿದರು. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ವಿಲಿಯಂ ಡಿಸೋಜಾ, ಡಿ ರಮೇಶ್ ನಾಯಕ್, ಹೆಸರಾಂತ ನಾಟಕ ತರಬೇತುದಾರ ಜಗನ್ ಪವಾರ, ಸತೀಶ ಪಿ ನೀನಾಸಂ, ಅರುಣ್ ಪ್ರಕಾಶ ನಾಯಕ, ಅಶೋಕ ಕಾಮತ್, ಪುಷ್ಪಲತಾ ಭಟ್ ಹಾಗೂ ಶಿಬಿರ ಕಾರ್ಯಕ್ರಮದ ಪ್ರಾಯೋಜಕಿ ವರ್ಧನಿಯ ಉಷಾ ನಂದಗೋಪಾಲ ಶೆಣೈ ಕಾಯ್ರಕ್ರಮದಲ್ಲಿ ಉಪಸ್ಥಿತರಿದ್ದರು. 3 ದಿನಗಳ ಸನಿವಾಸದ ಈ ವಿಶೇಷ ಶಿಬಿರದಲ್ಲಿ ಸುಮಾರು 50 ಮಕ್ಕಳು ಉಚಿತ ಊಟೋಪಚಾರ, ವಸತಿ ಸೌಲಭ್ಯದೊಂದಿಗೆ ನಾಟಕದ ವಿವಿಧ ಕಲೆಗಳ ತರಬೇತಿ ಪಡೆಯುವರು ಎಂದು ಸಾಧನಾ ಬಳಗದ ಮುಖ್ಯಸ್ಥ ಪ್ರಕಾಶ ಶೆಣೈ ಶಿಬಿರದ ಸಂಕ್ಷಿಪ್ತ ವಿವರ ನೀಡಿದರು. ಕೇಂದ್ರದ ಉಪಾಧ್ಯಕ್ಷರಾದ ಡಿ ರಮೇಶ್ ನಾಯಕ್ ವಂದಿಸಿದರು. ಕೇಂದ್ರದ ಲಕ್ಷ್ಮೀ ಕಿಣಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸುಚಿತ್ರಾ ಎಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಶೈವಿಕಾ, ಅನ್ವಿತಾ, ಪ್ರಜಕ್ತಾ ಪ್ರಾರ್ಥಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಾಹೆ ವತಿಯಿಂದ ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ ಮೂಲಕ ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನಾಚರಣೆ

ಮಣಿಪಾಲ, ಅ.11: ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ...

ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರರಿಗೆ ಹಾಗೂ ಪರಿಚಾರಕರಿಗೆ ಗೌರವ ಸನ್ಮಾನ

ಕಟಪಾಡಿ, ಅ.11: ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ಎಸ್.ಸಿ ಮೋರ್ಚಾದ...

ಪೆರ್ಣಂಕಿಲ ಜಡ್ಡುಕೆರೆ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಕಾಪು, ಅ.11: ಕೋಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಣಂಕಿಲ ಜಡ್ಡುಕೆರೆ ರಸ್ತೆ...

ಕೊಡವೂರು ಲಕ್ಷದೀಪೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಡವೂರು, ಅ.11: ಮಹಾತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯುವ ಲಕ್ಷದೀಪೋತ್ಸವದ...
error: Content is protected !!