Sunday, October 18, 2026
Sunday, October 18, 2026

ಕೊಂಕಣಿ ಕವಿತೆ ವಾಚನ ಹಾಗೂ ಕವಿತೆಯ ರಚನಾ ಮಾಹಿತಿ ಕಾರ್ಯಾಗಾರ

ಕೊಂಕಣಿ ಕವಿತೆ ವಾಚನ ಹಾಗೂ ಕವಿತೆಯ ರಚನಾ ಮಾಹಿತಿ ಕಾರ್ಯಾಗಾರ

Date:

ಮಂಗಳೂರು, ಜೂ.27: ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ.) , ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ.) ಹಾಗೂ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ವಸತಿ ಸಹಿತ ಚಟುವಟಿಕೆ ಆಧಾರಿತ ‘ಪ್ರಗತಿ ಸ್ಪೂರ್ತಿ ಮತ್ತು ಉನ್ನತಿ–2026’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ 2 ನೆಯ ದಿನದಂದು ನವದೆಹಲಿ ಕೇಂದ್ರ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಂಚಾಲಕ, ಹೆಸರಾಂತ ಕೊಂಕಣಿ ಸಾಹಿತಿ ಕವಿತಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಹಾಗೂ ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿ ಮೆಲ್ವಿನ್ ರೊಡ್ರಿಗಸ್ ಇವರು ನಮ್ಮ ಮನಸ್ಸಿನಲ್ಲಿ ಮೂಡೂವ ವಿಚಾರಗಳನ್ನು ಅಳವಡಿಸಿ ಹೇಗೆ ಕವಿತೆಗಳ ರಚನೆ ಮಾಡಿ ವಾಚಿಸಬೇಕು ಎಂಬುವುದರ ಬಗ್ಗೆ, ತಮ್ಮ ಜೀವನದಲ್ಲಿ ಜರುಗಿದ ಘಟನೆಗಳ ಉದಾಹರಣೆಗಳನ್ನು ನೀಡುತ್ತಾ ಶಿಬಿರಾರ್ಥಿಗಳೊಂದಿಗೆ ಅನುಭವಗಳನ್ನು ಹಂಚಿಕೊಂಡರು.

ವಿದ್ಯಾರ್ಥಿಗಳ ಸೃಜನಶೀಲತೆಗೆ ಹೊಸ ದಿಕ್ಕನ್ನು ತೋರಿಸುವಂತಹ ಮನಸ್ಸಿನ ಭಾವನೆಗಳಿಗೆ ಜೀವ ತುಂಬುವ ಕಲೆಗಳನ್ನು ಹಾಗೂ ಕಲ್ಪನೆ, ಅನುಭವ ಮತ್ತು ಅಭಿವ್ಯಕ್ತಿಯನ್ನು ಸುಂದರ ಕಾವ್ಯವಾಗಿ ರೂಪಿಸುವ ಸಾಮರ್ಥ್ಯವನ್ನು ತಿಳಿಸಿದರು. ನಮ್ಮೊಳಗಿನ ಕವಿಯನ್ನು ಜಾಗೃತಗೊಳಿಸಿ ಪದಗಳ ಮೂಲಕ ಹೊಸ ಲೋಕವನ್ನು ಸೃಸ್ಟಿಸಿ ಆ ಸಂಭ್ರಮವನ್ನು ಅನುಭವಿಸುವ ಕಾವ್ಯದ ಸುಂದರ ಪಯಣವನ್ನು ಮನ ಮುಟ್ಟುವಂತೆ ವಿವರಿಸಿದರು. ಒಂದು ಉತ್ತಮ ಕವಿತೆ ಸಾವಿರ ಮಾತುಗಳಿಗಿಂತ ಹೆಚ್ಚು ಹೃದಯವನ್ನು ಸ್ಪರ್ಷಿಸುತ್ತದೆ. ಆದ್ದರಿಂದ ಗದ್ಯಗಳಿಂದ ಸಂಕುಚಿತಗೊಳಿಸಿ ಮನಸ್ಸಿನ ಭಾವಗಳೊಂದಿಗೆ ಹೃದಯ ಗೆಲ್ಲುವ ಸಾಲುಗಳಂತೆ ಕವಿತೆಯನ್ನು ರಚಿಸಿ ವಾಚಿಸುವಂತೆ ಶಿಬಿರಾರ್ಥಿಗಳನ್ನು ಪ್ರೇರೇಪಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ. ರಮೇಶ ನಾಯಕ್ ಮೈರಾ, ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ್ ಪೈ, ಸುಚಿತ್ರಾ ರಮೇಶ್ ನಾಯಕ್, ಡಾ. ವಿಜಯಲಕ್ಶ್ಮಿ ನಾಯಕ್, ಲಕ್ಷ್ಮಿ ಕಿಣಿ, ರವೀಂದ್ರ ನಾಯಕ್ ಕುಂಟಲ್ಪಾಡಿ, ಮತ್ತು ರಾಮಕೃಷ್ಣ ಪ್ರಭು ಮಾರಿಬೆಟ್ಟು, ಸಂದೀಪ್ ಪ್ರಭು ವಗ್ಗ, ಶಿವರಾಮ ಪ್ರಭು ಮಾರಿಬೆಟ್ಟು ಉಪಸ್ಥಿತರಿದ್ದರು. ಸ್ವಾತಿ ನಾಯಕ್ ಬಂಗ್ಲೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಸಾಧನ್ ಪ್ರಭು ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!